ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಳೆ ನೀಟ್‌ ಮರುಪರೀಕ್ಷೆ; ದೇಶಾದ್ಯಂತ ಬಿಗಿ ಭದ್ರತೆ: ಡ್ರೆಸ್‌ ಕೋಡ್‌ ಹೇಗಿರಬೇಕು? ಎಕ್ಸಾಂ ಸೆಂಟರ್‌ಗೆ ಏನು ತರಬಾರದು?

NEET-UG 2026 RE-test: ಸಾಕಷ್ಟು ಭದ್ರತೆಯ ನಡುವೆ, ಸರ್ಪಗಾವಲಿನಲ್ಲಿ ನೀಟ್-ಯುಜಿ ಮರುಪರೀಕ್ಷೆ ನಾಳೆ (ಜೂನ್‌ 21) ನಡೆಯಲಿದೆ. ಇದಕ್ಕಾಗಿ ದೇಶಾದ್ಯಂತ ವ್ಯಾಪಕ ಸಿದ್ಧತೆ ನಡೆಸಲಾಗಿದೆ. ಮತ್ತೊಮ್ಮೆ ಯಾವುದೇ ಯಡವಟ್ಟು ಆಗದಂತೆ ಎನ್‌ಟಿಎ ಎಚ್ಚರಿಕೆ ವಹಿಸಿದ್ದು, ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ನಾಳೆ ನೀಟ್‌ ಮರುಪರೀಕ್ಷೆ;  ಡ್ರೆಸ್‌ ಕೋಡ್‌ ಹೇಗಿರಬೇಕು?

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Jun 20, 2026 10:37 PM

ದೆಹಲಿ, ಜೂ. 20: ಸಾಕಷ್ಟು ಟೀಕೆಗಳ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಆಯೋಜಿಸಿರುವ ನೀಟ್-ಯುಜಿ (NEET UG 2026) ಮರುಪರೀಕ್ಷೆ ನಾಳೆ (ಜೂನ್‌ 21) ನಡೆಯಲಿದೆ. ಇದಕ್ಕಾಗಿ ದೇಶಾದ್ಯಂತ ವ್ಯಾಪಕ ಸಿದ್ಧತೆ ನಡೆಸಲಾಗಿದೆ. ಮತ್ತೊಮ್ಮೆ ಯಾವುದೇ ಯಡವಟ್ಟು ಆಗದಂತೆ ಎನ್‌ಟಿಎ ಎಚ್ಚರಿಕೆ ವಹಿಸಿದ್ದು, ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ (NEET-UG 2026 RE-test). ಯಾವ ರೀತಿಯ ಬಟ್ಟೆ ತೊಡಬೇಕು? ಪರೀಕ್ಷಾ ಕೇಂದ್ರಕ್ಕೆ ಏನನ್ನು ತರಬೇಕು, ತರಬಾರದು ಎನ್ನುವುದನ್ನು ತಿಳಿಸಿದೆ. ನಿಯಮ ಉಲ್ಲಂಘಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನಿಷೇಧಿಸಲಾಗುವುದು ಎಂದು ಎಚ್ಚರಿಸಿದೆ.

ದೇಶದ ಸುಮಾರು 551 ನಗರಗಳಲ್ಲಿ 5,440 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಅಲ್ಲದೆ ವಿದೇಶದ 14 ಕಡೆಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ. ಅಪರಾಹ್ನ 2ರಿಂದ ಸಂಜೆ 5:15 ತನಕ ಪರೀಕ್ಷೆ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಯಲಿದ್ದು, 1:30ರೊಳಗೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.

ಎನ್‌ಟಿಎ ಪ್ರಕಟಣೆ:



ಈ ನಿಯಮಗಳನ್ನು ಫಾಲೋ ಮಾಡಿ

  • ಪರೀಕ್ಷಾ ಕೇಂದ್ರದೊಳಗೆ ಪಾರದರ್ಶಕ ನೀರಿನ ಬಾಟಲ್‌ಗಳಿಗೆ ಮಾತ್ರ ಅವಕಾಶ.
  • ಅಭ್ಯರ್ಥಿಗಳು ಅಡ್ಮಿಟ್‌ ಕಾರ್ಡ್‌ (ಪ್ರವೇಶ ಪತ್ರ) ಅನ್ನು ಪಾರದರ್ಶಕ ಪೌಚ್‌ನಲ್ಲಿ ಕೊಂಡೊಯ್ಯಬಹುದು.
  • ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಅಥವಾ ಪಾಸ್‌ಪೋರ್ಟ್‌ನಂತಹ ಸರ್ಕಾರದ ಅಧಿಕೃತ ಅಸಲಿ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು.
  • ಅಡ್ಮಿಟ್ ಕಾರ್ಡ್‌ನ ಸ್ಪಷ್ಟ ಪ್ರಿಂಟ್‌ಔಟ್ (ಅದರಲ್ಲಿ ಪಾಸ್‌ಪೋರ್ಟ್ ಅಳತೆಯ ಫೋಟೊ ಅಂಟಿಸಿರಬೇಕು ಮತ್ತು ಪೋಷಕರ ಸಹಿ ಇರಬೇಕು).
  • ಅಟೆಂಡೆನ್ಸ್ ಶೀಟ್‌ನಲ್ಲಿ ಅಂಟಿಸಲು 2 ಎಕ್ಸ್​ಟ್ರಾ ಪಾಸ್‌ಪೋರ್ಟ್ ಅಳತೆಯ ಫೋಟೊ ತರಬೇಕು.
  • ಹಗುರವಾದ ಬಟ್ಟೆಗಳಿಗೆ ಆದ್ಯತೆ ನೀಡಲಾಗಿದ್ದರೂ, ಹೆಚ್ಚುವರಿ ಭದ್ರತಾ ತಪಾಸಣೆಗೆ ಒಳಪಟ್ಟು, ಅಭ್ಯರ್ಥಿಗಳು ಪೂರ್ಣ ತೋಳಿನ ಉಡುಪುಗಳನ್ನು ಅಥವಾ ಉಣ್ಣೆಯ ಬಟ್ಟೆಗಳನ್ನು ಧರಿಸಬಹುದು.
  • ಹೈಹೀಲ್ಡ್‌ ಪಾದರಕ್ಷೆಗಳನ್ನು ಧರಿಸುವ ಅಭ್ಯರ್ಥಿಗಳನ್ನು ಹೆಚ್ಚುವರಿ ತಪಾಸಣೆಗೆ ಒಳಪಡಿಸಬಹುದು.
  • ಧಾರ್ಮಿಕ ಅಥವಾ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 1ರಿಂದ 2 ಗಂಟೆ ಮುಂಚಿತವಾಗಿ ತಲುಪಬೇಕು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮಾರ್ಗಸೂಚಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಪರೀಕ್ಷಾ ಹಾಲ್‌ಗೆ ಕೊಂಡೊಯ್ಯಲೇಬಾರದ ವಸ್ತುಗಳು

  • ಮೊಬೈಲ್‌ ಫೋನ್‌
  • ಸ್ಮಾರ್ಟ್‌ವಾಚ್‌
  • ಬ್ಲ್ಯೂಟೂತ್‌ ಉಪಕರಣ
  • ಇಯರ್‌ಫೋನ್‌
  • ಯಾವುದೇ ಇತರ ಸಂವಹನ ಉಪಕರಣ
  • ಲೋಹದ ವಸ್ತು
  • ದೊಡ್ಡ ಗಾತ್ರದ ಬೆಲ್ಟ್‌ ಬಕಲ್‌
  • ಹೆವಿ ಜ್ಯುವೆಲ್ಲರಿ

ನೀಟ್‌ ಪರೀಕ್ಷೆ ಅಕ್ರಮ; ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡಿ ಎಂದು ಪ್ರಧಾನಿಗೆ ಪತ್ರ ಬರೆದ CJP

2 ಲಕ್ಷಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ

ಒಟ್ಟು 22 ಲಕ್ಷಕ್ಕಿಂತ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಭದ್ರತೆಗಾಗಿ 2 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ 1,38,560 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಹಲವು ಹಂತದ ತಪಾಸಣಾ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಭ್ಯರ್ಥಿಗಳು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30ರೊಳಗೆ ಪರೀಕ್ಷಾ ಕೇಂದ್ರ ತಲುಪಬೇಕು. 1:30ರ ನಂತರ ಆಗಮಿಸುವ ಅಭ್ಯರ್ಥಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.