ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್‌ ಸಿಂದೂರ್‌ ಬಗ್ಗೆ ಅಪಪ್ರಚಾರ- ಚೀನಾದ ಖ್ಯಾತ ಟಿವಿ ಚಾನೆಲ್‌ನ ಎಕ್ಸ್‌ ಖಾತೆ ಬ್ಲಾಕ್‌!

Chinese state media:ಖ್ಯಾತ ಟಿವಿ ಮಾಧ್ಯಮವೊಂದರ(Chinese state media) ಎಕ್ಸ್‌ ಖಾತೆಯನ್ನು ಭಾರತ ಬ್ಲಾಕ್‌ ಮಾಡಿದೆ. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌(Operation Sindoor) ಬಗ್ಗೆ ಚೀನಾದ ಖ್ಯಾತ ಮಾಧ್ಯಮವಾಗಿರುವ ಗ್ಲೋಬಲ್‌ ಟೈಮ್ಸ್‌ ಅಪಪ್ರಚಾರ ಮತ್ತು ತಪ್ಪಾದ ಮಾಹಿತಿ ಹಂಚಿಕೊಂಡಿರುವ ಆರೋಪ ಕೇಳಿ ಬಂದಿದೆ.

ಚೀನಾದ ಖ್ಯಾತ ಟಿವಿ ಚಾನೆಲ್‌ನ ಎಕ್ಸ್‌ ಖಾತೆ ಬ್ಲಾಕ್‌!

Profile Rakshita Karkera May 14, 2025 12:15 PM

ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ಸೆಲೆಬ್ರಿಟಿಗಳ ಸೋಶಿಯಲ್‌ ಮೀಡಿಯಾ ಅಕೌಂಟ್‌, ಯೂಟ್ಯೂಬ್‌ ಚಾನೆಲ್ಸ್‌ಗಳನ್ನು ಭಾರತದಲ್ಲಿ ಬ್ಲಾಕ್‌ ಮಾಡಲಾಗಿತ್ತು. ಇದೀಗ ಭಾರತದ ವಿರುದ್ಧ ಸದಾ ಒಂದಿಲ್ಲೊಂದು ಕಿಡಿಗೇಡಿ ಕೃತ್ಯಗಳನ್ನು ಎಸಗುತ್ತಿರುವ ಚೀನಾಕ್ಕೂ ಬ್ಲಾಕ್‌ ಬಿಸಿ ತಟ್ಟಿದ್ದು, ಖ್ಯಾತ ಟಿವಿ ಮಾಧ್ಯಮವೊಂದರ(Chinese state media) ಎಕ್ಸ್‌ ಖಾತೆಯನ್ನು ಭಾರತ ಬ್ಯಾನ್‌ ಮಾಡಿದೆ. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌(Operation Sindoor) ಬಗ್ಗೆ ಚೀನಾದ ಖ್ಯಾತ ಮಾಧ್ಯಮವಾಗಿರುವ ಗ್ಲೋಬಲ್‌ ಟೈಮ್ಸ್‌ ಅಪಪ್ರಚಾರ ಮತ್ತು ತಪ್ಪಾದ ಮಾಹಿತಿ ಹಂಚಿಕೊಂಡಿರುವ ಆರೋಪ ಕೇಳಿಬಂದಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭಾರತ, ಗ್ಲೋಬಲ್‌ ಟೈಮ್ಸ್‌ ಮಾಧ್ಯಮದ ಎಕ್ಸ್‌ ಖಾತೆಯನ್ನೇ ಬ್ಲಾಕ್‌ ಮಾಡಿದೆ. ಆ ಮೂಲಕ ಕೆಣಕಿದ ಚೀನಾಕ್ಕೆ ಬಿಸಿ ಮುಟ್ಟಿಸಿದೆ.

ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತೀಕಾರವಾಗಿ ನಡೆದ ಆಪರೇಷನ್‌ ಸಿಂದೂರ್‌ ಬಗ್ಗೆ ಕವರೇಜ್‌ ವೇಳೆ ಗ್ಲೋಬಲ್‌ ಮೀಡಿಯಾ ಚಾನೆಲ್‌ ತಪ್ಪಾದ ಮಾಹಿತಿ ಪ್ರಸಾರ ಮಾಡಿತ್ತು. ಅಲ್ಲದೇ ಪಾಕಿಸ್ತಾನ ಮತ್ತು ಉಗ್ರರು ಆಪರೇಷನ್‌ ಸಿಂದೂರ್‌ಗೆ ಬಲಿಯಾದ ಅಮಾಯಕರು ಎಂಬಂತೆ ಬಿಂಬಿಸುವ ಪ್ರಯತ್ನ ನಡೆಸಿತ್ತು ಎಂದು ಭಾರತ ಆರೋಪಿಸಿದೆ. ಇನ್ನು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ಮಿಲಿಟರಿ ಕಾರ್ಯಾಚರಣೆಯ ವರದಿಗಾಗಿ ಗ್ಲೋಬಲ್ ಟೈಮ್ಸ್‌ಗೆ ಎಚ್ಚರಿಕೆ ನೀಡಿತ್ತು. ಇದೀಗ ಭಾರತ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಿದೆ.

ಈ ಸುದ್ದಿಯನ್ನೂ ಓದಿ: Operation Sindoor: ನಿಮ್ಮ ಶೌರ್ಯಕ್ಕೆ ನನ್ನ ಸಲಾಂ: ಆಪರೇಷನ್‌ ಸಿಂದೂರ್‌ ಯಶಸ್ಸಿಗೆ ಯೋಧರನ್ನು ಶ್ಲಾಘಿಸಿದ ಪ್ರಧಾನಿ

ಪಾಕಿಸ್ತಾನದ ಪರವಾಗಿ ಸಹಾನುಭೂತಿ ಹೊಂದಿರುವ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ಭಾರತೀಯ ಸಶಸ್ತ್ರ ಪಡೆಗಳು ಅನುಭವಿಸಿದ ನಷ್ಟಗಳಿಗೆ ಸಂಬಂಧಿಸಿದಂತೆ ಆಧಾರರಹಿತ ಹೇಳಿಕೆಗಳನ್ನು ಪ್ರಸಾರ ಮಾಡುತ್ತಿವೆ ಎಂದು ರಾಯಭಾರ ಕಚೇರಿಯು ತನ್ನ ಸಂದೇಶದಲ್ಲಿ ವಿವರಿಸಿದೆ. ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಹಲವಾರು ಪಾಕಿಸ್ತಾನ ಪರ ಹ್ಯಾಂಡಲ್‌ಗಳು ಆಧಾರರಹಿತ ಹೇಳಿಕೆಗಳನ್ನು ಹರಡುತ್ತಿದ್ದು, ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿವೆ. ಮಾಧ್ಯಮಗಳು ಮೂಲಗಳನ್ನು ಪರಿಶೀಲಿಸದೆ ಅಂತಹ ಮಾಹಿತಿಯನ್ನು ಹಂಚಿಕೊಂಡಾಗ, ಅದು ಬೇಜವಾಬ್ದಾರಿ ಮತ್ತು ಪತ್ರಿಕೋದ್ಯಮದ ನೈತಿಕತೆಯ ಗಂಭೀರ ಲೋಪವನ್ನು ಪ್ರತಿಬಿಂಬಿಸುತ್ತದೆ ಎಂದು ರಾಯಭಾರ ಕಚೇರಿಯ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ವಾತಾವರಣ ತೀವ್ರಗೊಂಡಾಗಿನಿಂದ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ (ಪಿಐಬಿ) ಸತ್ಯ ಪರಿಶೀಲನಾ ಘಟಕವು ತಪ್ಪು ಮಾಹಿತಿಯನ್ನು ಹರಡುತ್ತಿರುವ ಸಾಮಾಜಿಕ ಮಾಧ್ಯಮಗಳು, ಟಿವಿ ಚಾನೆಲ್‌ಗಳ ಮೇಲೆ ಕಣ್ಣಿಟ್ಟಿದೆ