ನೇಪಾಳದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ: ಬಿಹಾರದಲ್ಲಿ ಉಕ್ಕಿ ಹರಿಯುತ್ತಿದೆ ಗಂಡಕ್ ನದಿ
Nepal Floods: ನೇಪಾಳದಲ್ಲಿ ಭಾರಿ ಮಳೆಯಾದ ನಂತರ ವಾಲ್ಮೀಕಿನಗರ ಬ್ಯಾರೇಜ್‌ನಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗಿದೆ. ಇದರಿಂದ ಬಾಗಹಾ-1ರ ಖೈರತ್ವಾ ಮತ್ತು ಗಂಡಕ್‌ನ ಎಡದಂಡೆಯಲ್ಲಿರುವ ಬೈರಿಯಾದ ಫುಲಿಯಾಖಾಡ್‌ನಲ್ಲಿರುವ ಚಂಪಾರಣ್ ಒಡ್ಡಿನ ಎರಡು ಭಾಗಗಳು ಹಾನಿಗೊಳಗಾಗಿವೆ. ಈಗಾಗಲೇ ಭಾರಿ ಪ್ರವಾಹದಿಂದ ನಲುಗಿಹೋಗಿರುವ ಬಿಹಾರದಲ್ಲಿ ವ್ಯಾಪಕ ಪ್ರವಾಹದ ಭೀತಿ ಎದುರಾಗಿದೆ.
ಬಿಹಾರದಲ್ಲಿ ಉಕ್ಕಿ ಹರಿದ ಗಂಡಕ್ ನದಿ -
ಪಟ್ನಾ, ಸೆ. 29: ನೇಪಾಳದಲ್ಲಿ ಸುರಿದ ಭಾರಿ ಮಳೆಯಿಂದ ಬಿಹಾರದಲ್ಲಿ ಗಂಡಕ್ ನದಿ (Gandak River) ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ನೀರಿನ ಪ್ರಮಾಣವು ದಾಖಲೆಯ ಮಟ್ಟಕ್ಕೆ ಏರಿದ್ದು, ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಒಡ್ಡುಗಳಿಗೆ ಹಾನಿಯಾಗಿದೆ ಮತ್ತು ಈಗಾಗಲೇ ಭಾರಿ ಪ್ರವಾಹದಿಂದ ನಲುಗಿಹೋಗಿರುವ ಬಿಹಾರದಲ್ಲಿ (Bihar) ಮತ್ತಷ್ಟು ನೆರೆಯ ಭೀತಿ ಎದುರಾಗಿದೆ. ಬಗಾಹಾದಲ್ಲಿ ಗಂಡಕ್ ನದಿಯ ನೀರಿನ ಮಟ್ಟವು ದಾಖಲೆಯ 91.25 ಮೀಟರ್ ತಲುಪಿದೆ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ. ಇದು 2024ರಲ್ಲಿ ದಾಖಲಾದ ಪ್ರಮಾಣಕ್ಕಿಂತ 0.35 ಮೀಟರ್ ಹೆಚ್ಚು.
ನೇಪಾಳದಲ್ಲಿ ಭಾರಿ ಮಳೆಯಾದ ನಂತರ ವಾಲ್ಮೀಕಿನಗರ ಬ್ಯಾರೇಜ್‌ನಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದ್ದರಿಂದ, ಬಾಗಹಾ-1ರ ಖೈರತ್ವಾ ಮತ್ತು ಗಂಡಕ್‌ನ ಎಡದಂಡೆಯಲ್ಲಿರುವ ಬೈರಿಯಾದ ಫುಲಿಯಾಖಾಡ್‌ನಲ್ಲಿರುವ ಚಂಪಾರಣ್ ಒಡ್ಡಿನ ಎರಡು ಭಾಗಗಳು ಹಾನಿಗೊಳಗಾಗಿವೆ. ಇದುವರೆಗೆ 169 ಸೋರಿಕೆ ಸ್ಥಳಗಳನ್ನು ದುರಸ್ತಿ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ನೇಪಾಳದಲ್ಲಿ ಮತ್ತೆ ಪ್ರವಾಹ:
🇳🇵 Disaster in Nepal Countinues...⚠️🚨
— Indian Observer (@ag_Journalist) September 29, 2026
"Due to continuous heavy rainfall in Nepal, conditions for floods and landslides have once again emerged. In Chitwan, the water level of the Narayani River has risen well above the danger mark.
So far, at least 34 people have died and 42… https://t.co/mGPYLvrj2j pic.twitter.com/aaoPCsKGAC
ಸೋಮವಾರ (ಸೆಪ್ಟೆಂಬರ್ 28) ಬೆಳಗ್ಗೆ 6 ಗಂಟೆಗೆ ವಾಲ್ಮೀಕಿನಗರ ಬ್ಯಾರೇಜ್ ಮೂಲಕ 5,43,500 ಕ್ಯೂಸೆಕ್ ನೀರು ಹೊರಬಿಡಲಾಗಿದೆ. 13 ಗಂಟೆಗಳ ಕಾಲ 5 ಲಕ್ಷ ಕ್ಯೂಸೆಕ್‌ಗಳಿಗಿಂತ ಹೆಚ್ಚಿನ ನೀರು ಮತ್ತು 32 ಗಂಟೆಗಳ ಕಾಲ 4 ಲಕ್ಷ ಕ್ಯೂಸೆಕ್‌ಗಳಿಗಿಂತ ಹೆಚ್ಚಿನ ನೀರು ಹೊರ ಬಿಡಲಾಗಿತ್ತು.
ನೇಪಾಳದಲ್ಲಿ ಮತ್ತೆ ಮಳೆ ಆರ್ಭಟ: ಹೆಚ್ಚಾದ ಪ್ರವಾಹ, ಭೂಕುಸಿತದ ಭೀತಿ
ವಾಲ್ಮೀಕಿನಗರದ ಗಂಡಕ್ ಬ್ಯಾರೇಜ್‌ನಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ 1,86,200 ಕ್ಯೂಸೆಕ್‌ಗಳಷ್ಟಿದ್ದ ನೀರಿನ ಹೊರಹರಿವು ಸೋಮವಾರ ಬೆಳಗ್ಗೆ 8 ಗಂಟೆಗೆ 1,91,200 ಕ್ಯೂಸೆಕ್‌ಗಳಷ್ಟಿತ್ತು. ಬಿರ್ಪುರದ ಕೋಸಿ ಬ್ಯಾರೇಜ್‌ನಲ್ಲಿ ಬೆಳಗ್ಗೆ 10 ಗಂಟೆಗೆ 1,20,055 ಕ್ಯೂಸೆಕ್ ಮತ್ತು ಇಂದ್ರಪುರಿಯ ಸೋನ್ ಬ್ಯಾರೇಜ್‌ನಲ್ಲಿ 1,51,116 ಕ್ಯೂಸೆಕ್‌ಗಳಷ್ಟಿತ್ತು ಎಂದು ಇಲಾಖೆ ತಿಳಿಸಿದೆ.
ಛತ್ತೀಸ್‌ಗಢದಲ್ಲಿ ಖರುನ್ ನದಿ ಉಕ್ಕಿ ಹರಿದು ಹಲವು ಗ್ರಾಮಗಳು ಜಲಾವೃತ
24 ಗಂಟೆಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಛತ್ತೀಸ್‌ಗಢದ ಹಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಯ್‌ಪುರ ಮತ್ತು ದುರ್ಗ್ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಖರುನ್ ನದಿಯ ನೀರಿನ ಮಟ್ಟ ಏರಿಕೆಯಾಗಿ, ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿತ್ತು.
ನಿರಂತರ ಮಳೆಯಿಂದಾಗಿ ನದಿಗಳು ಹಾಗೂ ಜಲಮೂಲಗಳು ತುಂಬಿ ಹರಿಯುತ್ತಿವೆ. ಖರುನ್ ನದಿಯ ನೀರಿನ ಮಟ್ಟ ಏರಿಕೆಯಾಗಿರುವ ಪರಿಣಾಮ ನದಿಪಾತ್ರದ ಹಲವು ಗ್ರಾಮಗಳ ರಸ್ತೆಗಳು ಜಲಾವೃತವಾಗಿದ್ದು, ಜನರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ.
ನೀರಿನ ಮಟ್ಟ ಏರಿಕೆಯಾದ ಪರಿಣಾಮ ಮಹಾದೇವ ಘಾಟ್ ಮೂಲಕ ರಾಯ್‌ಪುರದಿಂದ ಪಾಟಣ ಹಾಗೂ ದುರ್ಗ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನಲ್ಲಿ ಮುಳುಗಿತು. ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿ, ಪ್ರಯಾಣಿಕರು ಪರದಾಡುವಂತಾಯಿತು.