ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರವಾಹಪೀಡಿತ ನೇಪಾಳಕ್ಕೆ ಭಾರತದ ಸಹಾಯ ಹಸ್ತ: ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ವಾಯುಪಡೆ ಸಜ್ಜು; ನಿಮ್ಮೊಂದಿಗೆ ನಾವಿದ್ದೇವೆ ಎಂದು ನರೇಂದ್ರ ಮೋದಿ ಭರವಸೆ

Nepal Flood: ಪ್ರವಾಹದಿಂದ ನಲುಗಿರುವ ನೆರೆಯ ದೇಶ ನೇಪಾಳಕ್ಕೆ ಭಾರತ ಪರಿಹಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿದೆ. ಜತೆಗೆ ರಕ್ಷಣಾ ಕಾರ್ಯಾಚರಣೆಗೂ ಮುಂದಾಗುವುದಾಗಿ ಭಾರತೀಯ ವಾಯುಪಡೆ ತಿಳಿಸಿದೆ. ಪೀಡಿತ ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ. ಭಾರತವು ಸಾಧ್ಯವಾದಷ್ಟು ಬೇಗ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿದೆ.

ನೇಪಾಳಕ್ಕೆ ಭಾರತದ ಸಹಾಯ ಹಸ್ತ; ನಾವಿದ್ದೇವೆ ಎಂದು ಮೋದಿ ಭರವಸೆ

ಭೀಕರ ಪ್ರವಾಹಕ್ಕೆ ತತ್ತರಿಸಿದ ನೇಪಾಳ -

Priyanka P
Priyanka P Aug 27, 2026 2:48 PM

ಕಠ್ಮಂಡು, ಆ. 27: ನೇಪಾಳದಲ್ಲಿ ಉಂಟಾಗಿರುವ ಭೀಕರ ಪ್ರವಾಹದಲ್ಲಿ (Nepal Flood) ಕನಿಷ್ಠ 150ಕ್ಕೂ ಹೆಚ್ಚು ಜನರು ಮೃತಪಟ್ಟು, ನೂರಾರು ಜನರು ನಾಪತ್ತೆಯಾಗಿದ್ದಾರೆ. ನೆರೆಯ ದೇಶಕ್ಕೆ ಭಾರತ ಪರಿಹಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿದ್ದು, ಭಾರತೀಯ ವಾಯುಪಡೆ (IAF) ಯಾವುದೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಪೀಡಿತ ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಭಾರತೀಯರು ಕಾಣೆಯಾಗಿದ್ದಾರೆ. ಭಾರತವು ಸಾಧ್ಯವಾದಷ್ಟು ಬೇಗ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಸರ್ಕಾರ ನಿಯೋಜಿಸುವ ಯಾವುದೇ ಕಾರ್ಯವನ್ನು ನಿರ್ವಹಿಸಲು ಭಾರತೀಯ ವಾಯುಪಡೆ (ಐಎಎಫ್) ಸಹ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಎಕ್ಸ್‌ ಪೋಸ್ಟ್‌:



ನೇಪಾಳಕ್ಕೆ ತೆರಳಲು ಪರಿಹಾರ ಸಾಮಗ್ರಿಗಳು, ಔಷಧಗಳು ಮತ್ತು ಉಪಕರಣಗಳೊಂದಿಗೆ ಐಎಎಫ್‌ನ ಸಿ-17 ಮತ್ತು ಸಿ-130 ವಿಮಾನಗಳು ಸಜ್ಜಾಗಿದೆ. ಗುರುವಾರ (ಆಗಸ್ಟ್‌ 27) ನೇಪಾಳಕ್ಕೆ ಸಿ-130 ವಿಮಾನ ಹೊರಡಲಿದ್ದು, ಪರಿಹಾರ ಕಾರ್ಯಾಚರಣೆಯ ಭಾಗವಾಗಿ ಸಿ-17 ವಿಮಾನ ತೆರಳಿದೆ.

ಕ್ಷಣಾರ್ಧದಲ್ಲಿ ಕೊಚ್ಚಿ ಹೋದ ಹಳ್ಳಿಗಳು, ಸೇತುವೆ ಮುಳುಗಡೆ, ವಿದ್ಯುತ್, ಸಂವಹನ ಸಂಪರ್ಕ ಕಡಿತ

ನೆರೆಯ ದೇಶದಲ್ಲಿ ಯಾವುದೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು (ಎನ್‌ಡಿಆರ್‌ಎಫ್) ಸಹ ಸಿದ್ಧವಾಗಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಟಿಬೆಟಿಯನ್ ಗಡಿ ಭಾಗದಿಂದ ಉಂಟಾದ ಹಠಾತ್ ಪ್ರವಾಹವು ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿದೆ.

ಹಲವು ಹಳ್ಳಿಗಳು, ವಸಾಹತುಗಳು, ರಸ್ತೆಗಳು ಮತ್ತು ಸೇತುವೆಗಳು ಪ್ರವಾಹದಿಂದ ಕೊಚ್ಚಿಹೋಗಿವೆ. ಜಲವಿದ್ಯುತ್ ಯೋಜನೆಗಳು ಮತ್ತು ಇತರ ಮೂಲಸೌಕರ್ಯಗಳು ಸಹ ಹಾನಿಗೊಳಗಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ. ನೇಪಾಳ ಸೇನೆಯು ಹೆಲಿಕಾಪ್ಟರ್‌ಗಳು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ಪೀಡಿತ ಪ್ರದೇಶದಲ್ಲಿ ನಿಯೋಜಿಸಿದೆ. ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ 291 ವಿದೇಶಿ ಪ್ರಜೆಗಳು ಮತ್ತು 93 ನೇಪಾಳಿ ಪ್ರಜೆಗಳು ಸೇರಿದಂತೆ 384 ಪ್ರಯಾಣಿಕರು ಪೀಡಿತ ಪ್ರದೇಶಗಳಿಂದ ನಾಪತ್ತೆಯಾಗಿದ್ದಾರೆ. ವಿದೇಶಿಯರಲ್ಲಿ 105 ಭಾರತೀಯರು ಮತ್ತು 37 ಅನಿವಾಸಿ ಭಾರತೀಯರು ಸೇರಿದ್ದಾರೆ.

ಟಿಬೆಟ್‌ನಲ್ಲಿ ಭೀಕರ ಪ್ರವಾಹ: ನೇಪಾಳದಲ್ಲಿ 98 ಮಂದಿ ಸಾವು, ಭಾರತೀಯರು ಸೇರಿ 500ಕ್ಕೂ ಹೆಚ್ಚು ಮಂದಿ ನಾಪತ್ತೆ

ನೇಪಾಳ ಪ್ರಧಾನಿಗೆ ಕರೆ ಮಾಡಿ ಸಹಾಯದ ಭರವಸೆ ನೀಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರಿಗೆ ಕರೆ ಮಾಡಿ, ಸಾಧ್ಯವಿರುವ ಎಲ್ಲ ನೆರವು ಒದಗಿಸುವುದಾಗಿ ಭೆವಸೆ ನೀಡಿದ್ದಾರೆ. “ನೇಪಾಳದಲ್ಲಿ ಉಂಟಾದ ಪ್ರವಾಹದ ಬಗ್ಗೆ ಅಲ್ಲಿನ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಮಾತನಾಡಿದ್ದೇನೆ. ಈ ಕಷ್ಟದ ಸಮಯದಲ್ಲಿ ಭಾರತದ ಜನರು ನೇಪಾಳದಲ್ಲಿರುವ ತಮ್ಮ ಸಹೋದರ-ಸಹೋದರಿಯರೊಂದಿಗೆ ನಿಂತಿದ್ದಾರೆ. ನೇಪಾಳಕ್ಕೆ ಸಾಧ್ಯವಿರುವ ಎಲ್ಲ ಮಾನವೀಯ ಸಹಾಯವನ್ನು ಒದಗಿಸಲು ಭಾರತ ಸಿದ್ಧ. ನಮ್ಮ ತಂಡಗಳು ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ನಿಕಟವಾಗಿ ಸಮನ್ವಯ ಸಾಧಿಸುತ್ತಿವೆ” ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ನಿಮ್ಮ ಆತ್ಮೀಯ ಕರೆ ಮತ್ತು ಆಳವಾದ ಸಂತಾಪಗಳಿಗೆ ಧನ್ಯವಾದಗಳು. ಈ ಕಷ್ಟದ ಸಮಯದಲ್ಲಿ ನೇಪಾಳಕ್ಕೆ ನೀವು ನೀಡಿದ ಬೆಂಬಲದ ಮಾತುಗಳು ಮತ್ತು ಉದಾರ ಸಹಾಯದ ಹಸ್ತವನ್ನು ನಾವು ಆಳವಾಗಿ ಗೌರವಿಸುತ್ತೇವೆ. ಈ ಒಗ್ಗಟ್ಟಿನ ನಡೆ ನಮ್ಮ ಉಭಯ ದೇಶಗಳ ನಡುವಿನ ಶಾಶ್ವತ ಸ್ನೇಹದ ಸಂಕೇತವಾಗಿದೆ. ಇದನ್ನು ನಾವು ಅಪಾರವಾಗಿ ಗೌರವಿಸುತ್ತೇವೆ” ಎಂದು ಶಾ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.