ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಕಿ ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಮೂವರು ಮಕ್ಕಳನ್ನು ರಕ್ಷಿಸಿ ಪ್ರಾಣ ಬಿಟ್ಟ ದಿಟ್ಟ ಮಹಿಳೆ

Fire Incident: ತನ್ನ ಜೀವಕ್ಕೆ ಆಪತ್ತಾದರೂ ಮಕ್ಕಳನ್ನು ತನ್ನ ಉಸಿರಿನ ಕೊನೆತನಕವೂ ತಾಯಿ ಕಾಪಾಡುತ್ತಾಳೆ. ಇದಕ್ಕೆ ಜ್ವಲಂತ ಉದಾಹರಣೆಯೊಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಂಡು ಬಂದಿದೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಮೂರು ಮಕ್ಕಳನ್ನು ರಕ್ಷಿಸಿದ ಮಹಿಳೆ ಕೊನೆಗೆ ಬೆಂಕಿಗೆ ಬಲಿಯಾಗಿದ್ದಾರೆ.

ಪ್ರಾಣದ ಹಂಗು ತೊರೆದು ಮೂವರು ಮಕ್ಕಳನ್ನು ರಕ್ಷಿಸಿದ ಮಹಿಳೆ

ಮಕ್ಕಳನ್ನು ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿದ ಮಹಿಳೆ -

Priyanka P
Priyanka P May 18, 2026 6:35 PM

ಲಖನೌ, ಮೇ 18: ತನ್ನ ಜೀವಕ್ಕೆ ಆಪತ್ತಾದರೂ ಮಕ್ಕಳನ್ನು ಉಸಿರಿನ ಕೊನೆ ತನಕವೂ ತಾಯಿ ಕಾಪಾಡುತ್ತಾಳೆ. ಇದಕ್ಕೆ ಜ್ವಲಂತ ಉದಾಹರಣೆಯೊಂದು ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಮೂವರು ಮಕ್ಕಳನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಕಟ್ಟಡವನ್ನೆಲ್ಲ ಅಗ್ನಿಜ್ವಾಲೆಗಳು ಆವರಿಸಿ, ದಟ್ಟ ಹೊಗೆಯಿದ್ದರೂ ತಾಯಿ ತನ್ನ ಸುರಕ್ಷತೆಯ ಬಗ್ಗೆ ಯೋಚಿಸಲಿಲ್ಲ. ಮಕ್ಕಳನ್ನು ರಕ್ಷಿಸುವುದೇ ಅವರ ಗುರಿಯಾಗಿತ್ತು. ಉರಿಯುವ ಬೆಂಕಿಯ ಮಧ್ಯೆ ಮಕ್ಕಳನ್ನು ಒಬ್ಬೊಬ್ಬರಾಗಿ ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ. ಪ್ರತಿಯೊಬ್ಬರೂ ಪಾರಾಗುವಂತೆ ನೋಡಿಕೊಂಡ ಬಳಿಕ ತಾವೇ ಅಗ್ನಿ ಅವಘಡದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಘಟನೆ ಮೇ 12ರ ರಾತ್ರಿ ವಸತಿ ಕಟ್ಟಡದಲ್ಲಿ ಸಂಭವಿಸಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮಕ್ಕಳನ್ನು ಉಳಿಸುವತ್ತ ಗಮನಹರಿಸಿದ್ದಾರೆ. ಅಗ್ನಿ ಅವಘಡದ ನಡುವೆಯೂ ಮಕ್ಕಳನ್ನು ಒಬ್ಬೊಬ್ಬರಾಗಿ ಹೊರ ಕರೆ ತಂದಿದ್ದಾರೆ. ಅಂತಿಮವಾಗಿ ಬೆಂಕಿಯಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುವ ಮೊದಲು ಮಕ್ಕಳ ಸುರಕ್ಷಿತೆಯನ್ನು ಖಾತ್ರಿ ಪಡಿಸಿಕೊಂಡರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯ ನೆಲಮಹಡಿಯಲ್ಲಿ ಪಾತ್ರೆಗಳ ಅಂಗಡಿ ಮತ್ತು ಗೋದಾಮು ಇದ್ದು, ಮೇಲಿನ ಮಹಡಿಯಲ್ಲಿ ಕುಟುಂಬ ಸದಸ್ಯರು ಇದ್ದರು. ರಾತ್ರಿ 9 ಗಂಟೆ ಸುಮಾರಿಗೆ, ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು, ಅದು ಬೇಗನೆ ಕಟ್ಟಡದಾದ್ಯಂತ ಹರಡಿತು. ದಟ್ಟವಾದ ಹೊಗೆ ಶೀಘ್ರದಲ್ಲೇ ಮೇಲಿನ ಮಹಡಿಗಳನ್ನು ತಲುಪಿತು. ಜತೆಗೆ ನಿರ್ಗಮನ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿತು. ತಪ್ಪಿಸಿಕೊಳ್ಳಲು ಕುಟುಂಬ ಸದಸ್ಯರು ಟೆರೇಸ್‌ಗೆ ಧಾವಿಸಿದರು.

"ಅಕ್ರಮ ಸಂಬಂಧದ ಬಗ್ಗೆ ಹೇಳು": ಪತ್ನಿಗೆ ಮನಬಂದಂತೆ ಥಳಿಸಿ, ಗುಪ್ತಾಂಗಕ್ಕೆ ಆ್ಯಸಿಡ್ ಸುರಿದ ಪಾಪಿ ಪತಿ

ಈ ವೇಳೆ ಧೈರ್ಯ ತೋರಿದ ಅರ್ಚನಾ, ತನ್ನ ಒಂದು ವರ್ಷದ ಮಗುವನ್ನು ಸುರಕ್ಷಿತವಾಗಿ ಕರೆದೊಯ್ಯಲು ಬೆಡ್‌ಶೀಟ್‌ನಲ್ಲಿ ಸುತ್ತಿ 12 ಅಡಿ ಅಂತರದ ಪಕ್ಕದ ಛಾವಣಿಯಲ್ಲಿ ಎಚ್ಚರಿಕೆಯಿಂದ ಇಳಿಸಿದರು. ಇನ್ನೊಂದು ಬದಿಯಲ್ಲಿದ್ದವರು ಮಗುವನ್ನು ಸುರಕ್ಷಿತವಾಗಿ ಹೊರ ಕರೆತಂದರು. ನಂತರ ಅರ್ಚನಾ ಏಣಿ ಬಳಸಿ 13 ಮತ್ತು 10 ವರ್ಷದ ಹೆಣ್ಣುಮಕ್ಕಳನ್ನು ಪಕ್ಕದ ಟೆರೇಸ್ ತಲುಪಿಸಲು ಯಶಸ್ವಿಯಾದರು. ಇಷ್ಟು ಮಾತ್ರವಲ್ಲದೆ, ತನ್ನ ಸೋದರಳಿಯನನ್ನೂ ರಕ್ಷಿಸಿದ್ದಾರೆ.

ಆದರೆ, ರಕ್ಷಣಾ ಕಾರ್ಯದ ಸಮಯದಲ್ಲಿ ಅರ್ಚನಾ ಸ್ವತಃ ಬೆಂಕಿ ಮತ್ತು ಹೊಗೆಯಲ್ಲಿ ಸಿಲುಕಿಕೊಂಡು ತೀವ್ರ ಸುಟ್ಟಗಾಯಗಳಿಗೆ ಒಳಗಾದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟರು. ಅವರ 13 ವರ್ಷದ ಮಗಳಿಗೂ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಅರ್ಚನಾ ಅವರ ಅತ್ತಿಗೆ ಛಾವಣಿಯಿಂದ ಜಿಗಿಯುವಾಗ ಕಾಲಿನ ಮೂಳೆ ಮುರಿತವಾಯಿತು.

ಬೆಂಕಿ ಎಷ್ಟು ತೀವ್ರವಾಗಿತ್ತೆಂದರೆ, ಹಲವು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಹರಸಾಹಸಪಟ್ಟವು. ವ್ಯಾಪಕ ಪ್ರಯತ್ನಗಳ ನಂತರ ತಡರಾತ್ರಿಯ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.