ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಜೀವ ಉಳಿಸಿಕೊಳ್ಳಲು ಪ್ರವಾಸಿಗರು ಅಡಗಿಕೊಂಡಿರುವ ಭಯಾನಕ ವಿಡಿಯೋ ವೈರಲ್‌

Pahalgam Terror Attack: Pahalgam Terror Attack: ಪಹಲ್ಗಾಮ್ ದಾಳಿ ವೇಳೆ ಪ್ರವಾಸಿಗರು ಅಡಗಿಕೊಂಡಿರುವ ವಿಡಿಯೋ ಬೆಳಕಿಗೆ ಬಂದಿದೆ. ಈ ಘೋರ ಘಟನೆಯ ಒಂದೊಂದೇ ದೃಶ್ಯಗಳು ಬೆಳಕಿಗೆ ಬರುತ್ತಿದ್ದು, ಭಾರೀ ವೈರಲ್ ಆಗುತ್ತಿವೆ. ಇದೀಗ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಉಗ್ರರ ಕಣ್ಣು ತಪ್ಪಿಸಿ ಪ್ರಾಣ ಉಳಿಸಿಕೊಳ್ಳಲು ಪ್ರವಾಸಿಗರು ಒದ್ದಾಡಿದ ದೃಶ್ಯ ಆ ವಿಡೀಯೋದಲ್ಲಿದೆ.

ಪಹಲ್ಗಾಮ್ ಉಗ್ರರ ದಾಳಿಯ ಮತ್ತೊಂದು ವಿಡಿಯೋ ವೈರಲ್

Profile Sushmitha Jain Apr 29, 2025 4:57 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ(Jammu and Kashmir) ಪಹಲ್ಗಾಮ್‌ನಲ್ಲಿ (Pahalgam Terror Attack) ಏಪ್ರಿಲ್ 22 ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ (Terrorist Attack) ಅಸಹಾಯಕ ಪ್ರವಾಸಿಗರನ್ನು ತೋರಿಸುವ ಹೊಸ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಭಯೋತ್ಪಾದಕರು ಈ ದಾಳಿಯಲ್ಲಿ 26 ಮಂದಿಯನ್ನು ಕೊಂದಿದ್ದರು, ಅವರಲ್ಲಿ ಕೇವಲ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲರೂ ಬೇರೆ ರಾಜ್ಯಗಳ ಪ್ರವಾಸಿಗರಾಗಿದ್ದರು. ವಿಡಿಯೊದಲ್ಲಿ, ರಮಣೀಯ ಬೈಸರನ್ ಕಣಿವೆಯ ಮಧ್ಯದಲ್ಲಿ ಕಾಶ್ಮೀರಿ ಉಡುಗೆಗಳ ಕಿಯೋಸ್ಕ್ ಸುತ್ತಲೂ ಗುಂಡಿನ ಸದ್ದಿನ ಮಧ್ಯೆ ಹಲವಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಒಟ್ಟಾಗಿ ಗುಂಡಿನಿಂದ ರಕ್ಷಣೆ ಪಡೆಯುತ್ತಿರುವ ದೃಶ್ಯ ಕಾಣಿಸುತ್ತದೆ.

ಭಯೋತ್ಪಾದಕರು ಪ್ರವಾಸಿಗರ ಗುಂಪನ್ನು ಗುರಿಯಾಗಿಸಿ, ಪುರುಷರನ್ನು ಗುಂಡಿಟ್ಟು ಕೊಂದಿದ್ದರು. ಬದುಕುಳಿದ ಕೆಲವರು ಭಯೋತ್ಪಾದಕರು ಪ್ರವಾಸಿಗರ ಧರ್ಮವನ್ನು ಖಚಿತಪಡಿಸಿಕೊಂಡು ಹಿಂದೂಗಳನ್ನೇ ಉದ್ದೇಶಪೂರ್ವಕವಾಗಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.ಈ ದಾಳಿಯ ನಂತರ, ಹತ್ಯಾಕಾಂಡ ಮತ್ತು ಗೊಂದಲದ ಹಲವು ವಿಡಿಯೋಗಳು ಬೆಳಕಿಗೆ ಬಂದಿವೆ. ಇವುಗಳು ಪ್ರವಾಸಿಗರ ಭಯ, ಅಸಹಾಯಕತೆ ಮತ್ತು ಸ್ಥಳೀಯರ ಧೈರ್ಯ ಹಾಗೂ ವೀರತನ ಮೆರೆಯುವ ದೃಶ್ಯವನ್ನು ಒಳಗೊಂಡಿದೆ. ಅನೇಕ ಸ್ಥಳೀಯರು ತಮ್ಮ ಜೀವವನ್ನು ಪಣಕ್ಕಿಟ್ಟು ಹಲವಾರು ಪ್ರವಾಸಿಗರ ಜೀವ ಉಳಿಸಿದ್ದಾರೆ.



ಸಾವನ್ನಪ್ಪಿದ ಏಕೈಕ ಕಾಶ್ಮೀರಿ ವ್ಯಕ್ತಿ ಸ್ಥಳೀಯರು ಕುದುರೆ ಸವಾರಿಯ ನಿರ್ವಾಹಕರಾಗಿದ್ದರು. ಇವರು ತಮ್ಮ ಕುದುರೆಗಳ ಮೂಲಕ ಪ್ರವಾಸಿಗರನ್ನು ರಕ್ಷಿಸಲು ಯತ್ನಿಸಿದ್ದರು. ಒಬ್ಬ ಪ್ರವಾಸಿಯನ್ನು ತಮ್ಮ ದೇಹದಿಂದ ಮುಚ್ಚಿಕೊಂಡು ರಕ್ಷಿಸಲು ಯತ್ನಿಸುವಾಗ ಭಯೋತ್ಪಾದಕರು ಅವರನ್ನು ಗುಂಡಿಟ್ಟು ಕೊಂದಿದ್ದರು.

ಈ ಸುದ್ದಿಯನ್ನು ಓದಿ; Pahalgam Attack: ಜಮ್ಮು ಕಾಶ್ಮೀರದ 48 ಪ್ರವಾಸಿ ತಾಣಗಳು ಬಂದ್‌ ; ಸರ್ಕಾರದಿಂದ ಆದೇಶ

ದಾಳಿಯ ನಂತರ ಸರ್ಕಾರವು ವಿರೋಧ ಪಕ್ಷಗಳ ಬೆಂಬಲದೊಂದಿಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇಂಡಸ್ ಜಲ ಒಪ್ಪಂದವನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಗಿದೆ, ಅಟ್ಟಾರಿ ಗಡಿಯನ್ನು ಮುಚ್ಚಲಾಗಿದೆ ಮತ್ತು ಭಾರತದಲ್ಲಿರುವ ಎಲ್ಲ ಪಾಕಿಸ್ತಾನಿ ನಾಗರಿಕರ ವೀಸಾಗಳನ್ನು ರದ್ದುಗೊಳಿಸಲಾಗಿದೆ. ಕಳೆದ ವಾರ ಪಾಕಿಸ್ತಾನದ ವಿರುದ್ಧ ಕ್ರಮಗಳನ್ನು ಚರ್ಚಿಸಲು ನಡೆದ ಸರ್ವಪಕ್ಷ ಸಭೆಯಲ್ಲಿ ಸೈನಿಕ ಕ್ರಮದ ಬಗ್ಗೆ ಚರ್ಚೆಯಾಗಿಲ್ಲವಾದರೂ, ಅನೇಕರು ಈ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.