ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gangster Lakhvinder Kumar: ಬಿಷ್ಣೋಯ್ ಗ್ಯಾಂಗ್ ಜೊತೆ ನಂಟು- ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಅಮೆರಿಕದಿಂದ ಗಡಿಪಾರು

Bishnoi Gang: ಸುಲಿಗೆ, ಬೆದರಿಕೆ, ಕೊಲೆ ಯತ್ನ, ದರೋಡೆ, ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪ ಲಖ್ವಿಂದರ್ ಕುಮಾರ್ ನನ್ನು ಹರಿಯಾಣ ಪೊಲೀಸರು ನವದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಅಮೆರಿಕದಿಂದ ಗಡಿಪಾರಾದ ಬಳಿಕ ಆತ ದೆಹಲಿಗೆ ಆಗಮಿಸಿದ್ದನು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಲಖ್ವಿಂದರ್ ಕುಮಾರ್ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.

ಲಖ್ವಿಂದರ್ ಕುಮಾರ್ ಅಮೆರಿಕದಿಂದ ಗಡಿಪಾರು

-

ನವದೆಹಲಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi gang) ಜೊತೆ ಸಂಬಂಧ ಹೊಂದಿದ್ದ ದರೋಡೆಕೋರ ಲಖ್ವಿಂದರ್ ಕುಮಾರ್ (Gangster Lakhvinder Kumar) ನನ್ನು ಅಮೆರಿಕದಿಂದ (United States) ಗಡಿಪಾರು ಮಾಡಲಾಗಿದೆ. ಅಲ್ಲಿಂದ ಗಡಿಪಾರಾದ (Deport) ಬಳಿಕ ದೆಹಲಿಗೆ (Delhi) ಆಗಮಿಸಿದ ಆತನನ್ನು ಹರಿಯಾಣ ಪೊಲೀಸರು (Haryana Police) ವಶಕ್ಕೆ ಪಡೆದಿದ್ದಾರೆ. ಸುಲಿಗೆ, ಬೆದರಿಕೆ, ಕೊಲೆ ಯತ್ನ, ದರೋಡೆ, ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪ ಲಖ್ವಿಂದರ್ ಕುಮಾರ್ ಮೇಲಿದ್ದು, ಆತ ಹರಿಯಾಣ (Haryana) ಪೊಲೀಸರಿಗೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದನು.

ಕೇಂದ್ರ ತನಿಖಾ ದಳ (ಸಿಬಿಐ), ವಿದೇಶಾಂಗ ಸಚಿವಾಲಯ (ಎಂಇಎ) ಮತ್ತು ಗೃಹ ಸಚಿವಾಲಯ (ಎಂಎಚ್‌ಎ) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ದರೋಡೆಕೋರ ಲಖ್ವಿಂದರ್ ಕುಮಾರ್ ನನ್ನು ಶನಿವಾರ ಅಮೆರಿಕದಿಂದ ಗಡಿಪಾರು ಮಾಡಲಾಗಿತ್ತು.

ಸುಲಿಗೆ, ಬೆದರಿಕೆ, ಕೊಲೆ ಯತ್ನ, ದರೋಡೆ, ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪ ಲಖ್ವಿಂದರ್ ಕುಮಾರ್ ಮೇಲಿದ್ದು, ವಿವಿಧ ಪ್ರಕರಣಗಳಲ್ಲಿ ಆತ ಹರಿಯಾಣ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದನು. ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ಲಖ್ವಿಂದರ್ ಕುರಿತಾಗಿ ಹರಿಯಾಣ ಪೊಲೀಸರ ಕೋರಿಕೆಯ ಮೇರೆಗೆ ಸಿಬಿಐ ಕಳೆದ ವರ್ಷ ಅಕ್ಟೋಬರ್ 26 ರಂದು ಇಂಟರ್‌ಪೋಲ್ ಮೂಲಕ ಪರಾರಿಯಾಗಿರುವ ಆತನ ವಿರುದ್ಧ ರೆಡ್ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ: Fire Accident: ದಿನಸಿ ಅಂಗಡಿಯಲ್ಲಿ ಬೆಂಕಿ ಅವಘಡ; ಸುಟ್ಟು ಕರಕಲಾದ ವಸ್ತುಗಳು

ಅಮೆರಿಕದಿಂದ ಗಡೀಪಾರು ಮಾಡಿದ ಬಳಿಕ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆತನನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆದರು. ಕಳೆದ ಕೆಲವು ವರ್ಷಗಳಲ್ಲಿ ಇಂಟರ್‌ಪೋಲ್ ಚಾನೆಲ್‌ಗಳ ಸಮನ್ವಯದ ಮೂಲಕ 130 ಕ್ಕೂ ಹೆಚ್ಚು ವಾಂಟೆಡ್ ಕ್ರಿಮಿನಲ್‌ಗಳನ್ನು ಮರಳಿ ಕರೆತರಲಾಗಿದೆ.

ಬೇಕಾಗಿರುವ ಪರಾರಿಯಾದ ಕ್ರಿಮಿನಲ್ ಗಳನ್ನು ಪತ್ತೆಹಚ್ಚಲು ಇಂಟರ್‌ಪೋಲ್ ಪ್ರಕಟಿಸಿದ ರೆಡ್ ನೊಟೀಸ್‌ಗಳನ್ನು ಜಾಗತಿಕವಾಗಿ ಎಲ್ಲಾ ಕಾನೂನು ಜಾರಿ ಸಂಸ್ಥೆಗಳಿಗೆ ರವಾನಿಸಲಾಗಿದೆ. ಇಂಟರ್‌ಪೋಲ್ ಚಾನೆಲ್‌ಗಳ ಮೂಲಕ ಸಹಾಯಕ್ಕಾಗಿ ಸಿಬಿಐ ಭಾರತ್‌ಪೋಲ್ ಮೂಲಕ ಭಾರತದ ಎಲ್ಲಾ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಇದಕ್ಕಾಗಿ ಸಂವಹನ ನಡೆಸುತ್ತಿದೆ.

ಇದನ್ನೂ ಓದಿ: Self Harming Case: ಐಎಎಸ್ ಅಧಿಕಾರಿಯಿಂದ ಲೈಂಗಿಕ ಕಿರುಕುಳ- ಬೇಸತ್ತ ಯುವಕ ಆತ್ಮಹತ್ಯೆ

ಈ ಹಿಂದೆ ರಾಜಸ್ಥಾನ ಪೊಲೀಸರು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಶೂಟರ್ ಅನ್ನು ಬಂಧಿಸಿದರು. ಸಂಜಯ್ ಜಾಟ್ ಎಂದು ಗುರುತಿಸಲಾದ ಶೂಟರ್‌ಗೆ 25,000 ರೂ. ಬಹುಮಾನವನ್ನು ಘೋಷಿಸಲಾಗಿತ್ತು ಆತನಿಂದ ವಿದೇಶಿ ನಿರ್ಮಿತ ಪಿಸ್ತೂಲ್, ಸ್ಥಳೀಯವಾಗಿ ತಯಾರಿಸಿದ ಶಸ್ತ್ರಾಸ್ತ್ರಗಳು, ಏಳು ನಾಡ ಪಿಸ್ತೂಲ್‌ಗಳು ಸೇರಿದಂತೆ ಹಲವು ರೀತಿಯ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಉತ್ತರ ಭಾರತದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಕೆನಡಾ ಈತನ ಗ್ಯಾಂಗ್ ಅನ್ನು ಭಯೋತ್ಪಾದಕರು ಎಂದು ಗುರುತಿಸಿದೆ.