ನಾಳೆಯಿಂದ 3 ದಿನ ಬ್ಯಾಂಕ್ ಮುಷ್ಕರ: ಯಾವೆಲ್ಲ ಬ್ಯಾಂಕಿಂಗ್ ಸೇವೆ ಸ್ಥಗಿತ? ಸಂಬಳದ ಮೇಲೆ ಪರಿಣಾಮ ಬೀರುತ್ತ?
Bank Strike: ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ಒಕ್ಕೂಟಗಳು, 3 ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ಘೋಷಿಸಿವೆ. ಐದು ದಿನಗಳ ಬ್ಯಾಂಕಿಂಗ್ ವಾರದ ಅನುಷ್ಠಾನವು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದ್ದು, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಷ್ಕರಕ್ಕೆ ಕರೆ ನೀಡಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 27: ನಾಳೆಯಿಂದ ಅಂದರೆ ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ಒಕ್ಕೂಟಗಳು, ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿವೆ (Bank Strike). ಐದು ದಿನಗಳ ಬ್ಯಾಂಕಿಂಗ್ ವಾರದ ಅನುಷ್ಠಾನವು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದ್ದು, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಷ್ಕರಕ್ಕೆ ಕರೆ ನೀಡಿದೆ. ಪಿಂಚಣಿ ಸೌಲಭ್ಯಗಳಲ್ಲಿ ಬದಲಾವಣೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಘ ಬೇಡಿಕೆ ಇಟ್ಟಿವೆ.
ಸೆಪ್ಟೆಂಬರ್ 30ರಂದು ಹಣಕಾಸು ಲೆಕ್ಕಪತ್ರ ಮುಕ್ತಾಯ ಇರುವುದರಿಂದ, ಅದೇ ಸಮಯದಲ್ಲಿ ಬ್ಯಾಂಕ್ ಮುಷ್ಕರ ನಡೆಯುವುದರಿಂದ ಸಾರ್ವಜನಿಕ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಸೇವಾ ವ್ಯತ್ಯಯ ಕಡಿಮೆ ಇರುವ ಸಾಧ್ಯತೆಯಿದೆ.
ಯಾವೆಲ್ಲ ಸೇವೆ ಬಂದ್?
ಮುಷ್ಕರದ ಸಂದರ್ಭದಲ್ಲಿ ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ನೀಡಬೇಕಾದ ಅಥವಾ ಸಿಬ್ಬಂದಿಯ ಕೈಯಿಂದ ಮಾಡಬೇಕಾದ ಸೇವೆಗಳು ಪರಿಣಾಮಕ್ಕೊಳಗಾಗುವ ಸಾಧ್ಯತೆಯಿದೆ. ಅವುಗಳೆಂದರೆ:
- ಬ್ಯಾಂಕ್ ಶಾಖೆಯಲ್ಲಿ ನಗದು ಠೇವಣಿ ಮತ್ತು ಹಣ ವಿತ್‌ಡ್ರಾ: ಬಂದ್ ಕರೆ ನೀಡಿದ ಬ್ಯಾಂಕ್ ಶಾಖೆಗಳಲ್ಲಿ ಕೌಂಟರ್ ಮೂಲಕ ಹಣ ಜಮಾ ಮಾಡುವುದು ಅಥವಾ ಹಣ ಪಡೆಯುವುದು ಸಾಧ್ಯವಾಗದಿರಬಹುದು.
- ಪಾಸ್‌ಬುಕ್ ಅಪ್‌ಡೇಟ್: ಪಾಸ್‌ಬುಕ್‌ನಲ್ಲಿ ವ್ಯವಹಾರಗಳ ಮುದ್ರಣ ಹಾಗೂ ಇತರ ಶಾಖೆ ಆಧಾರಿತ ಸೇವೆಗಳು ವಿಳಂಬವಾಗಬಹುದು.
- ಚೆಕ್ ಪ್ರಕ್ರಿಯೆ: ಚೆಕ್ ಕ್ಲಿಯರಿಂಗ್ ಸೇ ಭೌತಿಕವಾಗಿ ಪ್ರಕ್ರಿಯೆಗೊಳಿಸಬೇಕಾದ ಇತರ ವ್ಯವಹಾರಗಳಲ್ಲಿ ವಿಳಂಬ ಉಂಟಾಗಬಹುದು.
- ಡಿಮ್ಯಾಂಡ್ ಡ್ರಾಫ್ಟ್: ಹೊಸ ಡಿಮ್ಯಾಂಡ್ ಡ್ರಾಫ್ಟ್ ನೀಡಲು ಸಾಧ್ಯವಾಗದಿರಬಹುದು.
- KYC ಮತ್ತು ಖಾತೆಗೆ ಸಂಬಂಧಿಸಿದ ಕೆಲಸಗಳು: ಗ್ರಾಹಕರು ಖುದ್ದಾಗಿ ಹಾಜರಾಗಿ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಬೇಕಾದ ಅಥವಾ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಬೇಕಾದರೆ, ಶಾಖೆಗಳು ಪುನಃ ತೆರೆಯುವವರೆಗೆ ಕಾಯಬೇಕಾಗಬಹುದು.
- ಸಾಲಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು: ಸಾಲದ ಅರ್ಜಿ, ದಾಖಲೆ ಸಲ್ಲಿಕೆ, ಪರಿಶೀಲನೆ ಹಾಗೂ ಬ್ಯಾಂಕ್ ಸಿಬ್ಬಂದಿಯ ನೆರವು ಅಗತ್ಯವಿರುವ ಇತರ ಕೆಲಸಗಳಲ್ಲಿ ವಿಳಂಬವಾಗಬಹುದು.
- ಲಾಕರ್ ಸೇವೆಗಳು: ಬ್ಯಾಂಕ್ ಶಾಖೆಗಳು ಮುಚ್ಚಿರುವ ಸಂದರ್ಭದಲ್ಲಿ ಗ್ರಾಹಕರು ತಮ್ಮ ಭೌತಿಕ ಬ್ಯಾಂಕ್ ಲಾಕರ್‌ಗಳನ್ನು ಪ್ರವೇಶಿಸಲು ಸಾಧ್ಯವಾಗದಿರಬಹುದು.
- ಅರ್ಧ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಕೆಲಸ: ಸೆಪ್ಟೆಂಬರ್ 30ರ ಹಣಕಾಸು ವರ್ಷದ ಅರ್ಧವಾರ್ಷಿಕ ಮುಕ್ತಾಯಕ್ಕೆ ಸಂಬಂಧಿಸಿದ ಬ್ಯಾಂಕ್‌ನ ಆಂತರಿಕ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಬಹುದು.
ಎಸ್‌ಬಿಐ ಬ್ಯಾಂಕ್ ಸಿಬ್ಬಂದಿಗೆ ಖಾರದ ಪುಡಿ ಎರಚಿ 4 ಲಕ್ಷ ರೂಪಾಯಿ ದೋಚಿದ ಕಳ್ಳ
ಸೆಪ್ಟೆಂಬರ್ 27ರಂದು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲು ಸರ್ಕಾರ ಅವಕಾಶ ನೀಡಿದೆ. ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಭಾನುವಾರ ಸಾಮಾನ್ಯವಾಗಿ ಕಾರ್ಯನಿರ್ವಹಿಸಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.