ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಂದೇ ಮಾತರಂಗಿಂತ ಮುಂಚೆ ತಮಿಳು ರಾಜ್ಯಗೀತೆ ಹಾಡಬೇಕು; ಕೇಂದ್ರದ ವಿರುದ್ಧ ಸಮರ ಸಾರಿದ ಸಿಎಂ ವಿಜಯ್‌

ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ಮೊದಲು ರಾಜ್ಯ ಗೀತೆ 'ತಮಿಳು ಥಾಯ್ ವಜ್ತು' ಹಾಡಬೇಕೆಂದು ತಮಿಳುನಾಡು ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ಆರಂಭಿಕ ಗೀತೆಗಳ ಅನುಕ್ರಮದಲ್ಲಿ ಮೊದಲು ವಂದೇ ಮಾತರಂ ಗೀತೆಯನ್ನು ಹಾಡಬೇಕು ಎಂಬ ಕೇಂದ್ರದ ನಿರ್ದೇಶನಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಈ ನಿರ್ಣಯವನ್ನು ಮಂಡಿಸಿದ್ದಾರೆ.

ಕೇಂದ್ರದ ವಿರುದ್ಧ ಸಮರ ಸಾರಿದ ಸಿಎಂ ವಿಜಯ್‌ ! ಏನಿದು ಘಟನೆ?

ತಮಿಳುನಾಡು ಸಿಎಂ ವಿಜಯ್‌ -

Vishakha Bhat Heggar
Vishakha Bhat Heggar Aug 10, 2026 2:35 PM

ಚೈನ್ನೈ: ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ಮೊದಲು ರಾಜ್ಯ ಗೀತೆ 'ತಮಿಳು ಥಾಯ್ ವಜ್ತು' ( Tamil Thaai Vazhthu) ಹಾಡಬೇಕೆಂದು ತಮಿಳುನಾಡು ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ಆರಂಭಿಕ ಗೀತೆಗಳ ಅನುಕ್ರಮದಲ್ಲಿ ಮೊದಲು ವಂದೇ ಮಾತರಂ ಗೀತೆಯನ್ನು ಹಾಡಬೇಕು ಎಂಬ ಕೇಂದ್ರದ ನಿರ್ದೇಶನಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಈ ನಿರ್ಣಯವನ್ನು ಮಂಡಿಸಿದ್ದಾರೆ. ಸರ್ಕಾರದ ನಿರ್ಣಯಕ್ಕೆ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ನಿರ್ಣಯವನ್ನು ಬೆಂಬಲ ನೀಡಿವೆ.

ಸ್ಪೀಕರ್ ಜೆಸಿಡಿ ಪ್ರಭಾಕರ್ ನಿರ್ಣಯವನ್ನು ಅಂಗೀಕರಿಸಲಾಗಿದೆ ಮತ್ತು ಅದರ ಅನುಷ್ಠಾನಕ್ಕೆ ಯಾವುದೇ ಹೆಚ್ಚಿನ ಅನುಮತಿ ಅಗತ್ಯವಿಲ್ಲ ಎಂದು ಘೋಷಿಸಿದರು. ಬಳಿಕ ಮಾತನಾಡಿದ ವಿಜಯ್, ರಾಜ್ಯದಲ್ಲಿ ತಮಿಳು ಗೀತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ತಮ್ಮ ಸರ್ಕಾರ, ರಾಜ್ಯದ ಭಾಷಾ ಮತ್ತು ಸಾಂಸ್ಕೃತಿಕ ಹಕ್ಕುಗಳ ಮೇಲೆ ರಾಜಿ ಮಾಡಿಕೊಳ್ಳುವುದಿಲ್ಲ. "ತಮಿಳು ಕೇವಲ ಒಂದು ಭಾಷೆಯಲ್ಲ, ನಮ್ಮ ಜೀವನಾಡಿ ಮತ್ತು ಭಾವನೆಗಳೂ ಆಗಿದೆ" ಮಾತೃಭಾಷೆ ಮಾತೃತ್ವದಷ್ಟೇ ಶುದ್ಧವಾಗಿದೆ ಎಂದು ಒತ್ತಿ ಹೇಳಿದರು.

"ತಮಿಳು ಎಂದರೆ ಹೆಮ್ಮೆ, ತಮಿಳು ಎಂದರೆ ಶಕ್ತಿ. ನೀವು 'ತಮಿಳು' ಎಂದು ಹೇಳಿದ ಕ್ಷಣ, ಇಡೀ ತಮಿಳುನಾಡು ಒಗ್ಗೂಡಿ ಒಂದಾಗಿ ನಿಲ್ಲುತ್ತದೆ. ತಮಿಳು ಥಾಯ್ ವಜ್ತು ತಮಿಳುನಾಡಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳಬೇಕು. ತಮಿಳು ಥಾಯ್ ವಜ್ತುವಿಗೆ ಮೊದಲ ಸ್ಥಾನ ನೀಡುವುದು ನಮ್ಮ ಹಕ್ಕು" ಎಂದು ಸಿಎಂ ಹೇಳಿದ್ದಾರೆ. ಈಗಿನ ಆದೇಶದ ಪ್ರಕಾರ ತಮಿಳುನಾಡಿನ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳ ಆರಂಭದಲ್ಲಿ ಮೊದಲು ರಾಜ್ಯ ಗೀತೆಯನ್ನು ಹಾಡಬೇಕೆಂದು ನಿರ್ಣಯವು ಆದೇಶಿಸುತ್ತದೆ.

ತಮಿಳುನಾಡಿನಲ್ಲಿ ಕೋಲಾಹಲ ಎಬ್ಬಿಸಿದ ಮೇಕೆದಾಟು ಯೋಜನೆ: ಸಿಎಂ ವಿಜಯ್ ಬೆಂಗಳೂರು ಭೇಟಿ ಪ್ರಶ್ನಿಸಿದ ಉದಯನಿಧಿ ಸ್ಟಾಲಿನ್

1970 ರಲ್ಲೇ ತಮಿಳುನಾಡಿನಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ 'ತಮಿಳು ಥಾಯ್ ವಳ್ತು' ಹಾಡನ್ನು ಕಡ್ಡಾಯಗೊಳಿಸಲಾಗಿತ್ತು. ಅಂದಿನಿಂದ, ಅಧಿಕೃತ ಕಾರ್ಯಕ್ರಮಗಳಲ್ಲಿ ಮೊದಲು ಅದನ್ನು ಹಾಡಲಾಗುತ್ತದೆ. 2021 ರಲ್ಲಿ, ಇದನ್ನು ರಾಜ್ಯ ಗೀತೆಯಾಗಿ ಘೋಷಿಸಲಾಯಿತು.