Annayya Serial: ಕರುಳು ಬಳ್ಳಿಗಳ ಒಂದಾಗಿಸೋಕೆ ಪಾರು ನಾನಾ ಪಾತ್ರ; ಪಾಪ ಶಿವು ಬಡವಾಗ್ತಿದ್ದಾನೆ!
Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಅಮ್ಮ-ಮಗ ಒಂದಾಗೋ ಸಮಯ ಹತ್ತಿರ ಬರುತ್ತಿದೆ. ಶಾರದಮ್ಮ ಹಾಗೂ ಶಿವುನ ಒಂದು ಮಾಡಲು ಪಾರು ಹರಸಾಹಸ ಪಡುತ್ತಿದ್ದಾಳೆ. ಬೇಕು ಅಂತಲೇ ಅತ್ತೆ ಜೊತೆ ಜಗಳಕ್ಕೆ ನಿಂತಿದ್ದಾಳೆ ಪಾರು.
ಅಣ್ಣಯ್ಯ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಅಮ್ಮ-ಮಗ ಒಂದಾಗೋ ಸಮಯ ಹತ್ತಿರ ಬರುತ್ತಿದೆ. ಶಾರದಮ್ಮ ಹಾಗೂ ಶಿವುನ ಒಂದು ಮಾಡಲು ಪಾರು ಹರಸಾಹಸ ಪಡುತ್ತಿದ್ದಾಳೆ. ಬೇಕು ಅಂತಲೇ ಅತ್ತೆ ಜೊತೆ ಜಗಳಕ್ಕೆ ನಿಂತಿದ್ದಾಳೆ ಪಾರು.
ಪಾರು, ಅಡುಗೆ ಮನೆಯಲ್ಲಿ ಡ್ರಾಮ ಮಾಡಿದ್ದಾಳೆ. ಅತ್ತೆ ಜೊತೆ ಬೇಕು ಅಂತ ಜಗಳ ಮಾಡಿ, ಪಾತ್ರಗಳನ್ನಲ್ಲ ಬಿಸಾಡಿದ್ದಾಳೆ. ಅಷ್ಟೇ ಅಲ್ಲ ನನಗೆ ನನ್ನ ಗಂಡ ತುಂಬಾ ಮುಖ್ಯ. ನನ್ನ ಗಂಡನೇ ಇಷ್ಟೂ ದಿನ ಮನೆ ನಿಭಾಯಿಸಿದ್ದು. ಈಗ ಏಕೆ ನಾನು ಅಡುಗೆ ಮನೆ ಬಿಟ್ಟುಕೊಡಲಿ ಅಂತ ಕೂಗಾಡಿದ್ದಾಳೆ ಪಾರು. ಅಷ್ಟೇ ಅಲ್ಲ ಶಿವು ಕೂಡ ಆಸ್ಪತ್ರೆಯಲ್ಲಿ ಅಷ್ಟೆಲ್ಲ ಕಷ್ಟ ಪಡುವಾಗ, ಈ ಅಡುಗೆ ಮನೆ ಕೆಲಸ ನಿನಗ್ಯಾಕೆ ಅಂತ ಸಮಾಧಾನ ಮಾಡಿದ್ದಾನೆ. ಒಟ್ಟಾರೆಯಾಗಿ ಅಮ್ಮನಿಗೆ ಹತ್ತಿರವಾಗ್ತಿದ್ದಾನೆ ಶಿವು.
ಪಾರು ತಂದೆ ವೀರಭದ್ರನು ಸೊಸೆ ರತ್ನಾಳ ಎದುರು ಅಸಲಿ ಮುಖ ಈಗಾಗಲೇ ತೋರಿಸಿದ್ದಾನೆ. ಅದೇ ವೇಳೆ ಮನೆಗೆ ಆಗಮಿಸಿದ ಪಾರ್ವತಿಯು ಕುತಂತ್ರಿ ಬುದ್ದಿಯ ಅಪ್ಪನನ್ನು ಅನುಮಾನದಿಂದ ಪ್ರಶ್ನೆ ಮಾಡಿದ್ದಾಳೆ. ಆದರೆ, ರತ್ನಾಳು ಮಾವ(ವೀರಭದ್ರನು ತನಗೆ ಮಾಡಿದ ಅವಮಾನದ ಬಗ್ಗೆ ಅತ್ತಿಗೆ ಪಾರ್ವತಿ ಹತ್ತಿರ ಹೇಳಿಕೊಂಡಿಲ್ಲ. ಇಷ್ಟಾದರೂ ಆಸ್ಪತ್ರೆ ವಿಚಾರವಾಗಿಯೂ ಮಸಲತ್ತು ಮಾಡಿದ್ದ ವೀರಭದ್ರ. ಆದರೆ ಅಲ್ಲಿಯೂ ಫೇಲ್ ಆಗಿದ್ದಾನೆ.
ಇನ್ನೂ, ತಾಯಿ, ಮಗನನ್ನು ಒಂದು ಮಾಡಲು ಪಾರ್ವತಿ ನಾನಾ ಕಸರತ್ತು ಮಾಡುತ್ತಿದ್ದರೆ, ಇತ್ತ ಶಿವು ತನಗೆ ಅರಿವಿಲ್ಲದೆ ಅಮ್ಮನಿಗೆ ಹತ್ತಿರವಾಗುತ್ತಿದ್ದಾನೆ. ಸದ್ಯ ಈ ದೃಶ್ಯವು ಪ್ರೇಕ್ಷಕರ ಗಮನ ಸೆಳೆದಿದೆ.
ಪಾರ್ವತಿ ಎದುರು ತಂದೆ ವೀರಭದ್ರನ ದುಷ್ಟತನದ ಮುಖವಾಡ ಕಳಚ್ಚುತ್ತಾ, ತನ್ನ ಆಸೆಯಂತೆಯೇ ತಾಯಿ, ಮಗ ಒಂದಾಗುತ್ತಾರಾ ಎಂಬುವುದು ಮುಂದಿನ ಸಂಚಿಕೆ ಗೊತ್ತಾಗಲಿದೆ.ಮತ್ತೊಂದು ಕಡೆ ರಶ್ಮಿ ಬದುಕು ಕೂಡ ಸರಿಯಾಗಿ ಸಾಗುತ್ತಿಲ್ಲ. ರಶ್ಮಿಗೆ ಡಿವೋರ್ಸ್ ಕೊಡಬೇಕು ಅಂತಿದ್ದ ಸೀನಗೆ ಚಮಕ್ ಕೊಟ್ಟಿದ್ದಾನೆ ಮಾದಪ್ಪ. ಸೀನ ಅಮ್ಮನಿಗೂ ನಾನೂ ಡಿವೋರ್ಸ್ ಕೊಡುವೆ ಅಂತ ಹೇಳಿದ್ದಾನೆ. ಹೀಗಾಗಿ ರಶ್ಮಿಗೂ ಮಾದಪ್ಪಣ್ಣ ಬುದ್ಧಿವಾದ ಹೇಳಿದ್ದಾನೆ.