Bollywood Movie: ಈ ವರ್ಷ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಹಿಟ್ ಕಂಡ ಬಾಲಿವುಡ್ ಸಿನಿಮಾಗಳಿವು!
2025 ನೇ ವರ್ಷವು ಬಾಲಿವುಡ್ ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ವರ್ಷವಾಗಿದೆ ಆರಂಭದಲ್ಲೇ ಕೆಲವು ಬಾಲಿವುಡ್ ಚಿತ್ರಗಳು ಈ ವರ್ಷ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ. ವಿಕ್ಕಿ ಕೌಶಲ್ ಅವರ 'ಚಾವಾ' , ಸಲ್ಮಾನ್ ಖಾನ್ 'ಸಿಕಂದರ್, ಅಕ್ಷಯ್ ಕುಮಾರ್ ಅವರ 'ಹೌಸ್ ಫುಲ್ 5' ಸೇರಿದಂತೆ ಬಾಲಿವುಡ್ ನ ಹಲವು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಗಳಿಸಿವೆ. ಈ ನಿಟ್ಟಿನಲ್ಲಿ 100 ಕೋಟಿ ಗೂ ಅಧಿಕ ಹಣ ಗಳಿಸಿದ ಕೆಲವು ಪ್ರಮುಖ ಚಿತ್ರಗಳ ಮಾಹಿತಿ ಇಲ್ಲಿದೆ.



ಛಾವಾ:ವಿಕಿ ಕೌಶಲ್ ನಟನೆಯ ಐತಿಹಾಸಿಕ ಆ್ಯಕ್ಷನ್ ಸಿನಿಮಾ “ಛಾವಾ” ಕೇವಲ ಮೂರು ದಿನಗಳಲ್ಲಿ 100 ಕೋಟಿ ಗೂ ಹೆಚ್ಚು ಆದಾಯ ಗಳಿಸಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನ ಕಥೆಯನ್ನು ತೋರ್ಪಡಿಸಲಾಗಿತ್ತು. ಚಿತ್ರವು ವಿಶ್ವಾದ್ಯಂತ 800 ಕೋಟಿ ರೂ ಗೂ ಹೆಚ್ಚು ಗಳಿಸಿದ್ದು ಈ ವರ್ಷದಲ್ಲಿಯೇ ಶೀಘ್ರ ಗೆಲುವು ದಾಖಲಿಸಿದ ಚಿತ್ರವಾಗಿದೆ.

ಸಯ್ಯಾರಾ: ಆಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದ ರೊಮ್ಯಾಂಟಿಕ್ ಡ್ರಾಮಾ ಸಯ್ಯಾರಾ ಸಿನಿಮಾವು ನಾಲ್ಕೇ ದಿನಗಳಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದೆ. ಆಶಿಕಿ-2 ಖ್ಯಾತಿಯ ಮೋಹಿತ್ ಸೂರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಪಕ್ಕಾ ಲವ್ ಸ್ಟೋರಿ ಇರುವ ಸಿನಿಮಾ ಇದಾಗಿದೆ.

ಹೌಸ್ಫುಲ್ 5: ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ, ಅಕ್ಷಯ್ ಕುಮಾರ್ ನಟನೆಯ ಕಾಮಿಡಿ ಎಂಟರ್ ಟೈನರ್ ಸಿನಿಮಾ ಹೌಸ್ ಫುಲ್ 5 ನಾಲ್ಕೇ ದಿನಕ್ಕೆ ಸುಮಾರು100 ಕೋಟಿ ಗಳಿಸಿ ಹಿಟ್ ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್ ಮತ್ತು ರಿತೇಶ್ ದೇಶ್ಮುಖ್ ಅಭಿನಯದ ಈ ಸಿನಿಮಾ ಸಿನಿಪ್ರಿಯರಿಗೆ ಭರಪೂರ ಮನರಂಜನೆ ನೀಡಿ ವಿಶ್ವಾದ್ಯಂತ ಸುಮಾರು 236.15 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ರೈಡ್ 2: ಅಜಯ್ ದೇವಗನ್ ಮತ್ತು ರಿತೇಶ್ ದೇಶ್ಮುಖ್ ಅಭಿನಯದ ''ರೈಡ್ 2” ಚಿತ್ರವು ಎಂಟು ದಿನ ಗಳಲ್ಲಿ ಸುಮಾರು 100 ಕೋಟಿ ಗಳಿಸುವ ಮೂಲಕ ಪ್ರೇಕ್ಷಕರ ಮನಸೆಳೆಯಿತು..ಭಾರತದಲ್ಲಿ ಸುಮಾರು 173.38 ಕೋಟಿ ರೂ. ಕಲೆಕ್ಷನ್ ಮಾಡಿರುವ ಈ ಚಿತ್ರವು ವಿಶ್ವಾದ್ಯಂತ ಸುಮಾರು 243.06 ಕೋಟಿ ರೂ.ಗಳಿಸಿ ಹಿಟ್ ಗಳಿಸಿದೆ.

ಸಿಕಂದರ್: ಸಲ್ಮಾನ್ ಖಾನ್ ಅಭಿನಯದ ಆ್ಯಕ್ಷನ್ ಡ್ರಾಮಾ “ಸಿಕಂದರ್” ಚಿತ್ರವು ಒಂಬತ್ತನೇ ದಿನದಲ್ಲಿ 100 ಕೋಟಿ ಗಡಿ ದಾಟಿ, ಸಿನಿಪ್ರಿಯರ ಗಮನ ಸೆಳೆದಿತ್ತು.ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಕ್ಕೆ ನೆಟ್ಟಿಗರು ಫಿದಾ ಆಗಿದ್ದು ಈ ಚಿತ್ರ ವಿಶ್ವಾದ್ಯಂತ 176.18 ಕೋಟಿ ರೂ. ಕಲೆಕ್ಷನ್ ಮಾಡಿದೆ.ಘಜಿನಿ ಸಿನಿಮಾ ನೀಡಿದ ಎಆರ್ ಮುರುಗದಾಸ್ ಅವರು ‘ಸಿಕಂದರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ

ಸ್ಕೈ ಫೋರ್ಸ್: ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ಅಭಿನಯದ 'ಸ್ಕೈ ಫೋರ್ಸ್' ಸಿನಿಮಾ ಕೂಡ ಹಿಟ್ ಲಿಸ್ಟ್ ನಲ್ಲಿದೆ. ಈ ಚಿತ್ರವು ಎರಡನೇ ವಾರದಲ್ಲಿ ಸುಮಾರು 100 ಕೋಟಿ ರೂ ಕಲೆಕ್ಷನ್ ಮಾಡಿದೆ .ಈ ಚಿತ್ರವು ವಿಶ್ವಾದ್ಯಂತ 168.88 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು ಭಾರತದ ಐತಿಹಾಸಿಕ ಮೊದಲ ವಾಯುದಾಳಿಯ ಕುರಿತು ಮಾಡಿರುವ ಸಿನಿಮಾ ಇದಾಗಿದ್ದು ಸಿನಿಪ್ರಿಯರ ಗಮನ ಸೆಳೆದಿತ್ತು. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ನೈಜ ಘಟನೆಯನ್ನು ಆಧರಿಸಿ ಚಿತ್ರದ ಕಥೆಯನ್ನು ನಿರ್ಮಿಸಲಾಗಿತ್ತು.