ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ 'ಸೈಡ್ ಪ್ಲೇಯರ್' ಎಂದ ರಾಹುಲ್ ಗಾಂಧಿ; 'ಪಾಕ್ ಫ್ಯಾನ್‌ಬಾಯ್' ಎಂದು ಬಿಜೆಪಿ ತಿರುಗೇಟು

Rahul Gandhi at the Chicago University: ಜಾಗತಿಕ ರಾಜಕೀಯದಲ್ಲಿ ಭಾರತವನ್ನು ಕೇವಲ 'ಸೈಡ್ ಪ್ಲೇಯರ್' ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಅವರ ಈ ಟೀಕೆಗೆ ಬಿಜೆಪಿ ತೀವ್ರವಾಗಿ ತಿರುಗೇಟು ನೀಡಿದ್ದು, ಅವರನ್ನು ಪಾಕ್ ಫ್ಯಾನ್‌ಬಾಯ್ ಎಂದು ಟೀಕಿಸುವ ಮೂಲಕ ವಾಗ್ದಾಳಿ ನಡೆಸಿದೆ.

ಚಿಕಾಗೋದಲ್ಲಿ ಭಾರತವನ್ನು 'ಸೈಡ್ ಪ್ಲೇಯರ್' ಎಂದ ರಾಹುಲ್ ಗಾಂಧಿ

Rahul Gandhi at the Chicago University -

Profile
Jyoti S Nov 20, 2026 12:20 PM

ನವದೆಹಲಿ, ನ.20: ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು, ಚಿಕಾಗೋ ವಿಶ್ವವಿದ್ಯಾಲಯದಲ್ಲಿ (University of Chicago) ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾರತದ ವಿದೇಶಾಂಗ ನೀತಿ ಮತ್ತು ಜಾಗತಿಕ ಸ್ಥಾನಮಾನದ ಕುರಿತು ನೀಡಿರುವ ಹೇಳಿಕೆಗಳು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜಾಗತಿಕ ರಾಜಕೀಯದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುವ ಬದಲು ಕೇವಲ 'ಸೈಡ್ ಪ್ಲೇಯರ್' ಆಗಿ ಉಳಿದಿದೆ ಎಂದು ಟೀಕಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯಲ್ಲಿ ಪಾಕಿಸ್ತಾನವು ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಭಾರತವು ಜಾಗತಿಕ ಚರ್ಚೆಗಳಿಂದ ದೂರ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ನೀಡಿರುವ ಈ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ಅವರು ಪದೇಪದೆ ಪಾಕಿಸ್ತಾನವನ್ನು ಹೊಗಳುತ್ತಾ ಭಾರತದ ಅಂತಾರಾಷ್ಟ್ರೀಯ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದೆ.

ಭಾರತವನ್ನು ಸೈಡ್ ಪ್ಲೇಯರ್ ಎಂದ ರಾಹುಲ್‌ ವಿಡಿಯೋ ನೋಡಿ



ರಾಹುಲ್ ಗಾಂಧಿ ಮಾಡಿರುವ ಆರೋಪ

ಕೇಂದ್ರ ಸರ್ಕಾರದ ವಿದೇಶಾಂಗ ಮತ್ತು ಆರ್ಥಿಕ ನೀತಿಗಳನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಮುಖ ಭೌಗೋಳಿಕ-ರಾಜಕೀಯ (Geopolitical) ಬೆಳವಣಿಗೆಗಳಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಪೂರೈಕೆ, ತಂತ್ರಜ್ಞಾನ ಮತ್ತು ರಾಜತಾಂತ್ರಿಕ ವಿಚಾರಗಳಲ್ಲಿ ಭಾರತವು ಮುಂಚೂಣಿಯಲ್ಲಿರಬೇಕಿತ್ತು, ಆದರೆ ಸರ್ಕಾರದ ನೀತಿಗಳಿಂದಾಗಿ ಭಾರತವು ಕೇವಲ 'ಸೈಡ್ ಪ್ಲೇಯರ್' ಸ್ಥಾನಕ್ಕೆ ಸೀಮಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ.



ಬಿಜೆಪಿ ನಾಯಕರಿಂದ ತೀವ್ರ ವಾಗ್ದಾಳಿ

ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ರಾಹುಲ್ ಗಾಂಧಿ ಅವರನ್ನು "ಪಾಕ್ ಫ್ಯಾನ್‌ಬಾಯ್" (Pak Fan Boy) ಎಂದು ಕರೆದಿದ್ದಾರೆ. "ರಾಹುಲ್ ಗಾಂಧಿ ಅವರಿಗೆ ಪಾಕಿಸ್ತಾನದ ಬಗ್ಗೆ ಯಾಕಿಷ್ಟು ವ್ಯಾಮೋಹ? ಪ್ರತಿಯೊಂದು ಜಾಗತಿಕ ವೇದಿಕೆಯಲ್ಲೂ ರಾಹುಲ್ ಗಾಂಧಿ ಪಾಕ್ ಫ್ಯಾನ್‌ಬಾಯ್ ರೀತಿ ವರ್ತಿಸುತ್ತಾರೆ. ಭಾರತದ ರಾಜತಾಂತ್ರಿಕ ನಡೆಗೆ ಪಾಕಿಸ್ತಾನವನ್ನು ಮಾದರಿಯನ್ನಾಗಿ ಬಿಂಬಿಸಲು ಅವರು ಪ್ರಯತ್ನಿಸುತ್ತಿದ್ದಾರೆ" ಎಂದು ಭಂಡಾರಿ ಕಿಡಿಕಾರಿದ್ದಾರೆ. ಅಲ್ಲದೆ, 26/11 ಮುಂಬೈ ದಾಳಿಯ ನಂತರದ ಯುಪಿಎ ಸರ್ಕಾರದ ನೀತಿ ಮತ್ತು ಶರ್ಮ್ ಎಲ್-ಶೇಖ್ ಜಂಟಿ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತ್ತೊಬ್ಬ ಬಿಜೆಪಿ ವಕ್ತಾರ ಸಿ.ಆರ್. ಕೇಶವನ್, "ವಿದೇಶಿ ನೆಲದಲ್ಲಿ ಭಾರತವನ್ನು 'ಸೈಡ್ ಪ್ಲೇಯರ್' ಎಂದು ಕರೆಯುವ ಮೂಲಕ ರಾಹುಲ್ ಗಾಂಧಿ ದೇಶದ ಅಂತಾರಾಷ್ಟ್ರೀಯ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಒಮ್ಮತ ಮೂಡಿಸುವ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿರುವುದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ" ಎಂದು ಟೀಕಿಸಿದ್ದಾರೆ.