ಸ್ವತಃ ಕಾರು ಡ್ರೈವ್ ಮಾಡಿಕೊಂಡು ಜೋರ್ಡಾನ್‌ನ ಅತೀ ದೊಡ್ಡ ವಸ್ತು ಸಂಗ್ರಹಾಲಯಕ್ಕೆ ಪ್ರಧಾನಿ ಮೋದಿಯನ್ನು ಕರೆದೊಯ್ದ ಕ್ರೌನ್ ಪ್ರಿನ್ಸ್
ಜೋರ್ಡಾನ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯುವರಾಜ ಅಲ್ ಹುಸೇನ್ ಬಿನ್ ಅಬ್ದುಲ್ಲಾ II ಅವರು ದೇಶದ ಅತೀ ದೊಡ್ಡ ವಸ್ತು ಸಂಗ್ರಹಾಲಯಕ್ಕೆ ಕರೆದುಕೊಂಡು ಹೋದರು. ರಾಜ ಅಬ್ದುಲ್ಲಾ II ಅವರ ಆಹ್ವಾನದ ಮೇರೆಗೆ ಜೋರ್ಡಾನ್ ನಲ್ಲಿರುವ ಪ್ರಧಾನಿ ಮೋದಿ ಅವರು ಜೋರ್ಡಾನ್ ನೊಂದು ಐದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
(ಸಂಗ್ರಹ ಚಿತ್ರ) -
ಅಮ್ಮನ್: ಜೋರ್ಡಾನ್ ದೊರೆ ಅಬ್ದುಲ್ಲಾ II ಅವರ ಆಹ್ವಾನದ ಮೇರೆಗೆ ಜೋರ್ಡಾನ್ ನ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ವಿಶೇಷ ಸೂಚನೆಯ ಮೇರೆಗೆ ಕ್ರೌನ್ ಪ್ರಿನ್ಸ್ (Jordanian Crown Prince) ಅಲ್ ಹುಸೇನ್ ಬಿನ್ ಅಬ್ದುಲ್ಲಾ II (Al Hussein bin Abdullah II) ಅವರು ದೇಶದ ಅತೀ ದೊಡ್ಡ ವಸ್ತು ಸಂಗ್ರಹಾಲಯಕ್ಕೆ (Jordan Museum) ಕರೆದುಕೊಂಡು ಹೋದರು. ಕ್ರೌನ್ ಪ್ರಿನ್ಸ್ ಪ್ರವಾದಿ ಮೊಹಮ್ಮದ್ ಅವರ ವಂಶಸ್ಥರಾಗಿದ್ದು, 42ನೇ ತಲೆಮಾರಿನವರಾಗಿದ್ದರೆ. ಇಲ್ಲಿಂದ ಪ್ರಧಾನಿ ಮೋದಿ ಅವರು ಇಥಿಯೋಪಿಯಾ ಮತ್ತು ಒಮಾನ್ ಗೆ ತೆರಳಲಿದ್ದಾರೆ.
ಜೋರ್ಡಾನ್ ಕ್ರೌನ್ ಪ್ರಿನ್ಸ್ ಅಲ್ ಹುಸೇನ್ ಬಿನ್ ಅಬ್ದುಲ್ಲಾ II ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಅತೀ ದೊಡ್ಡ ವಸ್ತುಸಂಗ್ರಹಾಲಯಕ್ಕೆ ಸ್ವತಃ ಕರೆದುಕೊಂಡು ಹೋದರು. ರಾಜ ಅಬ್ದುಲ್ಲಾ II ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಅವರು ಸೋಮವಾರ ಜೋರ್ಡಾನ್ ರಾಜಧಾನಿ ಅಮ್ಮನ್ ಗೆ ಆಗಮಿಸಿದ್ದರು. ನಾಲ್ಕು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಜೋರ್ಡಾನ್ ಬಳಿಕ ಇಥಿಯೋಪಿಯಾ ಮತ್ತು ಒಮಾನ್ ಗೆ ತೆರಳಲಿದ್ದಾರೆ.
ಭಯೋತ್ಪಾದನೆ ನಿಗ್ರಹಕ್ಕೆ ಭಾರತದೊಂದಿಗೆ ಕೈಜೋಡಿಸಿದ ಜೋರ್ಡಾನ್
ಅಮ್ಮನ್ ನ ರಾಸ್ ಅಲ್-ಐನ್ ಜಿಲ್ಲೆಯಲ್ಲಿರುವ ಜೋರ್ಡಾನ್ ವಸ್ತುಸಂಗ್ರಹಾಲಯವು ದೇಶದ ಅತಿದೊಡ್ಡ ವಸ್ತುಸಂಗ್ರಹಾಲಯವಾಗಿದೆ. ಇದು ಮಹತ್ವದ ಪುರಾತತ್ತ್ವ ಮತ್ತು ಐತಿಹಾಸಿಕ ಕಲಾಕೃತಿಗಳಿಗೆ ಹಸರುವಾಸಿಯಾಗಿದೆ. ಈ ವಸ್ತು ಸಂಗ್ರಹಾಲಯವನ್ನು 2014 ರಲ್ಲಿ ನಿರ್ಮಿಸಲಾಗಿತ್ತು. ಇಲ್ಲಿ 1.5 ಮಿಲಿಯನ್ ವರ್ಷಗಳ ಹಿಂದಿನ ಪ್ರಾಣಿಗಳ ಮೂಳೆಗಳು ಮತ್ತು 9,000 ವರ್ಷಗಳಷ್ಟು ಹಳೆಯದಾದ ಐನ್ ಗಜಲ್ ಸುಣ್ಣದ ಪ್ಲಾಸ್ಟರ್ ಪ್ರತಿಮೆಗಳಿವೆ. ಇದು ವಿಶ್ವದ ಅತ್ಯಂತ ಹಳೆಯ ವಸ್ತುವೆಂದು ಪರಿಗಣಿಸಲಾಗಿದೆ.
⚡️ During PM Modi’s visit to Amman, Jordan’s Crown Prince Al Hussein bin Abdullah II personally drove him to the Jordan Museum.
— Nikkhil (@nikkhilbk) December 16, 2025
Worth noting, the Crown Prince is a direct descendant of Prophet Muhammad. pic.twitter.com/yfZbq9UhD4
ಈ ವಸ್ತುಸಂಗ್ರಹಾಲಯವು ಉಪನ್ಯಾಸ ಸಭಾಂಗಣಗಳು, ಹೊರಾಂಗಣ ಪ್ರದರ್ಶನಗಳು, ಗ್ರಂಥಾಲಯ, ಸಂರಕ್ಷಣಾ ಕೇಂದ್ರ ಮತ್ತು ಮಕ್ಕಳ ಚಟುವಟಿಕೆಗಳಿಗೆ ಪ್ರದೇಶವನ್ನು ಒಳಗೊಂಡಿದೆ. ಈ ವಸ್ತುಸಂಗ್ರಹಾಲಯವನ್ನು ರಾಣಿ ರಾನಿಯಾ ನೇತೃತ್ವದ ಸಮಿತಿಯು ಸ್ಥಾಪಿಸಿತ್ತು. ಈ ವಸ್ತು ಸಂಗ್ರಹಾಲಯವು ಅಮ್ಮನ್ ನಗರದ ಮಧ್ಯಭಾಗದ ಬಳಿಯ ರಾಸ್ ಅಲ್-ಐನ್ ಪ್ರದೇಶದಲ್ಲಿದ್ದು , ಗ್ರೇಟರ್ ಅಮ್ಮನ್ ಪುರಸಭೆಯ ಪ್ರಧಾನ ಕಚೇರಿಯ ಪಕ್ಕದಲ್ಲಿದೆ .
ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊದೊಂದಿಗೆ ಆದ್ಯತೆ ವ್ಯಾಪಾರ ಒಪ್ಪಂದಕ್ಕೆ ಮುಂದಾದ ಭಾರತ
ಅಮ್ಮನ್‌ನಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ ಅಬ್ದುಲ್ಲಾ II ಅವರು ಭೇಟಿ ಮಾಡಿ ಐದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು. ಇದರಲ್ಲಿ ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಭಯೋತ್ಪಾದನೆ ನಿಗ್ರಹ, ರಸಗೊಬ್ಬರ, ಕೃಷಿ, ನವೀಕರಿಸಬಹುದಾದ ಇಂಧನ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಎರಡು ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ.