ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕತಾರ್‌ನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ವ್ಯವಸ್ಥಾಪಕ ಸಮಿತಿ ಸದಸ್ಯರಿಗೆ ಭಾರತದ ರಾಯಭಾರ ಕಚೇರಿಯಿಂದ ಸನ್ಮಾನ

Indian Cultural Centre: ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) 2023–2024ರ ವ್ಯವಸ್ಥಾಪಕ ಸಮಿತಿಯನ್ನು ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಭಾರತದ ರಾಯಭಾರ ಕಚೇರಿಯು ಇತ್ತೀಚೆಗೆ ಐಸಿಸಿ ಅಶೋಕ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಕತಾರ್‌ನಲ್ಲಿ ಐಸಿಸಿ ವ್ಯವಸ್ಥಾಪಕ ಸಮಿತಿ ಸದಸ್ಯರಿಗೆ ಸನ್ಮಾನ

ಕತಾರ್‌ನಲ್ಲಿ ಐಸಿಸಿ ಸಮಿತಿ ಸದಸ್ಯರಿಗೆ ಭಾರತದ ರಾಯಭಾರ ಕಚೇರಿಯಿಂದ ಸನ್ಮಾನಿಸಲಾಯಿತು. -

Profile
Siddalinga Swamy May 9, 2026 7:24 PM

ಕತಾರ್‌: ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) (Indian Cultural Centre) 2023–2024ರ ವ್ಯವಸ್ಥಾಪಕ ಸಮಿತಿಯನ್ನು ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಭಾರತದ ರಾಯಭಾರ ಕಚೇರಿಯು ಇತ್ತೀಚೆಗೆ ಐಸಿಸಿ ಅಶೋಕ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ (ಚಾನ್ಸೆರಿ ಮತ್ತು ಕಾನ್ಸುಲರ್ ಮುಖ್ಯಸ್ಥ) ಡಾ. ವೈಭವ್ ಎ. ತಂಡಲೆ ಅವರ ಸಮ್ಮುಖದಲ್ಲಿ ಕತಾರ್‌ಗೆ ಭಾರತದ ರಾಯಭಾರಿಯಾಗಿರುವ ವಿಪುಲ್, ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಐಸಿಸಿ ವ್ಯವಸ್ಥಾಪಕ ಸಮಿತಿಯ ಸದಸ್ಯರಿಗೆ ಅವರ ಕೊಡುಗೆಗಳು ಮತ್ತು ಸೇವೆಯನ್ನು ಗುರುತಿಸಿ ಮೆಚ್ಚುಗೆಯ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.

ಕತಾರ್‌ನ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರ ದೋಹಾದ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಸನ್ಮಾನಿಸಿತು, ವಿಶೇಷವಾಗಿ ಅವರು ಸತತ 4 ವರ್ಷಗಳ ಕಾಲ ಭಾರತೀಯ ಸಾಂಸ್ಕೃತಿಕ ಕೇಂದ್ರ ದೋಹಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Indian Embassy

ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ದಕ್ಷಿಣ ಕರ್ನಾಟಕದ ಬೈಂದೂರು ಮೂಲದವರು. ಕಳೆದ 2 ದಶಕಗಳಿಂದ ಕತಾರ್‌ನಲ್ಲಿ ವಾಸಿಸುತ್ತಿರುವ ಅವರು, ಐ.ಸಿ.ಬಿ.ಎಫ್ ಜಂಟಿ ಕಾರ್ಯದರ್ಶಿಯಾಗಿ, ಕರ್ನಾಟಕ ಸಂಘ ಕತಾರ್‌ನ ಉಪಾಧ್ಯಕ್ಷರಾಗಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಮತ್ತು ಪ್ರಸ್ತುತ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರಾಗಿ ಭಾರತೀಯ ಸಮುದಾಯಕ್ಕೆ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ ಸಮಾಜ ಸೇವಾ ಕೈಂಕರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.