ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Extreme Poverty Free State: ದೇಶದ ಮೊದಲ ಬಡತನ ಮುಕ್ತ ರಾಜ್ಯ ಕೇರಳ: ನವೆಂಬರ್ 1ರಂದು ಘೋಷಣೆ

ಕೇರಳ ಶೀಘ್ರದಲ್ಲೇ ಬಡವರಿಲ್ಲದ ರಾಜ್ಯ ಎನಿಸಿಕೊಳ್ಳಲಿದೆ. ದೇಶದ ಮೊದಲ ತೀವ್ರ ಬಡತನ ಮುಕ್ತ ರಾಜವೆಂದು ಕೇರಳವನ್ನು ನವೆಂಬರ್ 1ರಂದು ಘೋಷಿಸಲಾಗುತ್ತದೆ. ತಿರುವನಂತಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವರು ಮತ್ತು ಚಲನಚಿತ್ರ ತಾರೆಯರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಘೋಷಣೆ ಹೊರಡಿಸಲಿದ್ದಾರೆ.

ಬಡವರಿಲ್ಲದ ನಾಡು ಕೇರಳ

-

ತಿರುವನಂತಪುರ: ದೇಶದಲ್ಲೇ ಈಗ ಕೇರಳ (Kerala) ತೀವ್ರ ಬಡತನದಿಂದ (Extreme poverty free state) ಮುಕ್ತ ರಾಜ್ಯ ಎನಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 1ರಂದು ತಿರುವನಂತಪುರದಲ್ಲಿ (Thiruvananthapuram) ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವರು ಮತ್ತು ಚಲನಚಿತ್ರ ತಾರೆಯರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Chief Minister Pinarayi Vijayan) ಕೇರಳವನ್ನು ಭಾರತದ ಮೊದಲ ತೀವ್ರ ಬಡತನ ಮುಕ್ತ ರಾಜ್ಯವೆಂದು ಘೋಷಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೇರಳ ರಾಜ್ಯ ಸ್ಥಾಪನೆಯಾದ (Kerala’s birth anniversary) ದಿನವೇ ಈ ಗೌರವ ದೊರೆಯಲಿದೆ.

ನವೆಂಬರ್ 1 ಕೇರಳ ರಾಜ್ಯದ ಜನ್ಮ ದಿನ. ಇದೇ ದಿನದಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳವನ್ನು ತೀವ್ರ ಬಡತನ ಮುಕ್ತ ರಾಜ್ಯ ಎಂದು ಅಧಿಕೃತವಾಗಿ ಘೋಷಿಸಲಿದ್ದಾರೆ. ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಟ, ಸಂಸದ ಕಮಲ್ ಹಾಸನ್, ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಲ್ಲದೇ ರಾಜ್ಯದ ಎಲ್ಲ ಸಚಿವರ ಸಮ್ಮುಖದಲ್ಲಿ ಈ ಘೋಷಣೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿರೋಧ ಪಕ್ಷದ ನಾಯಕರನ್ನೂ ಸಮಾರಂಭಕ್ಕೂ ಆಹ್ವಾನಿಸಲಾಗುತ್ತದೆ.

ಕೇರಳ ಸರ್ಕಾರದ ಎಕ್ಸ್‌ ಪೋಸ್ಟ್‌:



ಇದನ್ನೂ ಓದಿ: BS Yediyurappa: ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಕೇಸ್‌; ಆದೇಶ ಕಾಯ್ದಿರಿಸಿದ ಹೈಕೋರ್ಟ್

ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸ್ಥಳೀಯ ಸ್ವ-ಸರ್ಕಾರಿ ಸಚಿವ ಎಂ.ಬಿ. ರಾಜೇಶ್ ಮತ್ತು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಕೇರಳವು ತೀವ್ರ ಬಡತನವನ್ನು ನಿರ್ಮೂಲನೆ ಮಾಡುವ ಮೂಲಕ ಮತ್ತೊಮ್ಮೆ ಇತಿಹಾಸ ನಿರ್ಮಿಸುತ್ತಿದೆ. ಈ ಗುರಿಯನ್ನು ಸಾಧಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜತೆಗೆ ಈ ಗುರಿಯನ್ನು ಸಾಧಿಸಿದ ವಿಶ್ವದ ಎರಡನೇ ಪ್ರದೇಶ ಎಂದು ತಿಳಿಸಿದರು.

ರಾಜ್ಯದ ಜನ್ಮ ದಿನದಂದೇ ಕೇರಳಕ್ಕೆ ತೀವ್ರ ಬಡತನ ಮುಕ್ತ ರಾಜ್ಯ ಎಂದು ಘೋಷಿಸಲಾಗುತ್ತದೆ. ಈ ಮೈಲಿಗಲ್ಲನ್ನು ಏಕಕಾಲದಲ್ಲಿ ಗುರುತಿಸಲು ರಾಜ್ಯದ ಎಲ್ಲ ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ತೀವ್ರ ಬಡತನ ಮುಕ್ತ ಎಂದರೇನು?

ತೀವ್ರ ಬಡತನ ಎಂದರೆ ವ್ಯಕ್ತಿಗಳು ಅಥವಾ ಕುಟುಂಬಗಳು ಎಂದರೆ ಆಹಾರ, ವಸತಿ, ಬಟ್ಟೆ, ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಅವಶ್ಯಕತೆಗಳನ್ನು ಸಹ ಪಡೆಯಲು ಸಾಧ್ಯವಾಗದವರು.

ಇದನ್ನೂ ಓದಿ: MB Patil: ಬೆಂಗಳೂರು 2ನೇ ಏರ್‌ಪೋರ್ಟ್‌ ನಿರ್ಮಾಣದ ಬಗ್ಗೆ ಎಂ.ಬಿ. ಪಾಟೀಲ್‌ ಮಹತ್ವದ ಮಾಹಿತಿ

ಒಂದು ಕುಟುಂಬ ದಿನಕ್ಕೆ 180 ರೂ.ಗಿಂತಲೂ ಕಡಿಮೆ ಆದಾಯ ಹೊಂದಿದ್ದರೆ ಅವರನ್ನು ತೀವ್ರ ಬಡವರು ಎಂದು ವಿಶ್ವ ಬ್ಯಾಂಕ್ ಗುರುತಿಸಿದೆ. ಭಾರತದ ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕಗಳು (MPI) ತೀವ್ರ ಬಡತನವನ್ನು ಗುರುತಿಸಲು ಪೌಷ್ಟಿಕಾಂಶ, ವಸತಿ, ನೈರ್ಮಲ್ಯ, ಶಿಕ್ಷಣ ಮತ್ತು ಮೂಲಭೂತ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದನ್ನು ಮಾನದಂಡವಾಗಿ ಬಳಸುತ್ತಿದೆ.