Roshni Walia: "ಕಾಂಡೋಮ್ ತೆಗೆದುಕೊಂಡು ಹೋಗು, ಎಂಜಾಯ್ ಮಾಡು" ಖ್ಯಾತ ನಟಿಗೆ ತಾಯಿಯ ಸಲಹೆ!
ಬಾಲ್ಯ ಕಲಾವಿದೆಯಾಗಿ ಸಿನಿ ಪಯಣ ಆರಂಭಿಸಿ, ಹಿಂದಿ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಗಮನ ಸೆಳೆಯುತ್ತಿರುವ ನಟಿ ರೋಶ್ನಿ ವಾಲಿಯಾ, ತಮ್ಮ ವೈಯಕ್ತಿಕ ಜೀವನದ ಕುರಿತು ನೀಡಿದ ಬಹಿರಂಗ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ, ತಮ್ಮ ಯಶಸ್ಸಿಗೆ ತಾಯಿಯ ನಿರಂತರ ಬೆಂಬಲ ಮತ್ತು ತ್ಯಾಗವೇ ಕಾರಣ ಎಂದು ಅವರು ಭಾವುಕರಾಗಿ ನುಡಿದರು. ಆದರೆ ಅವರ ತಾಯಿ ರೋಶ್ನಿಗೆ ನೀಡಿದ ಸಲಹೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

Roshni Walia


ಬಾಲ ನಟಿಯಾಗಿ ಸಿನಿ ಜರ್ನಿ ಪ್ರಾರಂಭಿಸಿ ಇದೀಗ ಟಿವಿ ಜಗತ್ತಿನಲ್ಲಿ ಗಮನ ಸೆಳೆಯುತ್ತಿರುವ ಕಲಾವಿದೆ ರೋಶ್ನಿ ವಾಲಿಯಾ ಸಾಕಷ್ಟು ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ತಾಯಿಯ ಪ್ರೋತ್ಸಾಹ ಹಾಗೂ ತ್ಯಾಗವೇ ತಮ್ಮ ಯಶಸ್ಸಿಗೆ ಕಾರಣ ಎಂಬುದಾಗಿ ಅವರು ಸ್ಪಷ್ಟ ಪಡಿಸಿದ್ದಾರೆ. ತನ್ನ ತಾಯಿ ತನಗೆ ಎಲ್ಲದರಲ್ಲೂ ಬೆಂಬಲ ಸೂಚಿಸಿದರು ಎಂದು ಹೇಳುವ ಮೂಲಕ ಅವರು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಚಲನಚಿತ್ರಗಳಲ್ಲೂ ನಟಿಸಿರುವ ರೋಶ್ನಿ, ತಮ್ಮ ತಾಯಿಯ ಬೆಂಬಲದ ಬಗ್ಗೆ ವಿವರವಾಗಿ ಮಾತ ನಾಡಿದ್ದಾರೆ. "ಇಂದು ನಾನು ಈ ಮಟ್ಟಕ್ಕೆ ತಲುಪಲು ನನ್ನ ಅಮ್ಮನೇ ಸಂಪೂರ್ಣ ಕಾರಣ. ನನ್ನ ಕನಸುಗಳಿಗಾಗಿ ಅವರು ತಮ್ಮ ಊರನ್ನು ಬಿಟ್ಟು ಮುಂಬೈಗೆ ಬಂದರು. ಅವರ ತ್ಯಾಗವಿಲ್ಲದೆ ನಾನು ಇಲ್ಲಿಗೆ ಬರಲು ಸಾಧ್ಯವಿರಲಿಲ್ಲʼʼ ಎಂದಿದ್ದಾರೆ.

ತಮ್ಮ ತಾಯಿ ತಮಗೆ ಅಪಾರ ಸ್ವಾತಂತ್ರ್ಯ ನೀಡಿದ್ದಾರೆ ಮತ್ತು ಎಲ್ಲ ವಿಷಯಗಳಲ್ಲೂ ಮುಕ್ತ ವಾಗಿರುತ್ತಾರೆ ಎಂದು ರೋಶ್ನಿ ಭಾವುಕರಾಗಿದ್ದಾರೆ. "ನನ್ನ ಅಮ್ಮ ನನಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾರೆ. ನೀನು ಯಾಕೆ ಇವತ್ತು ಮನೆಯಲ್ಲಿ ಇದ್ದೀಯಾ? ಹೊರಗೆ ಹೋಗು, ಪಾರ್ಟಿಗೆ ಹೋಗು, ಮಜಾ ಮಾಡು ಕಾಂಡೋಮ್ ತೆಗೆದುಕೊಂಡು ಹೋಗುವುದನ್ನು ಮರೆಯಬೇಡ ಎಂದು ಸಲಹೆ ನೀಡುತ್ತಿದ್ದರುʼʼ ಎಂದು ನಗುತ್ತಲೇ ರೋಶ್ನಿ ತಮ್ಮ ತಾಯಿಯ ಮುಕ್ತ ಮನಸ್ಸನ್ನು ವಿವರಿಸಿದ್ದಾರೆ. ತಮ್ಮ ಅಕ್ಕನಿಗೂ ಕೂಡ ಇದೇ ರೀತಿಯ ಸಲಹೆಯನ್ನು ತಾಯಿ ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ರೋಶ್ನಿ ಈ ಹೇಳಿಕೆ, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಧ್ಯಮ ವರ್ಗದ ಕುಟುಂಬಗಳಿಂದ ಬಂದ ತಾಯಿಯೊಬ್ಬರು ಇಂತಹ ಮುಕ್ತ ಮನೋಭಾವವನ್ನು ಹೊಂದಿರುವುದು ಅಪರೂಪ ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಾಡರ್ನ್ ಮಮ್ಮಿ, ಅತ್ಯಂತ ಮುಕ್ತ ಮನಸ್ಸಿನವರು ಎಂದು ಹಲವರು ಕಾಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ರೋಶ್ನಿ ವಾಲಿಯಾ ತಮ್ಮ ವೃತ್ತಿ ಜೀವನವನ್ನು ದೂರದರ್ಶನ ಮತ್ತು ಜಾಹೀರಾತುಗಳ ಮೂಲಕ ಪ್ರಾರಂಭಿಸಿದರು. ʼಮೈನ್ ಲಕ್ಷ್ಮಿ ತೇರೆ ಆಂಗನ್ ಕಿʼ ಧಾರಾವಾಹಿಯ ಮೂಲಕ ನಟನೆಗೆ ಪಾದರ್ಪಣೆ ಮಾಡಿದರು. ʼಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್ʼ ಮತ್ತು ʼತಾರಾ ಫ್ರಂ ಸತಾರಾʼ ಧಾರಾವಾಹಿಗಳಲ್ಲಿ ಅವರ ಅಭಿನಯ ಗಮನ ಸೆಳೆದಿದೆ.