ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ಆಸ್ಪತ್ರೆಯಲ್ಲಿ ಘೋರ ದುರಂತ; ಹೊಟ್ಟೆ ಮೇಲೆ ಫ್ಯಾನ್ ಬಿದ್ದು ರೋಗಿ ಸಾವು: ವಿಡಿಯೊ ವೈರಲ್‌

Patient Dies After Ceiling Fan Falls: ಸೀಲಿಂಗ್ ಫ್ಯಾನ್ ಬಿದ್ದು 42 ವರ್ಷದ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯ ಗುರು ತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಯಲ್ಲಿ ನಡೆದಿದೆ. ಆದರೆ ರೋಗಿಯು ಸೀಲಿಂಗ್ ಫ್ಯಾನ್ ಘಟನೆಯಿಂದಲ್ಲ, ಬದಲಾಗಿ ಅವರ ಅನಾರೋಗ್ಯದಿಂದ ಮೃತಪ್ಟಟಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.

ದೆಹಲಿ ಆಸ್ಪತ್ರೆಯಲ್ಲಿ ಫ್ಯಾನ್ ಬಿದ್ದು ರೋಗಿ ಸಾವು

ಸಾಂದರ್ಭಿಕ ಚಿತ್ರ -

Priyanka P
Priyanka P Jul 20, 2026 5:02 PM

ನವದೆಹಲಿ, ಜು. 20: ಸೀಲಿಂಗ್ ಫ್ಯಾನ್ ಬಿದ್ದು 42 ವರ್ಷದ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯ (Delhi) ಗುರು ತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಅವರ ಕುಟುಂಬ ಒತ್ತಾಯಿಸಿದೆ. ಫ್ಯಾನ್ ಬಿದ್ದ ಮೂರು ಗಂಟೆಗಳ ನಂತರ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆಸ್ಪತ್ರೆಯ ಆಡಳಿತದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ರೋಗಿಯ ಸಾವಿಗೂ ಸೀಲಿಂಗ್ ಫ್ಯಾನ್ ಬಿದ್ದ ಘಟನೆಗೂ ಸಂಬಂಧವಿಲ್ಲ. ಅನಾರೋಗ್ಯದಿಂದ ಅವರು ಮೃತಪ್ಟಟಿದ್ದಾರೆ ಎಂದು ಆಸ್ಪತ್ರೆ ಹೇಳಿದೆ. ರೋಗಿಯನ್ನು ಅನಿಯಂತ್ರಿತ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಅಥವಾ ಉಸಿರಾಟದ ವೈಫಲ್ಯದೊಂದಿಗೆ ಆಸ್ಪಿರೇಷನ್ ನ್ಯುಮೋನಿಯಾದಿಂದ ಜಟಿಲಗೊಂಡ ಎನ್ಸೆಫಲೋಪತಿಯೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಹೇಳಿದೆ.

ವಿಡಿಯೊ ಇಲ್ಲಿದೆ:



“ನಾನು ಸಹೋದರನನ್ನು ಭೇಟಿ ಮಾಡಲು ವಾರ್ಡ್‌ಗೆ ಹೋಗಿದ್ದಾಗ ರೋಗಿಯ ಮೇಲೆ ಸೀಲಿಂಗ್ ಫ್ಯಾನ್ ಬೀಳುವುದನ್ನು ನೋಡಿದೆ. ನಾನು ತಕ್ಷಣ ಘಟನೆಯ ವಿಡಿಯೊವನ್ನು ರೆಕಾರ್ಡ್ ಮಾಡಿದ್ದೇನೆ. ರೋಗಿಯು ಸುಮಾರು 50 ವರ್ಷ ವಯಸ್ಸಿನವನಂತೆ ಕಾಣುತ್ತಿದ್ದರು. ಕೇವಲ ಒಂದು ದಿನದ ಹಿಂದಷ್ಟೇ ದಾಖಲಾಗಿದ್ದರು. ಘಟನೆಗೆ ಮೊದಲು ಅವರು ಚೆನ್ನಾಗಿದ್ದರು. ಆದರೆ ನಂತರ ನಿಧನರಾದರು” ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಬಲಿಯಾಯ್ತು 18 ತಿಂಗಳ ಮಗು: ಕಂದಮ್ಮನ ಉಸಿರು ನಿಲ್ಲಿಸಿದ ಅನಸ್ತೇಶಿಯ ಓವರ್‌ಡೋಸ್‌

“ಫ್ಯಾನ್ ನರ್ಸ್ ಮೇಲೆ ಬಿದ್ದಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ನಾನು ಅಲ್ಲೇ ಇದ್ದೆ. ರೋಗಿಯ ಮೇಲೆ ಫ್ಯಾನ್ ಬೀಳುವುದನ್ನು ನೋಡಿದೆ. ವೈದ್ಯರು ತಡವಾಗಿ ಆಗಮಿಸಿದರು. ಆಸ್ಪತ್ರೆ ಆಡಳಿತವು ನಿರ್ಲಕ್ಷ್ಯ ವಹಿಸಿದೆ. ರೋಗಿಗಳಿಗೆ ಮೀಸಲಾದ ಫ್ಯಾನ್‌ಗಳು ಮತ್ತು ಹವಾನಿಯಂತ್ರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದರೆ ವೈದ್ಯರು ಹವಾನಿಯಂತ್ರಣ ಸೌಲಭ್ಯಗಳನ್ನು ಹೊಂದಿದ್ದಾರೆ. ಇಲ್ಲಿ ರೋಗಿಗಳ ಜೀವಕ್ಕೆ ಯಾವುದೇ ಬೆಲೆ ಇಲ್ಲ” ಎಂದು ಅವರು ಆರೋಪಿಸಿದ್ದಾರೆ.

ಈ ಘಟನೆ ಶನಿವಾರ (ಜುಲೈ 18) ರಾತ್ರಿ 9.30ರ ಸುಮಾರಿಗೆ ವಾರ್ಡ್ 27ರ ಕ್ಯುಬಿಕಲ್‌ ಪೈಕಿ ಒಂದರಲ್ಲಿ ನಡೆದಿದೆ ಎಂದು ಆಸ್ಪತ್ರೆ ತಿಳಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸೀಲಿಂಗ್ ಫ್ಯಾನ್ ಇದ್ದಕ್ಕಿದ್ದಂತೆ ಸಡಿಲಗೊಂಡು ರೋಗಿಯ ಹಾಸಿಗೆಯ ಮೇಲೆ ಬಿದ್ದು, ಅಕ್ಬರ್ ಅವರ ಹೊಟ್ಟೆಗೆ ಬಡಿದಿದೆ. ಆಸ್ಪತ್ರೆ ಸಿಬ್ಬಂದಿ ತಕ್ಷಣ ಅವರಿಗೆ ಚಿಕಿತ್ಸೆ ನೀಡಿದರು.

ಭಾನುವಾರ (ಜುಲೈ19) ಮಧ್ಯಾಹ್ನ ರೋಗಿ ಅಕ್ಬರ್‌ ಮೃತಪಟ್ಟರು ಎಂದು ಆಸ್ಪತ್ರೆ ತಿಳಿಸಿದೆ. ಅಕ್ಬರ್ ಅವರ ಕುಟುಂಬವು ಘಟನೆಯ ಸಂಪೂರ್ಣ ತನಿಖೆಗೆ ಆಗ್ರಹಿಸಿತು. ಫ್ಯಾನ್ ಇದ್ದಕ್ಕಿದ್ದಂತೆ ಬೇರ್ಪಟ್ಟು ಅಕ್ಬರ್ ಅವರ ಮೇಲೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ವಾರ್ಡ್‌ನಲ್ಲಿದ್ದ ಇತರ ರೋಗಿಗಳ ಸಹಾಯಕರು ಕೂಡ ಆರೋಪಿಸಿದ್ದಾರೆ.

ಆಸ್ಪತ್ರೆ, ಶಾಲೆಗಳ ಕ್ಯಾಂಟೀನ್​ಗಳಲ್ಲಿ ಜಂಕ್‌ಫುಡ್​ ಮಾರಾಟ ನಿಷೇಧಕ್ಕೆ ಸರ್ಕಾರ ಮುಂದು

ವಾರ್ಡ್‌ನಲ್ಲಿರುವ ಹಲವಾರು ಹವಾನಿಯಂತ್ರಣಗಳು ಕಾರ್ಯನಿರ್ವಹಿಸುತ್ತಿಲ್ಲ, ಅವುಗಳ ಭಾಗಗಳು ಕಾಣೆಯಾಗಿವೆ ಎಂದು ಹಲವರು ಪರಿಚಾರಕರು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ರೋಗಿಗಳ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಸ್ಥಿತಿಯನ್ನು ಅವರು ಪ್ರಶ್ನಿಸಿದ್ದಾರೆ. ಸದ್ಯ ಫ್ಯಾನ್ ಅನ್ನು ಬದಲಾಯಿಸಲಾಗಿದೆ.

ಇನ್ನು ರೋಗಿಯ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ರೋಗಿಯ ಸಾವಿಗೆ ಅವರ ಅನಾರೋಗ್ಯವೇ ಕಾರಣ, ಫ್ಯಾನ್ ಬಿದ್ದು ಅವರು ಮೃತಪಟ್ಟಿಲ್ಲ ಎಂದು ಆಸ್ಪತ್ರೆ ವಾದಿಸಿದೆ.