ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೊಡ್ಡ ರಾಜ್ಯ ಉತ್ತರ ಪ್ರದೇಶ ನಾಲ್ಕು ಭಾಗಗಳಾಗಿ ವಿಭಜನೆ: ಪ್ರಧಾನಿ ನರೇಂದ್ರ ಮೋದಿ ಬೆಂಬಲ ನೀಡಿದ್ದಾರೆ ಎಂದ ನಾಯಕ

Uttar Pradesh division: ಶೇ. 27ರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ನಾವು ನಿಮಗೆ ಭರವಸೆ ನೀಡಲು ಬಯಸುತ್ತೇವೆ. ಈ ವಿಷಯದ ಕುರಿತು ನಾನು ಪ್ರಧಾನಮಂತ್ರಿ ಜತೆ ಮಾತನಾಡಿದ್ದೇನೆ ಎಂದು ಪ್ರಸ್ತುತ ಉತ್ತರ ಪ್ರದೇಶದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ.

ನಾಲ್ಕು ಹೋಳಾಗಲಿದ್ಯಾ ಉತ್ತರ ಪ್ರದೇಶ?

ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ -

Priyanka P
Priyanka P Sep 23, 2026 5:29 PM

ಲಖನೌ, ಸೆ. 23: ಉತ್ತರ ಪ್ರದೇಶವನ್ನು (Uttar Pradesh) ನಾಲ್ಕು ಭಾಗಗಳಾಗಿ ವಿಭಜಿಸುವ ಎರಡು ದಶಕಗಳಷ್ಟು ಹಳೆಯದಾದ ಚರ್ಚೆಯನ್ನು ಎಸ್‌ಬಿಎಸ್‌ಪಿ (SBSP) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ (Om Prakash Rajbhar) ಮತ್ತೆ ಮುನ್ನೆಲೆಗೆ ತಂದಿದ್ದಾರೆ. ದೇಶದಲ್ಲಿ ಜಾತಿ ಜನಗಣತಿ ನಡೆದ ನಂತರ ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗುವುದು ಎಂದು ಹೇಳಿದ್ದಾರೆ. ಜಾತಿ ಜನಗಣತಿಯ ನಂತರ ರಾಜ್ಯ ವಿಭಜನೆಯಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಕ್ಯಾಬಿನೆಟ್ ಸಚಿವ ಮತ್ತು ಎನ್‌ಡಿಎ ಮಿತ್ರಪಕ್ಷದ ಭಾಗವಾಗಿರುವ ರಾಜ್‌ಭರ್ ಹೇಳಿದ್ದಾರೆ. ಡಿಯೋರಿಯಾದಲ್ಲಿ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಆಯೋಜಿಸಿದ್ದ ಸಮಾಜಿಕ್ ಸಮ್ರಸ್ತ ಮಹಾ ರ‍್ಯಾಲಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಶೇ. 27ರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ನಾವು ನಿಮಗೆ ಭರವಸೆ ನೀಡಲು ಬಯಸುತ್ತೇವೆ. ಈ ವಿಷಯದ ಕುರಿತು ನಾನು ಪ್ರಧಾನ ಮಂತ್ರಿ ಅವರ ಜತೆಯೂ ಮಾತನಾಡಿದ್ದೇನೆ ಎಂದು ಪ್ರಸ್ತುತ ಉತ್ತರ ಪ್ರದೇಶದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ.

“ಓಂ ಪ್ರಕಾಶ್, ನಿಮ್ಮ ಮಾತು ನ್ಯಾಯಸಮ್ಮತವಾಗಿದೆ. ಆದರೆ ಕೆಲವು ಜನರು ಇದನ್ನು ವಿರೋಧಿಸುತ್ತಿದ್ದಾರೆʼʼ ಎಂದು ಮೋದಿ ಹೇಳಿದರು. ಆಗ ನಾನು, ನಾವು ಇದನ್ನು ಹೇಗೆ ಮುಂದುವರಿಸಬಹುದು ಎಂದು ಕೇಳಿದೆ. ಅದಕ್ಕೆ ಅವರು, ನಾನು ಜಾತಿ ಜನಗಣತಿಯನ್ನು ನಡೆಸುತ್ತೇನೆ. ಒಮ್ಮೆ ನಾವು ಜಾತಿಗಳನ್ನು ಎಣಿಕೆ ಮಾಡಿದ ನಂತರ, ಯಾವುದೇ ತೊಂದರೆ ಇರುವುದಿಲ್ಲ ಎಂದು ಉತ್ತರಿಸಿದರು” ಎಂದು ರಾಜ್‌ಭರ್ ತಿಳಿಸಿದ್ದಾರೆ.

ಸ್ಟ್ಯಾಂಡ್‌ಅಪ್‌ ಕಾಮಿಡಿ ಹೆಸರಿನಲ್ಲಿ ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ತಾಯಿಗೆ ಅವಮಾನ

ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗುವುದು. ಪೂರ್ವಾಂಚಲ ರಾಜ್ಯ ರಚನೆಯಾದಾಗ ತನ್ನ ಮಗ ಮುಖ್ಯಮಂತ್ರಿಯಾಗುತ್ತಾನ ಎಂದು ಅವರು ಹೇಳಿದರು.

ಇನ್ನು ರಾಜ್‌ಭರ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕ ಇಮ್ರಾನ್ ಮಸೂದ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶವನ್ನು ಸಣ್ಣ ರಾಜ್ಯಗಳಾಗಿ ವಿಭಜಿಸುವ ಆಲೋಚನೆಯನ್ನು ಅನುಮೋದಿಸಿರುವ ಅವರು, ರಾಜ್ಯದ ಬೃಹತ್ ಭೌಗೋಳಿಕ ಗಾತ್ರದಿಂದಾಗಿ ಆಡಳಿತ ನಿರ್ವಹಣೆ ಮತ್ತು ಪ್ರಯಾಣ ಮಾಡುವುದು ಅತ್ಯಂತ ಕಷ್ಟವಾಗಿದೆ ಎಂದು ವಾದಿಸಿದ್ದಾರೆ.

“ನಾನು ಉತ್ತರ ಪ್ರದೇಶದ ವಿಭಜನೆಯನ್ನು ಬೆಂಬಲಿಸುತ್ತೇನೆ. ಉತ್ತರ ಪ್ರದೇಶ ವಿಭಜನೆಯಾದರೆ ನನಗೆ ತುಂಬಾ ಸಂತೋಷವಾಗುತ್ತದೆ. ಏಕೆಂದರೆ ಅದು ಬಹಳ ದೊಡ್ಡ ರಾಜ್ಯ. ಉತ್ತರ ಪ್ರದೇಶವು ಎಷ್ಟು ದೊಡ್ಡ ರಾಜ್ಯವೆಂದರೆ, ನೀವು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಪ್ರಯಾಣಿಸಬೇಕಾದರೆ, ಅದು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಉತ್ತರ ಪ್ರದೇಶಕ್ಕಿಂತ ಚಿಕ್ಕದಾದ ಅನೇಕ ದೇಶಗಳು ಜಗತ್ತಿನಲ್ಲಿವೆ” ಎಂದು ಮಸೂದ್ ಹೇಳಿದ್ದಾರೆ.

ಆದರೆ, ಉತ್ತರ ಪ್ರದೇಶದ ಸಚಿವ ಮತ್ತು ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ಈ ಹೇಳಿಕೆಯನ್ನು ದಾರಿತಪ್ಪಿಸುವಂತಿದೆ ಎಂದು ತಳ್ಳಿಹಾಕಿದರು. ಅವರ ಪಕ್ಷವು ಅಂತಹ ಯಾವುದೇ ವಿಭಜನೆಯ ಪರವಾಗಿಲ್ಲ ಎಂದು ಹೇಳಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಈ ವಿಚಾರವನ್ನು ತಳ್ಳಿಹಾಕಿದ್ದು, ದೇಶ ಮತ್ತು ರಾಜ್ಯವನ್ನು ವಿಭಜಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು.