Viral Post: M ಫಾರ್ ಮಸೀದಿ, N ಫಾರ್ ನಮಾಜ್- ಖಾಸಗಿ ಶಾಲೆ ಪುಸ್ತಕದಿಂದ ಭಾರೀ ವಿವಾದ
ಕೋಮು ಸೌಹರ್ದವನ್ನು ಕದಡುವ ಘಟನೆಯೊಂದು ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆಸಿದೆ. ನರ್ಸರಿ ವಿದ್ಯಾರ್ಥಿಗಳಿಗೆ ನೀಡಿದ ಅಧ್ಯಯನ ಸಾಮಗ್ರಿಯಲ್ಲಿ 'ಕೆ ಫಾರ್ ಕಾಬಾ', 'ಎಂ ಫಾರ್ ಮಸೀದಿ', 'ಎನ್ ಫಾರ್ ನಮಾಜ್', ಮತ್ತು 'ಓ ಫಾರ್ ಔರತ್ ಇನ್ ಹಿಜಾಬ್' ಇತ್ಯಾದಿ ಉರ್ದು ಮತ್ತು ಇಸ್ಲಾಮಿಕ್ ಪದಗಳನ್ನು ಸೇರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.


ಭೋಪಾಲ್: ಮಧ್ಯಪ್ರದೇಶದ (Madhya Pradesh) ರೈಸನ್ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ (Private school) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನರ್ಸರಿ ವಿದ್ಯಾರ್ಥಿಗಳಿಗೆ ನೀಡಲಾದ ವರ್ಣಮಾಲೆಯ ಪುಸ್ತಕದಲ್ಲಿ (Alphabet Book) “M ಫಾರ್ ಮಸೀದಿ, N ಫಾರ್ ನಮಾಜ್” ಎಂದು ಉಲ್ಲೇಖಿಸಲಾಗಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆಯ (Department of Education) ಮಾರ್ಗಸೂಚಿಗಳ ಪ್ರಕಾರ, ಶಾಲಾ ಪಠ್ಯಕ್ರಮದಲ್ಲಿ ಯಾವುದೇ ಜಾತಿ ಅಥವಾ ಧರ್ಮಕ್ಕೆ ಸಂಬಂಧಿಸಿದ ಉಲ್ಲೇಖಗಳನ್ನು ಸೇರಿಸುವಂತಿಲ್ಲ. ಆದರೆ, ಈ ಶಾಲೆಯ ಕ್ರಮವು ಈ ನಿಯಮವನ್ನು ಉಲ್ಲಂಘಿಸಿದೆ.
ಸಾಮಾನ್ಯವಾಗಿ ವರ್ಣಮಾಲೆಯಲ್ಲಿ “A ಫಾರ್ ಆಪಲ್, B ಫಾರ್ ಬಾಲ್” ಎಂಬಂತ ಉದಾಹರಣೆಗಳಿರುತ್ತವೆ. ಆದರೆ, ಈ ಶಾಲೆಯ ಪುಸ್ತಕದಲ್ಲಿ “K ಫಾರ್ ಕಾಬಾ, M ಫಾರ್ ಮಸೀದಿ, N ಫಾರ್ ನಮಾಜ್” ಎಂದು ಇಸ್ಲಾಮಿಕ್ ಉಲ್ಲೇಖಗಳನ್ನು ಸೇರಿಸಲಾಗಿದೆ. ಒಬ್ಬ ವಿದ್ಯಾರ್ಥಿಯ ಚಿಕ್ಕಪ್ಪ ಮಗುವಿಗೆ ಈ ವರ್ಣಮಾಲೆಯನ್ನು ಕಲಿಸುವಾಗ ಈ ತಪ್ಪನ್ನು ಗಮನಿಸಿದರು. ಇದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಬೇಬಿ ಕಾನ್ವೆಂಟ್ ಶಾಲೆಯ ಹೊರಗೆ ಪ್ರತಿಭಟನೆ ನಡೆಸಿತು. ಶಾಲಾ ಆಡಳಿತವು ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಪ್ರಾಂಶುಪಾಲರು ನಿರ್ಲಕ್ಷ್ಯ ವಹಿಸಿದ್ದು ಅವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ತಕ್ಷಣ ಅಮಾನತು ಮಾಡಬೇಕು ಎಂದು ಪೋಷಕರು ಮತ್ತು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಆಕೆ ನನ್ನನ್ನು ಉಳಿಸಿ ಎಂದು ಬೇಡಿಕೊಂಡಳು... ಆದರೆ; ಟ್ರಾಫಿಕ್ ಜಾಮ್‌ನಿಂದ ಆ್ಯಂಬುಲೆನ್ಸ್‌ನಲ್ಲಿಯೇ ಮಹಿಳೆ ಸಾವು
ಇನ್ನು ಘಟನೆ ಕುರಿತಂತೆ ಪ್ರಾಂಶುಪಾಲ ಐ.ಎ.ಖುರೇಷಿ ಸ್ಪಷ್ಟನೆ ನೀಡಿದ್ದು, ಈ ತಪ್ಪು ಮಾರಾಟಗಾರನಿಂದ ಆಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಈ ಚಾರ್ಟ್‌ಗಳನ್ನು ಭೋಪಾಲ್‌ನಿಂದ ಪಡೆಯಲಾಗಿದೆ. ಮಾರಾಟಗಾರನು ಮದರಸಾಗಳಿಗೆ ಬಳಸುವ ಕೆಲವು ಚಾರ್ಟ್‌ಗಳನ್ನು ತಪ್ಪಾಗಿ ಸೇರಿಸಿದ್ದಾನೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಒಳಗೊಂಡ ಅಧ್ಯಯನ ಸಾಮಗ್ರಿಗಳನ್ನು ಕಲಿಸುವಂತಿಲ್ಲ ಎಂಬ ನಿಯಮವನ್ನು ಈ ಘಟನೆ ಉಲ್ಲಂಘಿಸಿದೆ.