ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಹಮದಾಬಾದ್ ವಿಮಾನ ದುರಂತಕ್ಕೆ ಒಂದು ವರ್ಷ: ಬದುಕುಳಿದ ಏಕೈಕ ವ್ಯಕ್ತಿ ಈಗ ಹೇಗಿದ್ದಾರೆ?

Ahmedabad Plane Crash: ಅಹಮದಾಬಾದ್ ವಿಮಾನ ದುರಂತ ಭಾರತದ ಅತ್ಯಂತ ಮಾರಕ ವಾಯುಯಾನ ದುರಂತಗಳಲ್ಲಿ ಒಂದಾಗಿದೆ. ದುರಂತದ ಘಟನೆಯನ್ನು ನೆನಪಿಸಿಕೊಂಡ ವಿಶ್ವಶ್ ಕುಮಾರ್ ರಮೇಶ್ (ಬದುಕುಳಿದ ವ್ಯಕ್ತಿ), ಆ ಕಹಿ ನೆನಪು ಇನ್ನೂ ಮಾಸಿಲ್ಲ ಎಂದು ಹೇಳಿದ್ದಾರೆ. ಬದುಕುಳಿದಿರುವುದು ಮನಃಶಾಂತಿಯನ್ನು ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಮನಃಶಾಂತಿ ನೀಡಿಲ್ಲ ಎಂದ ದುರಂತದಲ್ಲಿ ಬದುಕುಳಿದ ವ್ಯಕ್ತಿ

ಮನಃಶಾಂತಿಯಿಲ್ಲ ಎಂದ ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿ -

Priyanka P
Priyanka P Jun 12, 2026 8:54 PM

ನವದೆಹಲಿ, ಜೂ.12: ಅಹಮದಾಬಾದ್ ವಿಮಾನ ದುರಂತ (Ahmedabad Plane Crash) ಸಂಭವಿಸಿ ಒಂದು ವರ್ಷವಾಗಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ 171, ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಟೇಕಾಫ್ ಆದ ನಿಮಿಷಗಳಲ್ಲೇ ಪತನಗೊಂಡಿತ್ತು. ಜೂನ್ 12 ರಂದು ನಡೆದ ಈ ದುರಂತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 260 ಜನರು ಮೃತಪಟ್ಟರು. ವೈದ್ಯಕೀಯ ಹಾಸ್ಟೆಲ್‍ ಮೇಲೆ ಬಿದ್ದ ಪರಿಣಾಮ ಅಲ್ಲಿದ್ದ 19 ಮಂದಿ ಸಾವಿಗೀಡಾಗಿದ್ದರು. ಇದು ಭಾರತದ ಅತ್ಯಂತ ಮಾರಕ ವಾಯುಯಾನ ದುರಂತಗಳಲ್ಲಿ ಒಂದಾಗಿದೆ. ದುರ್ಘಟನೆಯಲ್ಲಿ ಓರ್ವ ಪ್ರಯಾಣಿಕ ಪಾರಾಗಿದ್ದರು. ಭಾರತೀಯ ಮೂಲದ ಬ್ರಿಟೀಷ್ ಪ್ರಜೆಯಾಗಿರುವ ವಿಶ್ವಶ್ ಕುಮಾರ್ ರಮೇಶ್ (Vishwash Kumar Ramesh) ದುರಂತದಲ್ಲಿ ಬದುಕುಳಿದವರು.

ದುರಂತದ ಘಟನೆಯನ್ನು ನೆನಪಿಸಿಕೊಂಡ ವಿಶ್ವಶ್ ಕುಮಾರ್ ರಮೇಶ್, ಆ ಕಹಿ ನೆನಪು ಇನ್ನೂ ಮಾಸಿಲ್ಲ ಎಂದು ಹೇಳಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವುದು ರಮೇಶ್ ಅವರಿಗೆ ಸಮಾಧಾನವನ್ನಾಗಲಿ ಅಥವಾ ಮನಃಶಾಂತಿಯನ್ನಾಗಲಿ ನೀಡಿಲ್ಲವಂತೆ. ವಿಮಾನ ದುರಂತದಲ್ಲಿ ತಮ್ಮ ಕಿರಿಯ ಸಹೋದರ ಅಜಯ್ ಅವರನ್ನು ಕಳೆದುಕೊಂಡಿರುವ 39 ವರ್ಷದ ರಮೇಶ್ ಇನ್ನೂ ದುಃಖ, ಮಾನಸಿಕ ಆಘಾತ, ದುರಂತಕ್ಕೆ ಕಾರಣವಾದ ಅಂಶಗಳ ಕುರಿತು ಉತ್ತರ ಸಿಗದ ಪ್ರಶ್ನೆಗಳೊಂದಿಗೆ ಹೋರಾಡುತ್ತಿದ್ದಾರೆ.

ವಿಪತ್ತು ಸಂಭವಿಸಿದ ದಿನವೇ ಆಘಾತ ಕೊನೆಗೊಂಡಿಲ್ಲ ಎಂಬುದನ್ನು ಅನೇಕ ಜನರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೇ ಇರಬಹುದು ಎಂದು ರಮೇಶ್ ತಿಳಿಸಿದರು. "ನಾನು ಗಮನಾರ್ಹವಾದ ಮಾನಸಿಕ ಗಾಯಗಳು, ನನ್ನ ಸಹೋದರನ ನಷ್ಟ ಮತ್ತು ಇದು ಹೇಗೆ ಮತ್ತು ಏಕೆ ಸಂಭವಿಸಿತು ಎಂಬುದರ ಬಗ್ಗೆ ಉತ್ತರಿಸಲಾಗದ ನಿರಂತರ ಪ್ರಶ್ನೆಗಳೊಂದಿಗೆ ಬದುಕುತ್ತಿದ್ದೇನೆ.

ಏರ್ ಇಂಡಿಯಾ ದುರಂತಕ್ಕೆ ಒಂದು ವರ್ಷ; 547 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕೇಂದ್ರ ಸ್ಥಾಪನೆ, ಗುಜರಾತ್ ಸರ್ಕಾರ ಘೋಷಣೆ

“ನಾನು ಇನ್ನೂ ಗಂಭೀರವಾದ ಮಾನಸಿಕ ಗಾಯಗಳೊಂದಿಗೆ ಬದುಕುತ್ತಿದ್ದೇನೆ. ನನ್ನ ಸಹೋದರನನ್ನು ಕಳೆದುಕೊಂಡ ನೋವು ಕಾಡುತ್ತಿದೆ. ಈ ದುರಂತ ಹೇಗೆ ಮತ್ತು ಏಕೆ ಸಂಭವಿಸಿತು ಎಂಬುದರ ಬಗ್ಗೆ ಇನ್ನೂ ಉತ್ತರ ಸಿಗದ ಪ್ರಶ್ನೆಗಳು ನಿರಂತರವಾಗಿ ನನ್ನನ್ನು ಕಾಡುತ್ತಿವೆ” ಎಂದು ಅವರು ಹೇಳಿದ್ದಾರೆ.

ಏರ್ ಇಂಡಿಯಾ 171 ವಿಮಾನ ದುರಂತದಲ್ಲಿ ಏಕೈಕವಾಗಿ ಬದುಕುಳಿದ ಅವರು ಯುನೈಟೆಡ್ ಕಿಂಗ್‌ಡಮ್‌ನ ಲೀಸೆಸ್ಟರ್‌ ನಗರದಲ್ಲಿ ಪತ್ನಿ ಹಿರಲ್, ಐದು ವರ್ಷದ ಪುತ್ರ ದಿವಾಂಗ್, ತಂದೆ-ತಾಯಿ ಹಾಗೂ ತಮ್ಮನೊಂದಿಗೆ ವಾಸಿಸುತ್ತಿದ್ದಾರೆ. ದೈಹಿಕ ಗಾಯಗಳು ಗುಣಮುಖವಾಗಿದ್ದರೂ, ವಿಮಾನದಲ್ಲಿದ್ದ ಉಳಿದ ಎಲ್ಲರೂ ಮೃತಪಟ್ಟ ದುರಂತದಿಂದ ಬದುಕುಳಿದಿರುವ ಮಾನಸಿಕ ಆಘಾತವನ್ನು, ಅದರಲ್ಲೂ ತಮ್ಮ ಸಹೋದರನನ್ನು ಕಳೆದುಕೊಂಡ ನೋವನ್ನು ಮರೆಯುವುದು ಇನ್ನೂ ಅಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

“ಒಂದು ವರ್ಷ ಕಳೆದರೂ, ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ಉತ್ತರಗಳನ್ನು ಹುಡುಕುತ್ತಿದ್ದೇನೆ” ಎಂದು ರಮೇಶ್ ಹೇಳಿದ್ದಾರೆ. “ಆ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮಾತ್ರವಲ್ಲ. ಅವು ಪ್ರತಿಯೊಂದು ಬಾಧಿತ ಕುಟುಂಬದ ಮನಸ್ಸಿನಲ್ಲಿಯೂ ಇವೆ ಎಂದು ನನಗೆ ತಿಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಜನರಿಗೆ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಉತ್ತರಗಳು ಬೇಕಾಗುತ್ತವೆ. ಏನಾಯಿತು ಎಂಬುದನ್ನು ಯಾವುದೂ ಎಂದಿಗೂ ಬದಲಾಯಿಸುವುದಿಲ್ಲ” ಎಂದು ಅವರು ಹೇಳಿದರು.