ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿಯಾಗ್ತಾರೆ; ಭವಿಷ್ಯ ನುಡಿದ ಬಾಬಾ: ವಿಡಿಯೊ ನೋಡಿ
Priyanka Gandhi Vadra: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂಗೆ ಭೇಟಿ ನೀಡಿದರು. ಈ ವೇಳೆ ಪಕ್ಷದ ಕಾರ್ಯಕರ್ತರು ಅವರಿಗೆ ಭವ್ಯ ಸ್ವಾಗತ ನೀಡಿದರು. ಆದರೆ ಪ್ರಿಯಾಂಕಾ ವಾದ್ರಾ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿ ಬಾಬಾ (ತಪಸ್ವಿ) ಆಶೀರ್ವಾದ ಪಡೆದಿದ್ದು ಹೆಚ್ಚು ಗಮನಸೆಳೆದಿದೆ. ಈ ವೇಳೆ ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಬಾಬಾ ಭವಿಷ್ಯ ನುಡಿದಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಆಶೀರ್ವದಿಸಿದ ಬಾಬಾ -
ನವದೆಹಲಿ, ಫೆ. 19: ಕಾಂಗ್ರೆಸ್ ಸಂಸದೆ ಮತ್ತು ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಗುರುವಾರ (ಫೆಬ್ರವರಿ19) ಎರಡು ದಿನಗಳ ಭೇಟಿಗಾಗಿ ಅಸ್ಸಾಂಗೆ (Assam) ಆಗಮಿಸಿದರು. 2026ರ ವಿಧಾನಸಭಾ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿದರು. ಪಕ್ಷದ ಕಾರ್ಯಕರ್ತರು ಅವರಿಗೆ ಭವ್ಯ ಸ್ವಾಗತ ಕೋರಿದರು. ಪ್ರಿಯಾಂಕಾ ವಾದ್ರಾ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿ ಬಾಬಾ (ತಪಸ್ವಿ) ಅವರ ಆಶೀರ್ವಾದ ಪಡೆದಿದ್ದು ಹೆಚ್ಚು ಗಮನ ಸೆಳೆದಿದೆ. ಇದರ ವಿಡಿಯೊ ವೈರಲ್ (viral video) ಆಗಿದೆ.
ಪ್ರಿಯಾಂಕಾ ಗಾಂಧಿ ಬೆಳಗ್ಗೆ 10 ಗಂಟೆ ಸುಮಾರಿಗೆ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿ, ನೇರವಾಗಿ ನಗರದ ಕಾಮಾಕ್ಯ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯ ಭೇಟಿಯ ಸಮಯದಲ್ಲಿ ಅಘೋರಿ ಬಾಬಾ ಎಂದೇ ಕರೆಯಲ್ಡುವ ನಾಗಾ ಸಾಧುವಿನೊಂದಿಗೆ ವಯನಾಡು ಸಂಸದೆ ಸ್ವಲ್ಪ ಸಮಯ ಸಂವಾದ ನಡೆಸಿದರು. ಇದೀಗ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಬಾಬಾ ಅವರು ಪ್ರಿಯಾಂಕಾ ವಾದ್ರಾ ಅವರ ತಲೆಯ ಮೇಲೆ ಕೈ ಇಟ್ಟು ನಮ್ಮ ಮಗಳು ಪ್ರಧಾನಿಯಾಗುತ್ತಾಳೆ ಎಂದು ಹೇಳಿದ್ದಾರೆ.
ವಿಡಿಯೊ ವೀಕ್ಷಿಸಿ:
प्रियंका गांधी को मिला PM बनने का आशीर्वाद!#KamakhyaDevi #Assam #PriyankaGandhi #HindiNews #indainewssocial #IndiaNews pic.twitter.com/TPA3ptfXCI
— India News (@NetworkItv) February 19, 2026
ಬಾಬಾ ಅವರ ಮಾತಿಗೆ ಪ್ರಿಯಾಂಕಾ ಗಾಂಧಿ ಮುಗುಳ್ನಕ್ಕು ಅಲ್ಲಿಂದ ಹೊರಟು ಹೋದರು. ದೇವಾಲಯ ಭೇಟಿಯ ನಂತರ, ವಯನಾಡು ಸಂಸದೆ ಗುವಾಹಟಿಯ ರಾಜೀವ್ ಭವನಕ್ಕೆ (ಕಾಂಗ್ರೆಸ್ ಭವನ) ತೆರಳಿದರು. ಅಲ್ಲಿ ಅವರು ಬ್ಲಾಕ್ ಕಾಂಗ್ರೆಸ್ ಸಮಿತಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿಗಳ ನಾಯಕರು ಮತ್ತು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಮಹಿಳಾ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಂವಾದವನ್ನು ಸಹ ಯೋಜಿಸಲಾಗಿದೆ.
ವಯನಾಡು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ರೈಹಾನ್ ವಾದ್ರಾ ಮತ್ತು ಅವಿವಾ ಬೇಗ್
ಇನ್ನು, ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಬರಮಾಡಿಕೊಂಡ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್, ಈ ಭೇಟಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ ಎಂದು ಹೇಳಿದರು. ನಮ್ಮ ಬ್ಲಾಕ್ ಅಧ್ಯಕ್ಷರು ಮತ್ತು ತಳಮಟ್ಟದ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿಯವರ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಹೊಂದಿದ್ದಾರೆ. ಇದು ಅವರು ವಹಿಸಿಕೊಂಡಿರುವ ದೊಡ್ಡ ಜವಾಬ್ದಾರಿ ಎಂದು ಹೇಳಿದರು.
ರಾಜೀವ್ ಭವನದಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಾಂಪ್ರದಾಯಿಕ ಖೋಲ್ ಮತ್ತು ತಾಲ್ ವಾದನಗಳೊಂದಿಗೆ ಸ್ವಾಗತಿಸಲಾಯಿತು. ವಿಪಕ್ಷದ ನಾಯಕ ದೇಬಬ್ರತ ಸೈಕಿಯಾ ಮತ್ತು ಅಸ್ಸಾಂನ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್ ಸೇರಿ ಹಿರಿಯ ನಾಯಕರು ಉಪಸ್ಥಿತರಿದ್ದರು. ಪಕ್ಷದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ತಡರಾತ್ರಿಯವರೆಗೂ ಚರ್ಚೆಗಳು ಮುಂದುವರಿಯುವ ನಿರೀಕ್ಷೆಯಿದೆ. ಕೇಂದ್ರ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಿದ ನಂತರ ಫೆಬ್ರವರಿ ಅಂತ್ಯದ ವೇಳೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸಾಧ್ಯವಾದಷ್ಟು ಬೇಗ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಾಂಗ್ರೆಸ್ ಗುರಿ ಎಂದು ಗೊಗೊಯ್ ತಿಳಿಸಿದರು.