ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ಗುಜರಾತ್‌ನ ವದಿನಾರ್‌ ಬಂದರಿಗೆ ಸುರಕ್ಷಿತವಾಗಿ ಬಂತು ಎಲ್‌ಪಿಜಿ ಟ್ಯಾಂಕರ್ ಜಗ ವಸಂತ್ ಹಡಗು

LPG tanker Jag Vasant: ಭಾರತದ ಧ್ವಜ ಹೊತ್ತ ಜಗ ವಸಂತ್ ಟ್ಯಾಂಕರ್, ಇರಾನ್ ಅನುಮತಿಸಿದ ನಂತರ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಾ ಶುಕ್ರವಾರ (ಮಾರ್ಚ್‌ 27) ಸಂಜೆ ವದಿನಾರ್‌ನ ಪಶ್ಚಿಮ ಕರಾವಳಿಯ ಕಡಲಾಚೆಯ ಟರ್ಮಿನಲ್‌ನಲ್ಲಿ ಲಂಗರು ಹಾಕಿದೆ. ಪರ್ಷಿಯನ್ ಕೊಲ್ಲಿಯಿಂದ ಎಲ್‌ಪಿಜಿ ಹೊತ್ತ ಈ ಹಡಗು ಭಾರತಕ್ಕೆ ಆಗಮಿಸಿದೆ.

ಗುಜರಾತ್‌ಗೆ ಸುರಕ್ಷಿತವಾಗಿ ಬಂತು ಎಲ್‌ಪಿಜಿ ಟ್ಯಾಂಕರ್ ಜಗ ವಸಂತ್

ಜಗ ವಸಂತ್ ಎಲ್‌ಪಿಜಿ ಟ್ಯಾಂಕರ್ -

Priyanka P
Priyanka P Mar 28, 2026 6:33 PM

ಗಾಂಧಿನಗರ, ಮಾ. 28: ಪರ್ಷಿಯನ್ ಕೊಲ್ಲಿಯಿಂದ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (LPG) ಹೊತ್ತ ಭಾರತದ ಧ್ವಜ ಹೊಂದಿರುವ ಜಗ ವಸಂತ್ (Jag Vasant) ಟ್ಯಾಂಕರ್ ಗುಜರಾತ್‌ ಕರಾವಳಿಗೆ ಸುರಕಿತವಾಗಿ ಬಂದಿದೆ. ಇರಾನ್ ಅನುಮತಿಸಿದ ನಂತರ ಹೊರ್ಮುಜ್ (Hormuz) ಜಲಸಂಧಿಯ ಮೂಲಕ ಸಾಗಿ ಶುಕ್ರವಾರ (ಮಾ. 27) ಸಂಜೆ ವದಿನಾರ್‌ನ ಪಶ್ಚಿಮ ಕರಾವಳಿಯ ಕಡಲಾಚೆಯ ಟರ್ಮಿನಲ್‌ನಲ್ಲಿ ಲಂಗರು ಹಾಕಿದೆ (LPG tanker) ಎಂದು ದೀನ್‌ದಯಾಳ್ ಬಂದರಿನ ವಕ್ತಾರರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಸಂಘರ್ಷದ, ಹೊರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆಯ ನಡುವೆ ಈ ಸಂತೋಷದ ವಿಚಾರ ಹೊರಬಂದಿದೆ. 14 ಸಿಬ್ಬಂದಿ ಸುರಕ್ಷಿತರಾಗಿದ್ದು, ವೈದ್ಯಕೀಯವಾಗಿ ಸದೃಢರಾಗಿದ್ದಾರೆ ಎಂದು ಕಡಲಾಚೆಯ ಟರ್ಮಿನಲ್ ಅನ್ನು ನಿರ್ವಹಿಸುವ ದೀನದಯಾಳ್ ಬಂದರಿನ ವಕ್ತಾರ ಓಂಪ್ರಕಾಶ್ ದದ್ಲಾನಿ ಹೇಳಿದ್ದಾರೆ.

ಶುಕ್ರವಾರ ರಾತ್ರಿ 8 ಗಂಟೆಗೆ ಹಡಗು ಲಂಗರು ಹಾಕಿತು. ಸಾಮಾನ್ಯ ವ್ಯತ್ಯಾಸಗಳು ಇದ್ದ ಕಾರಣ ಅಂದಾಜು ಮಾಡಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಸಿಬ್ಬಂದಿ 230 ಮೀಟರ್ ಉದ್ದದ ಹಡಗನ್ನು ಕೌಶಲ್ಯದಿಂದ ಮುನ್ನಡೆಸಿದರು. ಅಂತಾರಾಷ್ಟ್ರೀಯ ಜಲಮಾರ್ಗವನ್ನು ಅವರು ಸುರಕ್ಷಿತವಾಗಿ ದಾಟಿ ಬಂದರು ಎಂದು ಅಧಿಕಾರಿ ಹೇಳಿದರು.

ಭಾರತದ ಎಲ್‌ಪಿಜಿ ಟ್ಯಾಂಕರ್ ಹಡಗು ಹೊರ್ಮುಜ್ ಜಲಸಂಧಿ ದಾಟಿದ್ದು ಹೇಗೆ? ಇಲ್ಲಿದೆ ಡಿಟೇಲ್ಸ್

ಭಾರತ್ ಪೆಟ್ರೋಲಿಯಂ ಕಾರ್ಪ್-ಚಾರ್ಟರ್ಡ್ ಟ್ಯಾಂಕರ್ 47,000 ಟನ್ ಎಲ್‌ಪಿಜಿ ಸರಕು ಹೊಂದಿದೆ. ಇದು ದೇಶದಲ್ಲಿ ಹೆಚ್ಚು ಬಳಸಲಾಗುವ ಅಡುಗೆ ಇಂಧನವಾಗಿದ್ದು, ಇದನ್ನು ಮುಂದಿನ ಸಾಗಣೆಗಾಗಿ ಶನಿವಾರ ಮತ್ತೊಂದು ಹಡಗಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಎಲ್‌ಪಿಜಿ ಟ್ಯಾಂಕರ್, ಇಂಡಿಯನ್ ಆಯಿಲ್ ಕಾರ್ಪ್-ಚಾರ್ಟರ್ಡ್ ಪೈನ್ ಗ್ಯಾಸ್, ಭಾರತೀಯ ಪ್ರದೇಶವನ್ನು ಸುರಕ್ಷಿತವಾಗಿ ತಲುಪಿದೆ. ಅಧಿಕಾರಿಗಳು ಅದರ ವಿವರಗಳ ಬಗ್ಗೆ ಅಧಿಕೃತ ದೃಢೀಕರಣವನ್ನು ಸದ್ಯದಲ್ಲೇ ನೀಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇರಾನ್ ದ್ವೀಪಗಳಾದ ಲಾರಾಕ್ ಮತ್ತು ಕೆಶ್ಮ್ ನಡುವಿನ ಕಿರಿದಾದ ಕಾರಿಡಾರ್ ಮೂಲಕ ಟ್ಯಾಂಕರ್‌ಗಳು ಸಾಗಿದವು. ಇರಾನ್ ತನ್ನ ಅನುಮತಿ ಪಡೆದ ಹಡಗುಗಳಿಗೆ ಒಂದು ಮಾರ್ಗವನ್ನು ನಿಗದಿಪಡಿಸಿದೆ. ಈ ಮಾರ್ಗವನ್ನು ಇರಾನಿನ ಪಡೆಗಳು ಮತ್ತು ಅದರ ನೌಕಾಪಡೆಯು ಮೇಲ್ವಿಚಾರಣೆ ಮಾಡುತ್ತಿದೆ. ಇದು ಜಲಸಂಧಿಯನ್ನು ದಾಟಿದ ಎರಡು ಹಿಂದಿನ ಭಾರತೀಯ ಹಡಗುಗಳಿಗೂ ಸಹಾಯ ಒದಗಿಸಿತು ಎಂದು ಭಾರತೀಯ ಅಧಿಕಾರಿಗಳು ವಿವರಿಸಿದ್ದಾರೆ.

ಕಳೆದ ತಿಂಗಳ ಕೊನೆಯಲ್ಲಿ ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲಿ ದಾಳಿ ನಡೆಸಿದ ನಂತರ ಹೊರ್ಮುಜ್ ಜಲಸಂಧಿಯನ್ನು ಸ್ಥಗಿತಗೊಳಿಸಲಾಯಿತು. ಅದಾದ ಬಳಿಕ ಇರಾನ್‌ ಅನುಮತಿ ನೀಡಿದ ಶಿವಾಲಿಕ್ ಮತ್ತು ಎಂಟಿ ನಂದಾ ದೇವಿ ಎಂಬ ಎರಡು ಎಲ್‌ಪಿಜಿ ಟ್ಯಾಂಕರ್‌ಗಳು ಕಳೆದ ವಾರದ ಆರಂಭದಲ್ಲಿ ಭಾರತದ ಪಶ್ಚಿಮ ಕರಾವಳಿಯನ್ನು ತಲುಪಿದ್ದವು. ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ಸ್ಥಗಿತಗೊಳಿಸಿರುವುದು ಜಾಗತಿಕವಾಗಿ ಕಚ್ಚಾ ತೈಲ, ಅನಿಲ ಮತ್ತು ಅಮೂಲ್ಯ ಸರಕುಗಳ ಹರಿವಿನ ಐದನೇ ಒಂದು ಭಾಗದ ಮೇಲೆ ಪರಿಣಾಮ ಬೀರಿದೆ.