ಖಾಕಿ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ
Khalistani Terrorist: ಕಳೆದ ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಗುಂಪಿನ ಸದಸ್ಯನನ್ನು ಪಂಜಾಬ್‌ನ ಅಮೃತಸರದ ಗ್ರಾಮವೊಂದರಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗತ್ ಸಿಂಗ್ ಎಂಬಾತನ ಬಂಧನಕ್ಕೆ ₹25,000 ಬಹುಮಾನ ಘೋಷಿಸಲಾಗಿತ್ತು. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ATS) ಮತ್ತು ಸಾಹಿಬಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳ ಜಂಟಿ ತಂಡವು ಆತನನ್ನು ಬಂಧಿಸಿದೆ.