BBC News: "ಪಾಕಿಸ್ತಾನ ಭಾರತೀಯರಿಗೆ ವೀಸಾ ಬ್ಯಾನ್ ಮಾಡಿದೆ" ; ಪಹಲ್ಗಾಮ್ ದಾಳಿಯ ಕುರಿತು ವರದಿ ಮಾಡಿದ್ದ BBCಗೆ ಬಿಸಿ ಮುಟ್ಟಿಸಿದ ಸರ್ಕಾರ
ಕಾಶ್ಮೀರ ದಾಳಿಯ ನಂತರ ಪಾಕಿಸ್ತಾನ ಭಾರತೀಯರಿಗೆ ವೀಸಾಗಳನ್ನು ಸ್ಥಗಿತಗೊಳಿಸಿದೆ" ಎಂಬ ಶೀರ್ಷಿಕೆಯ ಲೇಖನದಲ್ಲಿ ಬಿಬಿಸಿ ಸುದ್ದಿಯನ್ನು ಪ್ರಕಟಿಸಿತ್ತು. ಅದಕ್ಕೆ ಇದೀಗ ಭಾರತ ಆಕ್ಷೇಪ ವ್ಯಕ್ತ ಪಡಿಸಿದ್ದು, ಬಿಬಿಸಿಗೆ ಬಿಸಿ ಮುಟ್ಟಿಸಿದೆ ಎಂದು ತಿಳಿದು ಬಂದಿದೆ.


ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಇಡೀ ವಿಶ್ವವೇ ಸಂತಾಪ ಸೂಚಿಸುತ್ತಿದೆ. ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಿಬಿಸಿ ವರದಿಗೆ ಭಾರತ ಸರ್ಕಾರ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾಶ್ಮೀರ ದಾಳಿಯ ನಂತರ ಪಾಕಿಸ್ತಾನ ಭಾರತೀಯರಿಗೆ ವೀಸಾಗಳನ್ನು ಸ್ಥಗಿತಗೊಳಿಸಿದೆ" ಎಂಬ ಶೀರ್ಷಿಕೆಯ ಲೇಖನದಲ್ಲಿ ಬಿಬಿಸಿ ಸುದ್ದಿಯನ್ನು (BBC News) ಪ್ರಕಟಿಸಿತ್ತು. ಅದಕ್ಕೆ ಇದೀಗ ಭಾರತ ಆಕ್ಷೇಪ ವ್ಯಕ್ತ ಪಡಿಸಿದ್ದು, ಬಿಬಿಸಿಗೆ ಬಿಸಿ ಮುಟ್ಟಿಸಿದೆ. ಸರ್ಕಾರ ಬಿಬಿಸಿಯ ಭಾರತದ ಮುಖ್ಯಸ್ಥ ಜಾಕಿ ಮಾರ್ಟಿನ್ ಅವರಿಗೆ ಪತ್ರ ಬರೆದಿದೆ. ಬಿಬಿಸಿಗೆ ಬರೆದ ಔಪಚಾರಿಕ ಪತ್ರದಲ್ಲಿ, ವಿದೇಶಾಂಗ ಸಚಿವಾಲಯವು ಬಿಬಿಸಿಯ ವರದಿಯನ್ನು ಮೇಲ್ವಿಚಾರಣೆ ಮಾಡಲಿದೆ ಎಂದು ಸರ್ಕಾರ ತಿಳಿಸಿದೆ.
ಭಾರತದ ವಿದೇಶಾಂಗ ಸಚಿವಾಲಯದೊಳಗಿನ ಬಾಹ್ಯ ಪ್ರಚಾರ ಮತ್ತು ಸಾರ್ವಜನಿಕ ರಾಜತಾಂತ್ರಿಕ ವಿಭಾಗವು "ಭಯೋತ್ಪಾದಕ ದಾಳಿಯ ವರದಿಗೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸುತ್ತದೆ. ಸರಿಯಾಗಿ ಮಾಹಿತಿಯನ್ನು ಕಲೆ ಹಾಕಿ ನಂತರ ವರದಿ ಮಾಡಬೇಕು ಎಂದು ಹೇಳಿದೆ. “ಮಾರಣಾಂತಿಕ ಕಾಶ್ಮೀರ ದಾಳಿಯ ನಂತರ ಪಾಕಿಸ್ತಾನವು ಭಾರತೀಯರಿಗೆ ವೀಸಾಗಳನ್ನು ಅಮಾನತುಗೊಳಿಸಿದೆ” ಎಂಬ ಶೀರ್ಷಿಕೆಯ ಲೇಖನದಲ್ಲಿ, ಬಿಬಿಸಿ “ಭಯೋತ್ಪಾದಕ ದಾಳಿ” ಎಂದು ಉಲ್ಲೇಖಿಸಿದೆ.
ನ್ಯೂಯಾರ್ಕ್ ಟೈಮ್ಸ್ ಮೇಲೆ ಅಮೆರಿಕದ ಕೋಪ
ಪಹಲ್ಗಾಮ್‌ನಲ್ಲಿ ನಡೆದ ದಾಳಿಯನ್ನು ನ್ಯೂಯಾರ್ಕ್ ಟೈಮ್ಸ್ ಉಗ್ರಗಾಮಿಗಳು ಎಂದು ಕರೆದಿತ್ತು. ಇದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. ಭಯೋತ್ಪಾದಕರು ಬೇರೆ ಉಗ್ರಗಾಮಿಗಳು ಬೇರೆ ಗಂಭೀರತೆಯನ್ನು ಅರಿತುಕೊಳ್ಳಿ ಎಂದು ಅಮೆರಿಕ ಸರ್ಕಾರ ಟೈಮ್ಸ್‌ಗೆ ಸೂಚನೆ ನೀಡಿತ್ತು. ಆದದ ಬಳಿಕ ಟೈಮ್ಸ್ ತಪ್ಪನ್ನು ಸರಿ ಮಾಡಿತ್ತು. ಇದೀಗ ಬಿಬಿಸಿ ಮತ್ತದೇ ತಪ್ಪನ್ನು ಮಾಡಿದೆ.
ಈ ಸುದ್ದಿಯನ್ನೂ ಓದಿ: Pahalgam terror attack: ಕುತಂತ್ರಿ ಪಾಕ್‌ಗೆ ಮತ್ತೊಂದು ಶಾಕ್; ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳು ಬ್ಯಾನ್; BBC ಗೂ ವಾರ್ನಿಂಗ್
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಬೆನ್ನಲ್ಲೇ ಭಯೋತ್ಪಾದಕ ಪೋಷಕ ಪಾಕಿಸ್ತಾನದ ವಿರುದ್ಧ ಭಾರತ ಹತ್ತು ಹಲವು ಕ್ರಮಗಳನ್ನು ಕೈಗೊಂಡಿವೆ. ಇದೀಗ ಪಾಕಿಸ್ತಾನ 16 ಯೂಟ್ಯೂಬ್ ಚಾನೆಲ್‌ಗಳನ್ನು ಬ್ಯಾನ್ ಮಾಡಲಾಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತಾರ್ ಶೋಯೆಬ್ ಅಖ್ತರ್ ಅವರ 3.5 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಸೇರಿದಂತೆ ಒಟ್ಟು 16ಚಾನೆಲ್‌ಗಳ ಮೇಲೆ ಬ್ಯಾನ್ ಹೇರಲಾಗಿದೆ. ಜೊತೆಗೆ ಮುನೀಬ್ ಫಾರೂಕ್, ಉಮರ್ ಚೀಮಾ, ಅಸ್ಮಾ ಶಿರಾಜಿ ಮತ್ತು ಇರ್ಷಾದ್ ಭಟ್ಟಿ ಸೇರಿದಂತೆ ಪ್ರಸಿದ್ಧ ಪತ್ರಕರ್ತರ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲಾಗಿದೆ. ಈ ಯೂಟ್ಯೂಬ್ ಚಾನೆಲ್‌ಗಳು ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮವೆಂದು ಪರಿಗಣಿಸಲಾಗಿದೆ.