ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಕಚ್ಚಲು ಬಂದ ಹಾವನ್ನೇ ಕಚ್ಚಿ ಕೊಂದ ಒಂದು ವರ್ಷದ ಮಗು!

ಆಟವಾಡುತ್ತಿದ್ದ ಮಗುವೊಂದು ಹಾವನ್ನು ಕಚ್ಚಿ ಸಾಯಿಸಿರುವ ಘಟನೆ ಬಿಹಾರದ ಗ್ರಾಮವೊಂದರಲ್ಲಿ ನಡೆದಿದೆ. ಮಗು ಆಟವಾಡುತ್ತಿದ್ದಾಗಲೇ ಹತ್ತಿರ ಬಂದ ಹಾವನ್ನು ಮಗು ವಸ್ತುವೆಂದು ತಿಳಿದು ಕಚ್ಚಿದೆ. ಇದರ ಪರಿಣಾಮ ಹಾವು ಸ್ಥಳದಲ್ಲೇ ಸಾವನ್ನಪ್ಪಿದೆ. ಬಳಿಕ ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಬಳಿಕ ಚೇತರಿಸಿಕೊಂಡಿದೆ.

ನಾಗರಹಾವನ್ನು ಕಚ್ಚಿ ಕೊಂದ ಒಂದು ವರ್ಷದ ಮಗು

ಸಾಂದರ್ಭಿಕ ಚಿತ್ರ.

ಪಾಟ್ನಾ: ಮಗುವೊಂದು (child) ಹಾವನ್ನು (Cobra) ಕಚ್ಚಿ ಸಾಯಿಸಿರುವ ಘಟನೆ ಬಿಹಾರದ (Bihar) ಬೆಟ್ಟಿಯಾ ಗ್ರಾಮದಲ್ಲಿ ನಡೆದಿದೆ. ಒಂದು ವರ್ಷದ ಮಗು ಹಾವನ್ನು ಕಚ್ಚಿ ಸಾಯಿಸಿದೆ. ಮನೆಯ ಸಮೀಪ ಆಡುತ್ತಿದ್ದ ಒಂದು ವರ್ಷದ ಮಗು ಗೋವಿಂದನ ಬಳಿಗೆ ನಾಗರಹಾವೊಂದು (Snake) ಬಂದಿದ್ದು, ಅದು ಆಟಿಕೆ ಎಂದು ಭಾವಿಸಿ ಅದನ್ನು ಹಿಡಿದುಕೊಂಡಿದೆ. ತನ್ನ ಕೈಯಲ್ಲಿ ಸುತ್ತಿದ ಹಾವನ್ನು ಮಗು ಬಾಯಿಗೆ ಹಾಕಿ ಕಚ್ಚಿದೆ. ಇದರಿಂದ ಹಾವು ಸಾವನ್ನಪ್ಪಿದೆ. ಬಳಿಕ ಪ್ರಜ್ಞಾಹೀನವಾಗಿ ಬಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

ಮನೆಯ ಬಳಿ ಮಗು ಆಟವಾಡುತ್ತಿದ್ದಾಗ ನಾಗರಹಾವು ಹತ್ತಿರ ಬಂದು ಮಗುವಿನ ಕೈಗೆ ಸುತ್ತಿಕೊಂಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮಗು ಹಾವನ್ನು ಕಚ್ಚಿದ್ದು, ಅದು ಸ್ಥಳದಲ್ಲೇ ಸತ್ತು ಹೋಗಿದೆ. ಕೆಲವು ಕ್ಷಣಗಳಲ್ಲೇ ಮಗು ಪ್ರಜ್ಞೆ ತಪ್ಪಿ ಬಿದ್ದಿದ್ದು ಕೂಡಲೇ ಅದನ್ನು ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋದರು.

ನಾಗರಹಾವು ಮಗುವಿನ ತುಂಬಾ ಹತ್ತಿರಕ್ಕೆ ಬಂದಿದೆ. ಮಗು ಬಹುಶಃ ಅದನ್ನು ಆಟಿಕೆ ಎಂದು ಭಾವಿಸಿ ಹಿಡಿದಿದೆ. ಬಳಿಕ ಅದನ್ನು ತನ್ನ ಹಲ್ಲುಗಳಿಂದ ಕಚ್ಚಿದೆ. ಇದರಿಂದ ಹಾವು ತಕ್ಷಣವೇ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜ್ಞೆ ಕಳೆದುಕೊಂಡ ಮಗುವನ್ನು ಮನೆಯವರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬೆಟ್ಟಿಯಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಮಗುವನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜಿಎಂಸಿಎಚ್ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Aashka Goradia: ಒಂದು ಕಾಲದ ಪ್ರಖ್ಯಾತ ಕಿರುತೆರೆ ನಟಿ ಈಗ ಯಶಸ್ವಿ ಉದ್ಯಮಿ; ಈಕೆಯ ಒಟ್ಟು ಆದಾಯ ಎಷ್ಟಿದೆ ಗೊತ್ತಾ?

ಮಗುವಿನ ತಾಯಿ ಹತ್ತಿರದಲ್ಲೇ ಉರುವಲು ಸಂಗ್ರಹಿಸುತ್ತಿದ್ದಳು. ಆಗ ಹಾವು ಮಗುವಿನ ಬಳಿ ಹೋಗಿದೆ. ಅದನ್ನು ನೋಡಿ ನಾನು ಮನೆ ಮಂದಿಯನ್ನು ಕರೆಯುವಷ್ಟರಲ್ಲಿ ಮಗು ಅದನ್ನು ವಸ್ತುವೆಂದು ಭಾವಿಸಿ ಕಚ್ಚಿ ಕೊಂದಿತು ಎಂದು ಮಗುವಿನ ಅಜ್ಜಿ ತಿಳಿಸಿದ್ದಾರೆ.