ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Google Map: ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆ ಮೇಲೆ ಹೋದ ಕಾರು; ಮುಂದೇನಾಯ್ತು?

ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸಿ ಸೇತುವೆಯಿಂದ ಬಿದ್ದು ಮಹಿಳೆಯೊಬ್ಬರು ಪರದಾಡಿದ ಘಟನೆ ಮುಂಬೈಯಲ್ಲಿ ನಡೆದಿದೆ. ಬೇಲಾಪುರ್‌ದಿಂದ ಉಲ್ವೆಯತ್ತ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅದೃಷ್ಟವಶಾತ್‌ ಮಹಿಳೆ ಯಾವುದೇ ಅಪಾಯವಿಲ್ಲದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೂಗಲ್ ಮ್ಯಾಪ್ ನಂಬಿ ಹೋಗಿದ್ದಕ್ಕೆ ಕಾಲುವೆಗೆ ಉರುಳಿದ ಕಾರು

ಘಟನೆಯ ದೃಶ್ಯ

Profile Sushmitha Jain Jul 26, 2025 10:18 PM

ಮುಂಬೈ: ಇದು ಗೂಗಲ್ ಮ್ಯಾಪ್ (Google Map) ಅನ್ನು ಅತಿಯಾಗಿ ನಂಬಿ ವಾಹನ ಚಾಲನೆ ಮಾಡುವವರಿಗೆ ನಿಜಕ್ಕೂ ಎಚ್ಚರಿಕೆಯ ಗಂಟೆ. ಅನೇಕ ಸಂದರ್ಭಗಳಲ್ಲಿ ಗೂಗಲ್ ಮ್ಯಾಪ್‌ ಅನ್ನು ನಂಬಿಕೊಂಡು ಹೋಗಿ ಕೆಲವು ವಾಹನಗಳು ಅಪಘಾತಕ್ಕೀಡಾಗಿರುವುದು, ಗೊತ್ತು ಗುರಿಯಿಲ್ಲದ ಜಾಗಗಳು, ಕಾಡು ಮೇಡು ಅಲೆದಾಡಿಸಿದ ಪ್ರಸಂಗಗಳು ನಡೆದಿವೆ. ಇಂಥ ಘಟನೆಗಳಲ್ಲಿ ಅಪಘಾತಗಳು, ಜೀವಹಾನಿಯಾದ ಉದಾಹರಣೆಗಳೂ ಇದ್ದು, ಇದೀಗ ನವೀ ಮುಂಬೈನ (Navi Mumbai ) ಬೆಲಾಪುರ್ (Belapur) ಬಳಿ ನಡೆದಿದೆ.

ಹೌದು, ಗೂಗಲ್ ಮ್ಯಾಪ್ (Google Map) ನಂಬಿ ಕಾರು ಏರಿ ಹೊರಟ್ಟ ಮಹಿಳೆಯೊಬ್ಬರು, ಕಾರನ್ನು ಕಂದಕಕ್ಕೆ ಇಳಿಸಿಕೊಂಡು ಪರದಾಡಿದ ಘಟನೆ ನಡೆದಿದೆ.

ನಗರದ ಮಹಿಳೆಯೊಬ್ಬರು ಬೇಲಾಪುರ್‌(Belapur)ದಿಂದ ಉಲ್ವೆಯತ್ತ ತೆರಳುತ್ತಿದ್ದರು. ಈ ವೇಳೆ ಗೂಗಲ್ ಮ್ಯಾಪ್ ಕೈ ಕೊಟ್ಟಿದ್ದು, ಅವರು ಬೇಲಾಪುರದ ಬೇ ಬ್ರಿಡ್ಜ್‌ ಮೂಲಕ ಸಾಗಬೇಕಿತ್ತು. ಆದರೆ ಗೂಗಲ್ ಮ್ಯಾಪ್ ಅವರಿಗೆ ಬ್ರಿಡ್ಜ್‌ನ ಕೆಳ ರಸ್ತೆಯನ್ನು ತೋರಿಸಿದ್ದು, ಇದು ಧ್ರುವತಾರಾ ಜೆಟ್ಟಿ ಹತ್ತಿರ ತೆರಳಿದೆ. ಇದನ್ನು ಗಮನಿಸದೇ ಮಹಿಳೆ ಕಾರು ಚಲಾವಣೆ ಮಾಡಿಕೊಂಡು ಹೋಗಿದ್ದು, ವಾಹನ ನೀರಿನ ಬಳಿ ಹೋಗಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದ ಕಾರನ್ನು ವಾಪಸ್ ತೆಗೆಯಲಾಗದೆ ಮಹಿಳೆಯರು ನೀರಿನಲ್ಲಿ ಕೆಲವು ಕಾಲ ಪರದಾಡಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದಂತೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಈ ವೇಳೆ ಮಹಿಳೆ ನೀರಿನಲ್ಲಿ ತೇಲುತ್ತಿದ್ದರು. ಕೂಡಲೇ ಎಚ್ಚೆತ್ತ ರಕ್ಷಣಾ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಅವರಿಗೆ ಯಾವುದೇ ಹಾನಿಯಾಗಿಲ್ಲ. ಇನ್ನು ಕ್ರೇನ್ ಮೂಲಕ ಮಹಿಳೆಯ ಕಾರನ್ನು ಕೂಡ ಮೇಲೆತ್ತಲಾಗಿದ್ದು, ಈ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿ ವೈರಲ್ ಆಗಿದೆ.



ಇನ್ನು ಕೇರಳದಲ್ಲೂ ಇಂತದ್ದೇ ಘಟನೆ ನಡೆದಿದೆ ಗೂಗಲ್ ಮ್ಯಾಪ್‌ ನಂಬಿ ಕಾರು ಚಲಾಯಿಸಿ ವೃದ್ಧ ದಂಪತಿ ಕಾರು ಸಮೇತ ಹೊಳೆಗೆ ಬಿದ್ದ ಘಟನೆ ಕೊಟ್ಟಾಯಂನಲ್ಲಿ ನಡೆದಿದೆ. ಕಾರು ಮುಳುಗಿದ್ದು, ಕಾರಿನಿಂದ ದಂಪತಿ ಹೇಗೋ ಪಾರಾಗಿದ್ದಾರೆ. ಜು. 23 ಬೆಳಗ್ಗೆ 11 ಗಂಟೆ ಸುಮಾರಿಗೆ 62 ವರ್ಷದ ಜೋಶಿ ಜೋಸೆಫ್ ಮತ್ತು ಅವರ 58 ವರ್ಷದ ಪತ್ನಿ ಶೀಬಾ ಮನ್ವೆಟ್ಟಮ್‌ನಲ್ಲಿರುವ ಸ್ನೇಹಿತನ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಜಿಪಿಎಸ್ ನಿರ್ದೇಶನದಂತೆ ಸಾಗಿದ ಕಾರು ರಸ್ತೆಯಿಂದ ಜಾರಿ ನೀರು ತುಂಬಿದ ಹೊಳೆಯೊಳಗೆ ಸಾಗಿದೆ. ಈ ಘಟನೆಯಲ್ಲಿ ಕೂಡ ಕಾರು ಚಾಲಕರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಹೊಳೆಗೆ ಕಾರು ಇಳಿಯುತ್ತಿದ್ದಂತೆ ಚಾಲಕ ಸಮಯಕ್ಕೆ ಸರಿಯಾಗಿ ಕಾರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಕಚ್ಚಲು ಬಂದ ಹಾವನ್ನೇ ಕಚ್ಚಿ ಕೊಂದ ಒಂದು ವರ್ಷದ ಮಗು!

ಇವು ಭಾರತದಲ್ಲಿ GPS-ಆಧಾರಿತ ನ್ಯಾವಿಗೇಷನ್‌ನಿಂದ ಉಂಟಾದ ಮೊದಲ ಘಟನೆಗಳೇನಲ್ಲ. ಡಿಸೆಂಬರ್ 2024ರಲ್ಲಿ, ಉತ್ತರ ಪ್ರದೇಶದ ಕಾನ್ಪುರದಿಂದ ಪಿಲಿಭಿತ್‌ಗೆ ತೆರಳುತ್ತಿದ್ದ ಮೂವರು ಗೂಗಲ್ ಮ್ಯಾಪ್ ನಂಬಿ ಕಿರಿದಾದ ಕಾಲುವೆಯ ಮಾರ್ಗದಲ್ಲಿ ಸಿಲುಕಿದರು. ಅವರ ಕಾರು ಕಾಲುವೆಗೆ ಉರುಳಿತ್ತು. ಆದರೆ ಯಾವುದೇ ಗಂಭೀರ ಗಾಯಗಳಾಗದೆ ಮೂವರು ಕೂಡ ಪಾರಾಗಿದ್ದರು.

ಗೂಗಲ್ ಮ್ಯಾಪ್ಸ್‌ನಂತಹ GPS ನ್ಯಾವಿಗೇಷನ್ ಆ್ಯಪ್‌ಗಳು ಸೌಲಭ್ಯವನ್ನು ಒದಗಿಸಿದರೂ, ಮ್ಯಾಪ್ ಮಾಡಲಾದ ಪ್ರದೇಶಗಳಲ್ಲಿ ಅವುಗಳ ವಿಶ್ವಾಸಾರ್ಹತೆಯ ಕುರಿತು ಆತಂಕವನ್ನು ಹುಟ್ಟಿಸಿವೆ. ಬಳಕೆದಾರರು ಸೂಕ್ಷ್ಮ ಅಥವಾ ದೂರದ ಪ್ರದೇಶಗಳಲ್ಲಿ ಡಿಜಿಟಲ್ ಮಾರ್ಗದರ್ಶನವನ್ನು ಕುರುಡಾಗಿ ಅವಲಂಬಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ