ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆಸ್ತಿ ಆಸೆಗೆ ಬಿದ್ದ ಸೊಸೆ ಮಾವನಿಗೆ ಮಾಡಿದ್ದೇನು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ದಿನ ಕಳೆದಂತೆ ಸಮಾಜದಲ್ಲಿ ಮಾನವೀಯತೆ ಮರೆಯಾಗುತ್ತಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸೊಸೆ, ಅಳಿಯ, ಮಗ, ಮಗಳು ತಮ್ಮ ತಂದೆ- ತಾಯಿ ಇಲ್ಲವೇ ಅತ್ತೆ -ಮಾವನ ಮೇಲೆ ಕ್ರೂರವಾಗಿ ಹಲ್ಲೆ ನಡೆಸುವ ಮಟ್ಟಕ್ಕೆ ಹೋಗಿದ್ದಾರೆ. ಇದೀಗ ಸೊಸೆಯೊಬ್ಬಳು ಆಸ್ತಿ ಆಸೆಗೆ ಬಿದ್ದು ಮಾವನ ಮೇಲೆ ಡೆಡ್ಲಿ ಅಟ್ಯಾಕ್‌ ಮಾಡಿದ್ದಾಳೆ.

ರಾಕ್ಷಸಿಯಂತೆ ವೃದ್ಧ ಮಾವನ ಮೇಲೆ ಹಲ್ಲೆ ಮಾಡಿದ ಸೊಸೆ..!

-

Profile Sushmitha Jain Sep 2, 2025 5:40 PM

ಪ್ರತಾಪ್‌ಗಢ: ಉತ್ತರ ಪ್ರದೇಶದ (Uttar Pradesh) ಪ್ರತಾಪ್‌ಗಢ (Pratapgarh) ಜಿಲ್ಲೆಯಲ್ಲಿ 87 ವರ್ಷದ ವೃದ್ಧನ ಮೇಲೆ ಆತನ ಸೊಸೆ ದೌರ್ಜನ್ಯ (Assault) ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ. ಈ ಘಟನೆಯಿಂದಾಗಿ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ವೃದ್ಧ, ಆಕೆಯ ಸೊಸೆ ಮತ್ತು ಸ್ಥಳೀಯ ಗ್ರಾಮಸ್ಥರಿಂದ ಹೇಳಿಕೆ ದಾಖಲಿಸಿದ್ದಾರೆ.

ವರದಿಗಳ ಪ್ರಕಾರ, ಆಂಟು ಪೊಲೀಸ್ ಠಾಣಾ ವ್ಯಾಪ್ತಿಯ ಸರಾಯ್ ಕಲ್ಯಾಣದೇವ್‌ನ ವಿಶ್ವನಾಥ್ ತಿವಾರಿ (87) ಅವಿವಾಹಿತರಾಗಿದ್ದು, ತಮ್ಮ ಸಹೋದರನ ಮಕ್ಕಳಾದ ಓಂಕಾರನಾಥ್‌ನೊಂದಿಗೆ ವಾಸಿಸುತ್ತಿದ್ದಾರೆ. ತಮ್ಮ ಆಸ್ತಿಯನ್ನು ಸಹೋದರನ ಮಕ್ಕಳಿಗೆ ಬರೆದಿಟ್ಟಿದ್ದಾರೆ. ಓಂಕಾರನಾಥ್ ಉತ್ತರಾಖಂಡದಲ್ಲಿ ಖಾಸಗಿ ಉದ್ಯೋಗದಲ್ಲಿದ್ದು, ಆತನ ಪತ್ನಿ ಸುನೀತಾ ತಿವಾರಿ ಮಕ್ಕಳು ಮತ್ತು ವಿಶ್ವನಾಥ್‌ನೊಂದಿಗೆ ಮನೆಯಲ್ಲಿದ್ದಾಳೆ. ಶನಿವಾರ, ಸುನೀತಾ ವಿಶ್ವನಾಥ್‌ರ ಮೇಲೆ ದೌರ್ಜನ್ಯ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತು.



ಈ ಸುದ್ದಿಯನ್ನೂ ಓದಿ: Viral Video; ಇದು ಪೊಲೀಸ್ ಸಿಬ್ಬಂದಿಗಳ 'ಪೋಲಿ' ಕೆಲಸ; ಸರಸ ಹಾಡುವಾಗಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು

ವಿಡಿಯೋ ವೈರಲ್ ಆದ ಬಳಿಕ, ಆಂಟು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಆನಂದಪಾಲ್ ಭದೌರಿಯಾ ವಿಶ್ವನಾಥ್‌ ಅವರರ ನಿವಾಸಕ್ಕೆ ಭೇಟಿ ನೀಡಿ, ಸುನೀತಾ ಮತ್ತು ಗ್ರಾಮಸ್ಥರನ್ನು ವಿಚಾರಿಸಿದರು. ವಿಶ್ವನಾಥ್‌ರ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಭದೌರಿಯಾ ತಿಳಿಸಿದ್ದಾರೆ. ಸುನೀತಾ ಒಬ್ಬಳೇ ಆತನ ಆರೈಕೆ ಮಾಡುತ್ತಿದ್ದಾಳೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕೋಪದಿಂದ ಸುನೀತಾ ವಿಶ್ವನಾಥ್‌ರನ್ನು ಹೊಡೆದಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದು, ಆಕೆ ನಂತರ ಕ್ಷಮೆಯಾಚಿಸಿದ್ದಾಳೆ ಎಂದು ಹೇಳಿದ್ದಾರೆ.

ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ವೃದ್ಧರ ಆರೈಕೆಯ ಜವಾಬ್ದಾರಿಯನ್ನು ಹೊತ್ತಿರುವವರಿಂದ ಇಂತಹ ದೌರ್ಜನ್ಯದ ಆರೋಪಗಳು ಸಮಾಜದಲ್ಲಿ ಕಳವಳವನ್ನುಂಟುಮಾಡಿವೆ. ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ಸುನೀತಾ ವಿರುದ್ಧ ಕಾನೂನು ಕ್ರಮಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಘಟನೆಯಿಂದಾಗಿ ವೃದ್ಧರ ಕಲ್ಯಾಣಕ್ಕೆ ಸಂಬಂಧಿಸಿದ ಕಾನೂನುಗಳು ಮತ್ತು ಆರೈಕೆ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.