ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ನ್ಯಾಯ ಸಿಕ್ಕಿದೆ, ಭಾರತ ಮರೆಯುವುದಿಲ್ಲ”: ಪಹಲ್ಗಾಮ್ ದಾಳಿ ವಾರ್ಷಿಕೋತ್ಸವಕ್ಕೂ ಮುನ್ನ ಭಾರತೀಯ ಸೇನೆಯ ಮಹತ್ವದ ಸಂದೇಶ

Indian Army’s significant message: ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕಾ ದಾಳಿಯ ಮೊದಲ ವಾರ್ಷಿಕೋತ್ಸವದ ಮುನ್ನ, ಭಾರತೀಯ ಸೇನೆಯು ದೃಢಸಂಕಲ್ಪ ಮತ್ತು ಏಕತೆ ಎರಡನ್ನೂ ಪ್ರತಿಬಿಂಬಿಸುವ ಪ್ರಬಲ ಸಂದೇಶವನ್ನು ನೀಡಿದೆ. ನ್ಯಾಯ ಸಿಕ್ಕಿದೆ. ಭಾರತ ಒಗ್ಗಟ್ಟಿನಿಂದ ನಿಂತಿದೆ ಎಂದು ಸೇನೆಯು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಪಹಲ್ಗಾಮ್ ದಾಳಿಗೆ 1 ವರ್ಷ: ನ್ಯಾಯ ಸಿಕ್ಕಿದೆ, ಭಾರತ ಮರೆಯಲ್ಲ ಎಂದ ಸೇನೆ

ಪಹಲ್ಗಾಮ್ ದಾಳಿ ವಾರ್ಷಿಕೋತ್ಸವಕ್ಕೂ ಮುನ್ನ ಭಾರತೀಯ ಸೇನೆಯ ಮಹತ್ವದ ಸಂದೇಶ -

Priyanka P
Priyanka P Apr 21, 2026 3:38 PM

ನವದೆಹಲಿ, ಏ.21: ಪಹಲ್ಗಾಮ್‌ನಲ್ಲಿ (Pahalgam attack) ನಡೆದ ಮಾರಕ ಭಯೋತ್ಪಾದಕಾ ದಾಳಿಯ ಮೊದಲ ವಾರ್ಷಿಕೋತ್ಸವದ ಮುನ್ನ, ಭಾರತೀಯ ಸೇನೆಯು (Indian Army) ದೃಢಸಂಕಲ್ಪ ಮತ್ತು ಏಕತೆ ಎರಡನ್ನೂ ಪ್ರತಿಬಿಂಬಿಸುವ ಪ್ರಬಲ ಸಂದೇಶವನ್ನು ನೀಡಿದೆ. ಮಾನವೀಯತೆಯ ಗಡಿಗಳನ್ನು ದಾಟಿದಾಗ, ಪ್ರತಿಕ್ರಿಯೆ ನಿರ್ಣಾಯಕವಾಗಿರುತ್ತದೆ. ನ್ಯಾಯ ಸಿಕ್ಕಿದೆ. ಭಾರತ ಒಗ್ಗಟ್ಟಿನಿಂದ ನಿಂತಿದೆ ಎಂದು ಸೇನೆಯು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಪಹಲ್ಗಾಮ್ ದುರಂತ

ಈ ದಾಳಿಯು ಏಪ್ರಿಲ್ 22, 2025 ರಂದು ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಮಿನಿ ಸ್ವಿಟ್ಜರ್‌ಲ್ಯಾಂಡ್ ಎಂದು ಕರೆಯಲ್ಪಡುವ ಬೈಸರನ್ ಹುಲ್ಲುಗಾವಲಿನಲ್ಲಿ ನಡೆಯಿತು. ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಸ್ಥಳೀಯ ವ್ಯಕ್ತಿ ಸೇರಿದಂತೆ 25 ಮಂದಿ ಪ್ರವಾಸಿಗರು ಮೃತಪಟ್ಟರು. ಈ ಘಟನೆಯು ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರದೇಶದ ಭದ್ರತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿತು.

ಇಲ್ಲಿದೆ ಪೋಸ್ಟ್:



ಈ ಭೀಕರ ದಾಳಿಯ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಾದ್ಯಂತ ಸುಮಾರು 44 ಪ್ರವಾಸಿ ತಾಣಗಳನ್ನು ಮುಚ್ಚಿದರು. ಹೆಚ್ಚಿನ ಸ್ಥಳಗಳು ಮತ್ತೆ ತೆರೆದಿದ್ದರೂ, ಬೈಸರನ್ ಮಾತ್ರ ಪ್ರವಾಸಿಗರಿಗೆ ಮುಚ್ಚಲ್ಪಟ್ಟಿದೆ. ಮತ್ತೊಂದು ಜನಪ್ರಿಯ ತಾಣವಾದ ಚಂದನ್ವಾರಿ ಕೂಡ ಇನ್ನೂ ಮುಚ್ಚಲ್ಪಟ್ಟಿದೆ. ಮತ್ತೆ ಯಾವಾಗ ತೆರೆಯಲಾಗುತ್ತದೆ ಎಂಬುದನ್ನು ಘೋಷಿಸಲಾಗಿಲ್ಲ.

ಪಹಲ್ಗಾಮ್ ದಾಳಿಯ ನಂತರ ಮುಚ್ಚಲಾಗಿದ್ದ ಜಮ್ಮು-ಕಾಶ್ಮೀರದ ಪ್ರವಾಸಿ ತಾಣಗಳು ಮತ್ತೆ ಓಪನ್

ಕಾಶ್ಮೀರದಾದ್ಯಂತ ಬಿಗಿ ಭದ್ರತೆ

ಈ ಭಯೋತ್ಪಾದನಾ ದಾಳಿಗೆ ಒಂದು ವರ್ಷವಾಗುತ್ತಿದೆ. ಈ ನಿಟ್ಟಿನಲ್ಲಿ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಾದ್ಯಂತ ಮುಂಜಾಗ್ರತಾ ಕ್ರಮವನ್ನು ಹೆಚ್ಚಿಸಿವೆ. ಸಾರ್ವಜನಿಕರಲ್ಲಿ ಭಯಭೀತರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾವುದೇ ಸಂಭಾವ್ಯ ಬೆದರಿಕೆಗಳನ್ನು ತಡೆಗಟ್ಟಲು ಭದ್ರತಾ ಸಿಬ್ಬಂದಿ ನಿಯಮಿತವಾಗಿ ಪರಿಶೀಲನೆಗಳನ್ನು ನಡೆಸುತ್ತಿದ್ದಾರೆ.

ಇನ್ನು ಈ ಸಂಬಂಧ ಹಲವು ಕಡೆಗಳಲ್ಲಿ ಭದ್ರತಾ ಸಭೆಗಳನ್ನು ನಡೆಸಲಾಗಿದೆ. ಪುಲ್ವಾಮಾದಲ್ಲಿ, ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಜಾವೈದ್ ಇಕ್ಬಾಲ್ ಮಟ್ಟೂ ಅವರು ಅಪರಾಧ ಮತ್ತು ಭದ್ರತೆಯ ವಿವರವಾದ ಪರಿಶೀಲನೆಯ ನೇತೃತ್ವ ವಹಿಸಿದ್ದರು. ಭಯೋತ್ಪಾದನಾ ನಿಗ್ರಹ ಪ್ರಯತ್ನಗಳು, ಗುಪ್ತಚರ ಮಾಹಿತಿ ಮತ್ತು ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚರ್ಚೆಗಳು ಕೇಂದ್ರೀಕರಿಸಿದವು.

ಅವಂತಿಪೋರಾ ಮತ್ತು ಶ್ರೀನಗರದಲ್ಲೂ ಇದೇ ರೀತಿಯ ಚರ್ಚೆಗಳನ್ನು ನಡೆಸಲಾಯಿತು. ಅಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಿ.ವಿ. ಸುಂದೀಪ್ ಚಕ್ರವರ್ತಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಿದರು.