Photos: ಮೊದಲನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಡಾಲಿ ಧನಂಜಯ ದಂಪತಿ; ಇಲ್ಲಿವೆ ಅಪರೂಪದ ಫೋಟೋಗಳು
ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರು ಕಳೆದ ವರ್ಷ ಫೆ. 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಈ ಮದುವೆಗೆ ಸಾವಿರಾರು ಅಭಿಮಾನಿಗಳು, ಸಿನಿಮಾರಂಗದ ಗಣ್ಯರು, ರಾಜಕೀಯ ನಾಯಕರು ಆಗಮಿಸಿ, ಧನು ಮತ್ತು ಧನ್ಯತಾಗೆ ಶುಭ ಹಾರೈಸಿದ್ದರು. ಅಂದಹಾಗೆ, ಧನಂಜಯ್ ಅವರು ಇಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಪತ್ನಿ ಧನ್ಯತಾ ಅವರು ಕೆಲ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
-
ಧನಂಜಯ್ ಅವರು ಚಿತ್ರರಂಗದಲ್ಲಿ 'ನಟ ರಾಕ್ಷಸ'ನಾದರೆ, ಧನ್ಯತಾ ಅವರು ವೃತ್ತಿಯಲ್ಲಿ ಸ್ತ್ರೀರೋಗ ತಜ್ಞರು. ಕಲೆ ಮತ್ತು ವೈದ್ಯಕೀಯ ಜಗತ್ತಿನ ಈ ಅಪರೂಪದ ಬೆಸುಗೆ ಇವರದ್ದು.
ಇವರಿಬ್ಬರ ಪರಿಚಯ ಮತ್ತು ಪ್ರೇಮಕ್ಕೆ ಸಾಕ್ಷಿಯಾಗಿದ್ದು ಸಾಂಸ್ಕೃತಿಕ ನಗರಿ ಮೈಸೂರು. ಇಬ್ಬರೂ ತಮ್ಮ ಶಿಕ್ಷಣವನ್ನು ಮೈಸೂರಿನಲ್ಲೇ ಪೂರೈಸಿದ್ದು, ಈ ನಗರ ಇವರ ಜೀವನದಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಆರಂಭದಲ್ಲಿ ಧನು & ಧನ್ಯಾ ಅವರದ್ದು ಪರಿಚಯ ಮತ್ತು ಸ್ನೇಹವಾಗಿತ್ತು. ಧನ್ಯತಾ ಅವರು ಧನಂಜಯ್ ಅವರ ಅಭಿಮಾನಿಯಾಗಿದ್ದರು. ಕಾಲಕ್ರಮೇಣ ಈ ಸ್ನೇಹ ಪ್ರೇಮಕ್ಕೆ ತಿರುಗಿತು.
ಧನ್ಯತಾ ಅವರ ಸರಳತೆ ಮತ್ತು ವ್ಯಕ್ತಿತ್ವಕ್ಕೆ ಧನಂಜಯ್ ಮನಸೋತರು. ಧನ್ಯತಾ ಅವರ ಸ್ವಭಾವವೇ ಧನಂಜಯ್ ಅವರನ್ನು ಹೆಚ್ಚು ಆಕರ್ಷಿಸಿತು.
2024ರ ನವೆಂಬರ್ ತಿಂಗಳಿನಲ್ಲಿ ಧನ್ಯತಾ ಅವರ ಜೊತೆಗೆ ಮದುವೆ ಆಗುತ್ತಿರುವ ಬಗ್ಗೆ ಅಧಿಕೃತವಾಗಿ ಧನಂಜಯ್ ಘೋಷಿಸಿದರು.
2025ರ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ಸ್ನಲ್ಲಿ ಧನು & ಧನ್ಯತಾ ಅವರ ವಿವಾಹ ಅದ್ದೂರಿಯಾಗಿ ನೆರವೇರಿತು.
ಡಾಲಿ ಮದುವೆಗೆ ಸ್ಯಾಂಡಲ್ವುಡ್ನ ದಿಗ್ಗಜರು, ರಾಜಕೀಯ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು.
ಫೆಬ್ರವರಿ 16 ರಂದು ಇವರ ಮದುವೆ ವಾರ್ಷಿಕೋತ್ಸವವಾದರೆ, ಅದರ ಮರುದಿನವೇ (ಫೆಬ್ರವರಿ 17) ಧನ್ಯತಾ ಅವರ ಹುಟ್ಟುಹಬ್ಬ. ಹೀಗಾಗಿ ಫೆಬ್ರವರಿ ಇವರಿಗೆ ಡಬಲ್ ಸಂಭ್ರಮದ ತಿಂಗಳು.
ಈ ಮಧ್ಯೆ ಧನಂಜಯ್ ಅವರು ತಾವು ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಈ ವಾರ್ಷಿಕೋತ್ಸವವು ಮಗುವಿನ ನಿರೀಕ್ಷೆಯ ಸಂಭ್ರಮವನ್ನೂ ಡಬಲ್ ಮಾಡಿದೆ.
ಇಂದು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಜೋಡಿ ನೀವು ಶುಭ ಹಾರೈಸಿ.