ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇಂದ್ರದ ವಿರುದ್ಧ ಸಿಜೆಪಿ ಬೀದಿಗಿಳಿದು ಹೋರಾಡುತ್ತಿದ್ದರೆ ಕಾಫಿ, ತಿರಾಮಿಸು ಸವಿದು ಒಟ್ಟಿಗೆ ಕಾಲ ಕಳೆದ ರಾಹುಲ್ ಗಾಂಧಿ, ತಮಿಳುನಾಡು ಸಿಎಂ ವಿಜಯ್: ವಿಡಿಯೊ ಇಲ್ಲಿದೆ

Rahul Gandhi Vijay Meeting: ತಮಿಳುನಾಡು ರಾಜಧಾನಿ ಚೆನ್ನೈಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿಎಂ ವಿಜಯ್ ಜೋಸೆಫ್ ಭೇಟಿಯಾಗಿ ಕೆಲ ಸಮಯ ಒಟ್ಟಿಗೆ ಕಾಲ ಕಳೆದರು. ಸುಮಾರು ಒಂದು ಗಂಟೆ ಕಾಲ ಇಬ್ಬರೂ ನಾಯಕರು ಮಾತುಕತೆ ನಡೆಸಿದರು. ರಾಹುಲ್ ಗಾಂಧಿ ಆಗಮಿಸಿದಾಗ, ಮುಖ್ಯಮಂತ್ರಿ ವಿಜಯ್ ನಗುನಗುತ್ತಲೇ ಅವರನ್ನು ಸ್ವಾಗತಿಸಿದರು.

ಕಾಫಿ ಹೀರುತ್ತಾ ಒಟ್ಟಿಗೆ ಕಾಲ ಕಳೆದ ರಾಹುಲ್ ಗಾಂಧಿ-ವಿಜಯ್

ರಾಹುಲ್ ಗಾಂಧಿ, ತಮಿಳುನಾಡು ಸಿಎಂ ವಿಜಯ್ -

Priyanka P
Priyanka P Oct 10, 2026 7:16 PM

ಚೆನ್ನೈ, ಅ. 10: ತಮಿಳುನಾಡಿನ ರಾಜಧಾನಿ ಚೆನ್ನೈಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಸಿಎಂ ವಿಜಯ್ ಜೋಸೆಫ್ (CM Vijay Joseph) ಭೇಟಿಯಾಗಿ, ಕೆಲ ಸಮಯ ಒಟ್ಟಿಗೆ ಕಾಲ ಕಳೆದರು. ಕಾಫಿ, ತಿರಾಮಿಸು, ಕುಕೀಸ್ ಸವಿಯುತ್ತಾ ರಾಜಕೀಯ ಮಾತುಕತೆ ನಡೆಸಿದರು. ಈ ಭೇಟಿಯ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ. ಸುಮಾರು ಒಂದು ಗಂಟೆ ಕಾಲ ಇಬ್ಬರು ನಾಯಕರು ಮಾತುಕತೆ ನಡೆಸಿದರು. ಕಾಂಗ್ರೆಸ್‌ ಮತ್ತು ಟಿವಿಕೆ ನಡುವೆ ಬಿರುಕು ಬಿಟ್ಟಿದೆ ಎನ್ನುವ ವದಂತಿ ಮಧ್ಯೆ ಈ ಭೇಟಿ ನಡೆದಿದೆ.

ರಾಹುಲ್ ಗಾಂಧಿ ಆಗಮಿಸಿದಾಗ ಮುಖ್ಯಮಂತ್ರಿ ವಿಜಯ್ ನಗುನಗುತ್ತಾ ತಮ್ಮ ನೀಲಂಕರೈ ನಿವಾಸದ ಪ್ರವೇಶದ್ವಾರದಲ್ಲಿ ಅವರನ್ನು ಸ್ವಾಗತಿಸಿದರು. ಇಬ್ಬರು ನಾಯಕರು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಿದರು. ಆದರೆ, ಔಪಚಾರಿಕ ಸಭೆಯಲ್ಲಿ ಇಬ್ಬರ ನಡುವೆ ಕಂಡುಬಂದ ಆತ್ಮೀಯತೆ ಎಲ್ಲರ ಗಮನ ಸೆಳೆಯಿತು.

ಚೆನ್ನೈ ಹೊರವಲಯದಲ್ಲಿರುವ ನೀಲಂಕರೈ, ಶ್ರೀಮಂತರು ಹೆಚ್ಚಾಗಿ ವಾಸಿಸುವ ಪ್ರದೇಶ. ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಈ ಪ್ರದೇಶ ಕಡಲತೀರದ ಸಮೀಪದಲ್ಲಿದೆ. ವಿಜಯ್ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದ ರಾಹುಲ್ ಗಾಂಧಿ ನಂತರ ಕೆಫೆಯತ್ತ ತೆರಳಿದರು.

ಇಲ್ಲಿದೆ ವಿಡಿಯೊ:



ಇಬ್ಬರು ನಾಯಕರು ಕ್ಯಾಪುಚಿನೊ ಕಾಫಿ, ತಿರಾಮಿಸು ಮತ್ತು ಕುಕೀಸ್ ಆರ್ಡರ್ ಮಾಡಿದರು. ಇದರಿಂದ ಸಾಮಾನ್ಯ ರಾಜಕೀಯ ಸಭೆಯು ಆತ್ಮೀಯ ಭೇಟಿಯಾಗಿ ಬದಲಾಯಿತು. ಇಬ್ಬರು ನಾಯಕರನ್ನು ನೋಡಲು ಜನರು ಉತ್ಸಾಹದಿಂದ ಸುತ್ತಲೂ ನೆರೆದರು. ರಾಹುಲ್ ಗಾಂಧಿ ಮತ್ತು ವಿಜಯ್ ಜನರೊಂದಿಗೆ ಬೆರೆತು ಮಾತನಾಡಿದರು. ಕೆಲವರಿಗೆ ಇಬ್ಬರು ನಾಯಕರ ಜತೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶವೂ ಸಿಕ್ಕಿತು. ಈ ಎಲ್ಲ ದೃಶ್ಯಗಳನ್ನು ಮಾಧ್ಯಮದ ಕ್ಯಾಮೆರಾಗಳು ಸೆರೆಹಿಡಿದವು.

ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆ ವೇಳೆ ಮಹಿಳಾ ಪೊಲೀಸರ ಮೇಲೆ ದೌರ್ಜನ್ಯ

ಕೆಫೆಯಲ್ಲಿ ವಿಹಾರ ಮುಗಿಸಿದ ನಂತರ, ರಾಹುಲ್ ಗಾಂಧಿ ನಗರದ ಹೊಟೇಲ್‌ಗೆ ತೆರಳಿದರು. ಶನಿವಾರ (ಅ. 10) ಸಂಜೆ ಚೆನ್ನೈನ ವಿಶಾಲವಾದ ಐಲ್ಯಾಂಡ್ ಗ್ರೌಂಡ್ಸ್‌ನಲ್ಲಿ ನಡೆಯಲಿರುವ ಸಂವಾದ ಕಾರ್ಯಕ್ರಮ ‘ಛಾತ್ರೋಂ ಕಿ ಗೂಂಜ್’ನಲ್ಲಿ ಭಾಗವಹಿಸಲು ರಾಹುಲ್‌ ಗಾಂಧಿ ಚೆನ್ನೈಗೆ ಆಗಮಿಸಿದರು. ಆಯೋಜಕರ ಪ್ರಕಾರ, ತಮಿಳುನಾಡಿನಾದ್ಯಂತ ಪ್ರಸಾರವಾದ ವೆಬ್‌ಸೈಟ್ ಮತ್ತು ಕ್ಯುಆರ್ ಕೋಡ್‌ಗಳ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

2026ರ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಕಾಂಗ್ರೆಸ್ ಮತ್ತು ಟಿವಿಕೆ ಮೈತ್ರಿ ಮಾಡಿಕೊಂಡವು. ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ತನ್ನ ದೀರ್ಘಕಾಲದ ಮಿತ್ರ ಪಕ್ಷವಾದ ಡಿಎಂಕೆಯಿಂದ ಬೇರ್ಪಟ್ಟಿತು.

ಶನಿವಾರದ ಈ ಭೇಟಿ ರಾಜಕೀಯ ಚರ್ಚೆಗೆ ಮಾತ್ರ ಸೀಮಿತವಾಗಿರಲಿಲ್ಲ. ಆತ್ಮೀಯ ಸ್ವಾಗತ, ಕೆಫೆಯಲ್ಲಿ ಒಟ್ಟಿಗೆ ಸಮಯ ಕಳೆಯುವುದು ಮತ್ತು ಉತ್ಸಾಹದಿಂದ ಸೇರಿದ್ದ ಜನರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದು ಈ ಭೇಟಿಯ ವಿಶೇಷವಾಗಿತ್ತು.