ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವರದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ; ಸುಳ್ಳು ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ
petrol price false news: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಇದು ಕೇವಲ ಊಹಾಪೋಹ, ಜನರನ್ನು ದಾರಿತಪ್ಪಿಸುವ ಸುಳ್ಳು ಸುದ್ದಿ ಎಂದು ಹೇಳಿದೆ. ಇಂಧನ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪ ಪರಿಗಣನೆಯಲ್ಲಿಲ್ಲ ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಏ.23: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ (central government) ತಳ್ಳಿಹಾಕಿದ್ದು, ಇದು ಕೇವಲ ಊಹಾಪೋಹ, ಜನರನ್ನು ದಾರಿತಪ್ಪಿಸುವ ಸುಳ್ಳು ಸುದ್ದಿ ಎಂದು ಹೇಳಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಸಂಸ್ಕರಣಾಗಾರಗಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (petrol and diesel prices) ಲೀಟರ್‌ಗೆ 25-28 ರೂ.ಗಳಷ್ಟು ಏರಿಕೆಯಾಗಬಹುದು ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಎಚ್ಚರಿಕೆ ನೀಡಿರುವುದನ್ನು ಉಲ್ಲೇಖಿಸಿದ ವರದಿಗಳ ನಂತರ ಸರ್ಕಾರ ಈ ಸ್ಪಷ್ಟೀಕರಣ ನೀಡಿದೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಇಂಧನ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪ ಪರಿಗಣನೆಯಲ್ಲಿಲ್ಲ ಎಂದು ಹೇಳಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಕೆಲವು ಸುದ್ದಿ ವರದಿಗಳಿವೆ. ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇಲ್ಲಿದೆ ಪೋಸ್ಟ್:
FAKE NEWS
— Ministry of Petroleum and Natural Gas #MoPNG (@PetroleumMin) April 23, 2026
There are some news reports suggesting a price hike of petrol and diesel. It is hereby clarified that there is no such proposal under consideration by the Government.
Such news items are designed to create fear and panic amongst the citizens and are mischievous and… pic.twitter.com/yTAfJdah2o
ಇಂತಹ ವರದಿಗಳು ನಾಗರಿಕರಲ್ಲಿ ಅನಗತ್ಯ ಭಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ ಎಂದು ಅದು ಹೇಳಿದೆ. ಇಂತಹ ಸುದ್ದಿಗಳು ನಾಗರಿಕರಲ್ಲಿ ಭಯ ಮತ್ತು ಭೀತಿಯನ್ನು ಸೃಷ್ಟಿಸುವ ಸಲುವಾಗಿ ಹಬ್ಬಿಸಲಾಗುತ್ತಿದೆ. ಇವು ಜನರನ್ನು ದಾರಿತಪ್ಪಿಸುವಂತಹ ಸುಳ್ಳು ಸುದ್ದಿ ಎಂದು ಸಚಿವಾಲಯ ಹೇಳಿದೆ. ಜಾಗತಿಕ ಇಂಧನ ಏರಿಳಿತದ ಹೊರತಾಗಿಯೂ ಕಳೆದ ನಾಲ್ಕು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗದ ಏಕೈಕ ದೇಶ ಅಂದ್ರೆ ಅದು ಭಾರತ ಎಂದು ಸಚಿವಾಲಯ ಹೇಳಿದೆ.
ಕತ್ತಲಲ್ಲಿ ಪಾಕಿಸ್ತಾನ; ಇಂಧನ ಬೆಲೆ ನಿಯಂತ್ರಿಸಲು ವಿದ್ಯುತ್ ಕಡಿತ ಘೋಷಣೆ
ಅಂದಹಾಗೆ, ಕಚ್ಚಾ ತೈಲ ಬೆಲೆ ಏರಿಕೆಯು ಸಂಸ್ಕರಣಾಗಾರಗಳ ಮೇಲೆ ಒತ್ತಡ ಹೇರುತ್ತಿರುವುದರಿಂದ, ಇಂಧನ ಬೆಲೆಯಲ್ಲಿ ಲೀಟರ್‌ಗೆ 25 ರಿಂದ 28 ರೂ.ಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ತನ್ನ ವರದಿಯಲ್ಲಿ ಎಚ್ಚರಿಸಿದೆ. ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಚಿಲ್ಲರೆ ಇಂಧನ ಬೆಲೆಯಲ್ಲಿ ಬದಲಾವಣೆಯಾಗದ ಕಾರಣ, ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳು ಪ್ರತಿ ತಿಂಗಳು ಸುಮಾರು 270 ಶತಕೋಟಿ ರೂಪಾಯಿಗಳ ಹೆಚ್ಚುವರಿ ಹೊರೆಯನ್ನು ಹೊರುತ್ತಿವೆ ಎನ್ನಲಾಗಿದೆ.
ಏಪ್ರಿಲ್ 29 ರಂದು ವಿಧಾನಸಭಾ ಚುನಾವಣೆಗಳು ಪೂರ್ಣಗೊಳ್ಳುವ ಮೊದಲು ಇಂಧನ ಬೆಲೆ ಪರಿಷ್ಕರಣೆ ಏರಿಕೆಯಾಗಲ್ಲ ಎಂದು ಕೋಟಕ್ ತನ್ನ ವರದಿಯಲ್ಲಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಇಂಧನ ಕೊರತೆ
ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಗತ್ತಿನಾದ್ಯಂತ ಇಂಧನ ಕೊರತೆ ಉಂಟಾಗಿದ್ದು, ಪಾಕಿಸ್ತಾನದಲ್ಲಿ ಏಕಾಏಕಿ ಪೆಟ್ರೋಲ್ ಬೆಲೆ ಹೆಚ್ಚಾಗಿತ್ತು. ವರದಿಯ ಪ್ರಕಾರ, ಹೊರ್ಮೊಜ್ ಜಲಸಂಧಿಯ ಉದ್ವಿಗ್ನತೆ ಬಳಿಕ ಇಂಧನ ಬೆಲೆಗಳು ಶೇಕಡಾ 200 ರಷ್ಟು ಹೆಚ್ಚಾಗಿದೆ. ಪಾಕಿಸ್ತಾನ ಹೆಚ್ಚಿನ ಆಕ್ಟೇನ್ ಇಂಧನದ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಲು ನಿರ್ಧರಿಸಿತು. ಪ್ರತಿ ಲೀಟರ್‌ಗೆ ಪಾಕಿಸ್ತಾನಿ ರೂಪಾಯಿ 200 ಹೆಚ್ಚಿಸಲಾಗಿದ್ದು, ಇದು ಪಾಕಿಸ್ತಾನಿ ರೂಪಾಯಿ 100 ರಿಂದ ಪಾಕಿಸ್ತಾನಿ ರೂಪಾಯಿ 300 ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.