India-Pak Tensions: ಭಾರತದ ಕ್ಷಿಪಣಿ ದಾಳಿಗೆ ಪಾಕ್‌ನ ಮೂರು ವಾಯುನೆಲೆಗಳು ಧ್ವಂಸ!
Missile Attack on Pak: ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್‌ವರೆಗೆ ಭಾರತದ 26 ಸ್ಥಳಗಳಲ್ಲಿ ಪಾಕಿಸ್ತಾನ ಹೊಸ ಡ್ರೋನ್ ದಾಳಿಯನ್ನು ನಡೆಸಿದ ನಂತರ ಕೌಂಟರ್ ಅಟ್ಯಾಕ್ ಶುರು ಮಾಡಿದ ಭಾರತ, ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ಮತ್ತು ಶೇಖುಪುರ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಭಾರತ ಪಾಕಿಸ್ತಾನದ ಮೇಲೆ ರಾತ್ರಿಯಿಡೀ ದಾಳಿ ಮಾಡಲು ಗಾಳಿಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯನ್ನು ಬಳಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ


ನವದೆಹಲಿ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಭಾರತದ ಗಡಿ ಪ್ರದೇಶಗಳಲ್ಲಿ ಡ್ರೋನ್, ಕ್ಷಿಪಣಿ ದಾಳಿ ನಡೆಸಿ(India-Pak Tensions) ಪುಂಡಾಟ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತೆ ಮುಟ್ಟಿ ನೋಡಿಕೊಳ್ಳುವಂತ ತಿರುಗೇಟು ನೀಡಿದೆ. ಭಾರತದ ನಾಗರಿಕರು ಮತ್ತು ಸೇನಾ ನೆಲೆಯನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸುತ್ತಿದ್ದ ನಿರಂತರ ದಾಳಿಗೆ ಭಾರತ ಇದೀಗ ತಕ್ಕ ಪ್ರತ್ಯುತ್ತರ ನೀಡಿದೆ. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್‌ವರೆಗೆ ಭಾರತದ 26 ಸ್ಥಳಗಳಲ್ಲಿ ಪಾಕಿಸ್ತಾನ ಹೊಸ ಡ್ರೋನ್ ದಾಳಿಯನ್ನು ನಡೆಸಿದ ನಂತರ ಕೌಂಟರ್ ಅಟ್ಯಾಕ್ ಶುರು ಮಾಡಿದ ಭಾರತ, ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ಮತ್ತು ಶೇಖುಪುರ ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.
ರಕ್ಷಣಾ ಮೂಲಗಳ ಪ್ರಕಾರ, ರಾವಲ್ಪಿಂಡಿಯಲ್ಲಿರುವ ನೂರ್ ಖಾನ್‌ನಲ್ಲಿರುವ ಪಾಕಿಸ್ತಾನದ ವಾಯುಪಡೆ ನೆಲೆಯ ಮೇಲೂ ಭಾರತ ದಾಳಿ ಮಾಡಿದೆ. ಸಿಯಾಲ್‌ಕೋಟ್ ಮತ್ತು ನರೋವಾಲ್‌ನಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಅಟ್ಯಾಕ್ ನಡೆದಿದೆ.
ಪದೇ ಪದೇ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರವಾಗಿ ಭಾರತ ರಾತ್ರೋರಾತ್ರಿ ದಾಳಿ ನಡೆಸಿದ್ದರಿಂದ ಪಾಕಿಸ್ತಾನದ ಮೂರು ಸೇನಾ ವಾಯುನೆಲೆಗಳು ಧ್ವಂಸಗೊಂಡಿವೆ ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆ. ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಶೋರ್ಕೋಟ್‌ನ ರಫಿಕಿ ವಾಯುನೆಲೆ ಮತ್ತು ಚಕ್ವಾಲ್‌ನ ಮುರಿಯದ್ ವಾಯುನೆಲೆಯ ಮೇಲೆ ಈ ದಾಳಿ ನಡೆದಿದೆ. ಪಾಕಿಸ್ತಾನ ಶುಕ್ರವಾರ ಭಾರತದ 26 ಸ್ಥಳಗಳಲ್ಲಿ ಡ್ರೋನ್ ದಾಳಿ ನಡೆಸಿದ ನಂತರ, ಭಾರತ ಪಾಕಿಸ್ತಾನದ ಮೇಲೆ ರಾತ್ರಿಯಿಡೀ ದಾಳಿ ಮಾಡಲು ಗಾಳಿಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯನ್ನು ಬಳಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Operation Sindoor: ಪಾಕಿಸ್ತಾನದ ಕ್ಷಿಪಣಿ-ಡ್ರೋನ್ ದಾಳಿಗೆ ರಷ್ಯಾ, ಇಸ್ರೇಲ್ ಶಸ್ತ್ರಾಸ್ತ್ರಗಳಿಂದ ತಿರುಗೇಟು ಕೊಟ್ಟ ಭಾರತ
ಪಾಕಿಸ್ತಾನವು ಭಾರತೀಯ ನಾಗರಿಕ ಪ್ರದೇಶಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡ ನಂತರ ಭಾರತ ಪ್ರತೀಕಾರದ ದಾಳಿಯನ್ನು ನಡೆಸಿತು. ನಾವು ಪಾಕಿಸ್ತಾನದ ಸೇನಾ ನೆಲೆಗಳು ಅಥವಾ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿಲ್ಲ. ನಿನ್ನೆಯಿಂದ ಪಾಕಿಸ್ತಾನದ ಪ್ರಯತ್ನಗಳು ಕ್ರಿಮಿನಲ್ ಕೃತ್ಯಗಳಾಗಿವೆ. ಅವರು ಭಾರತೀಯ ಸೇನಾ ನೆಲೆಗಳ ಮೇಲೆ ಅನೇಕ ದಾಳಿಗಳನ್ನು ಪ್ರಯತ್ನಿಸಿದರು. ಅವರು ಭಾರತೀಯ ನಾಗರಿಕ ಪ್ರದೇಶಗಳ ಮೇಲೂ ದಾಳಿ ಮಾಡಿದರು. ಅವರ ಅಪರಾಧ ಪಟ್ಟಿ ತುಂಬಾ ದೊಡ್ಡದಾಗಿದೆ. ಭಾರತ ಇದೀಗ ಪ್ರತಿದಾಳಿ ಮಾಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.