ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೌರಕ್ರಾಂತಿಯ ಪ್ರಧಾನಿಗೆ ಸೌರ ಚರಕದಿಂದಲೇ ನೇಯ್ದ ಶಾಲು; ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿಶೇಷ ಉಡುಗೊರೆ

Bharat Renewable Energy Summit: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೇಲ್ಘಾಟ್ ಪ್ರದೇಶದಲ್ಲಿ ಸೌರಶಕ್ತಿ ಸಹಾಯದಿಂದಲೇ ಸಿದ್ಧಪಡಿಸಿದ್ದ ಶಾಲು ದೆಹಲಿಯಲ್ಲಿ ನಡೆದ ನವೀಕರಿಸಬಹುದಾದ ಇಂಧನ ಶೃಂಗಸಭೆಯ ಶೃಂಗಸಭೆಯ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಗಿರಿಜನರು ನೇಯ್ದ ಪರಿಸರ ಸ್ನೇಹಿ ಶಾಲನ್ನು ಪ್ರಧಾನಿಗೆ ಸಮರ್ಪಿಸಲಾಯಿತು.

ಸೌರಕ್ರಾಂತಿಯ ಪ್ರಧಾನಿಗೆ ಸೌರ ಚರಕದಿಂದಲೇ ನೇಯ್ದ ಶಾಲು;

-

Prabhakara R
Prabhakara R Nov 2, 2026 11:27 PM

ನವದೆಹಲಿ: ಇಲ್ಲಿನ ಭಾರತ್ ಮಂಟಪದಲ್ಲಿ ಸೋಮವಾರ ಜರುಗಿದ ನವೀಕರಿಸಬಹುದಾದ ಇಂಧನ ಶೃಂಗಸಭೆಯಲ್ಲಿ (Bharat Renewable Energy Summit) ಸೌರ ಚರಕದಿಂದಲೇ ನೇಯ್ದ ಬೆಚ್ಚಗಿನ ಶಾಲು ಆಕರ್ಷಣೀಯ ಆಗಿತ್ತು. ನೂರಾರು ರಾಷ್ಟ್ರಗಳು ಪ್ರತಿನಿಧಿಸಿದ್ದ ಈ ಮಹತ್ವದ 'ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ 2026' ಕಾರ್ಯಕ್ರಮದಲ್ಲಿ ಸೌರಕ್ರಾಂತಿಯ ಪ್ರತೀಕವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು, ಸೌರ ಚರಕದಿಂದಲೇ ನೇಯ್ದ ವಿಶೇಷ ಶಾಲೊಂದನ್ನು ಉಡುಗೊರೆಯಾಗಿ ನೀಡಿ ಧನ್ಯತೆ ಅರ್ಪಿಸಿದರು.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೇಲ್ಘಾಟ್ ಪ್ರದೇಶದಲ್ಲಿ ಸೌರಶಕ್ತಿ ಸಹಾಯದಿಂದಲೇ ಸಿದ್ಧಪಡಿಸಿದ್ದ ಈ ಬೆಚ್ಚಗಿನ ಶಾಲು ಇಂದಿನ ಶೃಂಗಸಭೆಯ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಗಿರಿಜನರು ನೇಯ್ದ ಪರಿಸರ ಸ್ನೇಹಿ ಶಾಲು: ಮಹಾರಾಷ್ಟ್ರದ ಮೇಲ್ಘಾಟ್‌ನ ಗ್ರಾಮೀಣ ಪ್ರದೇಶದಲ್ಲಿ ನೆಲೆ ಕಂಡುಕೊಂಡ ಗಿರಿಜನ ಸಮುದಾಯದ ಕುಶಲಕರ್ಮಿಗಳು ಸೌರಶಕ್ತಿ ಅಳವಡಿಸಿಕೊಂಡು ಅದರ ನೆರವಿನಿಂದಲೇ ಪರಿಸರ ಸ್ನೇಹಿ ಶಾಲು ತಯಾರಿಸಿ ಪ್ರಧಾನಿಗೆ ಅರ್ಪಿಸುವ ಮೂಲಕ ಪ್ರಧಾನಿ ಮೋದಿ ಅವರ ಸೌರಕ್ರಾಂತಿಗೆ ಮತ್ತಷ್ಟು ಬಲ ತುಂಬಿದರು.

ಸಾಂಪ್ರದಾಯಿಕ 'ಕುಟೀರ್' ಬ್ರ್ಯಾಂಡ್: ಮಹಾರಾಷ್ಟ್ರದ ಗಿರಿಜನ ಕುಶಲಕರ್ಮಿಗಳು ಶಾಲಿನ ಮೇಲೆ ಅರಣ್ಯದ ಸೌಂದರ್ಯವನ್ನು ಬಿಂಬಿಸುವ ನೈಸರ್ಗಿಕ ಎಲೆಗಳ ಪ್ರಿಂಟ್ ಹಾಕಿದ್ದಾರೆ. ಮಾತ್ರವಲ್ಲ ಸಸ್ಯಶಾಸ್ತ್ರೀಯ ಶೈಲಿಯ ಕಲಾತ್ಮಕ ವಿನ್ಯಾಸ ಹೊಂದಿರುವ ಶಾಲು ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಸಂಕಲ್ಪ ಹಾಗೂ ಸ್ಥಳೀಯ ಕಲೆಗೆ ಪ್ರೋತ್ಸಾಹ ನೀಡುವ ಲೋಕಲ್ ಫಾರ್ ವೋಕಲ್ ಸಂಕೇತ ಎನ್ನುವಂತಿತ್ತು ಈ ಪರಿಸರ ಸ್ನೇಹಿ, ಸೌರ ಚರಕ ನೇಯ್ಗೆಯ ಬೆಚ್ಚಗಿನ ವಿಶೇಷ ಶಾಲು.

ಗಿರಿಜನ ಕುಟುಂಬ ಪ್ರಧಾನಿಗೆ ಈ ಪರಿಸರ ಸ್ನೇಹಿ ಶಾಲಿನ ಜತೆಗೆ ತಮ್ಮ ಕರಕುಶಲತೆ ಬಗ್ಗೆ ಉಲ್ಲೇಖಿಸಿ ಪತ್ರವೊಂದನ್ನು ಉಡುಗೊರೆ ಜತೆ ನೀಡಿದ್ದಾರೆ. "ಕುಟಿರ್ ನಿಮ್ಮನ್ನು ಸದಾ ಚೈತನ್ಯಶೀಲವಾಗಿರಿಸುವ ಉಡುಪು" ಎಂದು ಬರೆದಿದೆ. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿರುವ ಮೇಲ್ಘಾಟ್‌ನ ಹಚ್ಚಹಸಿರಿನ ಪರಿಸರದಲ್ಲಿ, ಸೂರ್ಯನ ಶಕ್ತಿಯ ಮೂಲಕ ಒಂದು ಶಾಂತ ಕ್ರಾಂತಿ ನಡೆಯುತ್ತಿದೆ. ಅಮರಾವತಿಯ ವಿಶಾಲ ಆಕಾಶದ ಕೆಳಗೆ, ಇಲ್ಲಿನ ಬುಡಕಟ್ಟು ಕುಶಲಕರ್ಮಿಗಳು ಪರಂಪರೆ ಮತ್ತು ನಾವೀನ್ಯತೆಯನ್ನು ಒಗ್ಗೂಡಿಸಿ, 'ಸೋಲಾರ್ ಚರಖಾ' (ಸೌರ ಚರಖಾ) ಮೂಲಕ ತಯಾರಿಸಿದ ಬಟ್ಟೆಯ ಪ್ರತಿಯೊಂದು ಎಳೆಗೂ ಜೀವ ತುಂಬುತ್ತಾರೆ. 'ಕುಟಿರ್' ಬ್ರಾಂಡ್ ಒಂದು ಸರಳ ಹಾಗೂ ಆಳವಾದ ದೃಷ್ಟಿಕೋನದೊಂದಿಗೆ ಹುಟ್ಟಿಕೊಂಡಿದೆ: ಪ್ರಕೃತಿಯೊಂದಿಗೆ ಹೊಂದಿಕೊಳ್ಳುವ, ಪರಿಸರ ಸ್ನೇಹಿ ಉಡುಪುಗಳನ್ನು ರೂಪಿಸುವುದು ಮತ್ತು ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಿದೆ.

ಬಡವರ ಮೇಲೆ ಹಾಲಿನ ದರ ಏರಿಕೆ ಹೊರೆ ಹೇರುವುದು ಸರಿಯಲ್ಲ: ಸಂಸದ ಡಾ.ಕೆ.ಸುಧಾಕರ್

ಎಲೆಗಳ ವಿನ್ಯಾಸವನ್ನು ಹೊಂದಿರುವ ಈ ಶಾಲು, ಆ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ಸುತ್ತಮುತ್ತಲಿನ ಅರಣ್ಯಗಳಿಂದ ಪ್ರೇರಿತವಾದ ಸೂಕ್ಷ್ಮ ಸಸ್ಯ-ವಿನ್ಯಾಸಗಳಿಂದ ಅಲಂಕೃತವಾಗಿರುವ ಈ ಶಾಲು, ಪರಿಸರ ಪ್ರಜ್ಞೆಯುಳ್ಳ ಕಲೆ ಮತ್ತು ಸಾಂಪ್ರದಾಯಿಕ ಕೈಮಗ್ಗ ಪರಂಪರೆಯ ಸುಂದರ ಸಂಗಮವಾಗಿದೆ. ನೀವು ಈ ಶಾಲನ್ನು ಹೊದ್ದುಕೊಂಡಾಗ, ಅದು ಕೇವಲ ಬೆಚ್ಚಗಿನ ಅನುಭವವನ್ನಷ್ಟೇ ನೀಡುವುದಿಲ್ಲ; ಬದಲಾಗಿ, ಮೇಲ್ಘಾಟ್‌ನ ಸೂರ್ಯನ ಬೆಳಕು, ಗ್ರಾಮೀಣ ಕುಶಲಕರ್ಮಿಗಳ ಶ್ರದ್ಧೆ ಮತ್ತು ಹಸಿರು ಹಾಗೂ ಸಬಲ ಭವಿಷ್ಯದ ಕಡೆಗಿನ ಬದ್ಧತೆಯನ್ನು ನಿಮ್ಮೊಂದಿಗೆ ಹೊತ್ತು ತರುತ್ತದೆ" ಎಂದು ಪ್ರಧಾನಿ ಮೋದಿ ಅವರ ಗಮನ ಸೆಳೆದಿದ್ದಾರೆ ಮಹಾರಾಷ್ಟ್ರ ಗಿರಿಜನರು.