Deepavali Nail art 2025: ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿರುವ ನೇಲ್ ಆರ್ಟ್ಗಳಿವು
Deepavali Nail art 2025: ದೀಪಾವಳಿಯ ಸೀಸನ್ನಲ್ಲಿ ನಾನಾ ಬಗೆಯ ದೀಪಗಳ ಮತ್ತು ಪಟಾಕಿಗಳ ಚಿತ್ರ ಇರುವ ಕಲರ್ಫುಲ್ ನೇಲ್ ಆರ್ಟ್ ಡಿಸೈನ್ಸ್ ಬಿಡುಗಡೆಗೊಂಡಿವೆ. ಯಾವ ಡಿಸೈನ್ನವು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ನೇಲ್ ಆರ್ಟಿಸ್ಟ್ ರಂಜಿತಾ ತಿಳಿಸಿದ್ದಾರೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್ -


ವೈವಿಧ್ಯಮಯ ದೀಪಗಳ ಚಿತ್ತಾರ
ದೀಪಾವಳಿ ಫೆಸ್ಟಿವ್ ಸೀಸನ್ನಲ್ಲಿ, ವೈವಿಧ್ಯಮಯ ದೀಪಗಳು ಹಾಗೂ ಪಟಾಕಿ ಚಿತ್ತಾರವನ್ನೊಳಗೊಂಡ ನೇಲ್ ಆರ್ಟ್ ಡಿಸೈನ್ಸ್ ಬಿಡುಗಡೆಗೊಂಡಿವೆ. ಪ್ರತಿ ಉಗುರಿನ ಮೇಲೂ ಆಯಾ ನೇಲ್ ಆರ್ಟ್ ಅಭಿಮಾನಿಗಳ ಅಭಿಲಾಷೆಗೆ ತಕ್ಕಂತೆ ನಾನಾ ಬಗೆಯ ದೀಪಗಳ ಚಿತ್ತಾರ ಮೂಡುತ್ತಿವೆ. ಅದರಲ್ಲೂ ಥೀಮ್ಗೆ ತಕ್ಕಂತೆ ಒಂದೊಂದು ಉಗುರಿಗೂ ಒಂದೊಂದು ವಿವಿಧ ವಿನ್ಯಾಸದ ಬೆಳಗುವ ದೀಪದ ಚಿತ್ರಗಳು ಆಕರ್ಷಕವಾಗಿ ರಾರಾಜಿಸುತ್ತಿವೆ ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ರಂಜಿತಾ.

ಅತ್ಯಾಕರ್ಷಕ ದೀಪಗಳ ಚಿತ್ತಾರ
ಹಬ್ಬದ ಥೀಮ್ಗೆ ತಕ್ಕಂತೆ ಸಾಲು ಸಾಲು ದೀಪ, ತೂಗು ದೀಪ, ಫ್ಲೋರಲ್ ದೀಪ ಸೇರಿದಂತೆ ಕಲರ್ಫುಲ್ ದೀಪದ ನೇಲ್ ಆರ್ಟ್ ಡಿಸೈನ್ಗಳು ಈಗಾಗಲೇ ಹುಡುಗಿಯರ ಉಗುರುಗಳನ್ನು ಆವರಿಸಿಕೊಂಡಿವೆ.

ನೇಲ್ ಮೇಲೆ ಪಟಾಕಿಗಳ ಕಲರ್ಫುಲ್ ಚಿತ್ರ
ಇನ್ನು, ಲಕ್ಷ್ಮೀ ಪಟಾಕಿ, ಹೂವಿನ ಕುಂಡ, ಭೂ ಚಕ್ರ, ಸುರ್ಸುರ್ ಭತ್ತಿ, ರಾಕೆಟ್, ಬಿಜಿಲಿ ಪಟಾಕಿ, ಸರ ಪಟಾಕಿ, ಆಟಂ ಬಾಂಬ್ ಸೇರಿದಂತೆ ನಾನಾ ಪಟಾಕಿಗಳ ಚಿತ್ರಗಳು ಈ ಬಾರಿಯ ನೇಲ್ ಆರ್ಟ್ನಲ್ಲಿ ಸೇರಿವೆ.

ಆಕಾಶ ದೀಪದ ಅಲಂಕಾರ
ಅಲ್ಲದೇ ಆಕಾಶ ದೀಪಗಳು, ಲ್ಯಾಂಟೆರ್ನ್ ಡಿಸೈನ್ಗಳು ದೀಪಾವಳಿ ನೇಲ್ ಆರ್ಟ್ ಡಿಸೈನ್ಗಳಲ್ಲಿ ರಾರಾಜಿಸುತ್ತಿವೆ.

ಮನೆಯಲ್ಲೆ ದೀಪಾವಳಿ ನೇಲ್ ಆರ್ಟ್
ಮನೆಯಲ್ಲೆ ನೀವೂ ಕೂಡ ದೀಪಾವಳಿ ನೇಲ್ಆರ್ಟ್ ಅನ್ನು ನಿಮ್ಮ ಉಗುರಿನ ಮೇಲೆ ಮೂಡಿಸಬಹುದು. ಅದಕ್ಕಾಗಿ ಒಂದಿಷ್ಟು ಸಿಂಪಲ್ ಸಲಹೆ ಪಾಲಿಸಿ ಎನ್ನುತ್ತಾರೆ ನೇಲ್ ಡಿಸೈನರ್ಸ್.
- ಉಗುರನ್ನು ಸಿಂಗರಿಸಲು ನೇಲ್ ಆರ್ಟ್ ಕಿಟ್ ಬಳಸಿ, ಡಿಸೈನ್ ಮಾಡಿ.
- ನೇಲ್ ಆರ್ಟ್ಗೆ ಮೂರಕ್ಕಿಂತ ಹೆಚ್ಚು ಬಣ್ಣ ಬಳಕೆ ಮಾಡಿ.
- ಲೈಟ್ ಮತ್ತು ಡಾರ್ಕ್ ಬಣ್ಣಗಳ ಕಾಂಟ್ರೆಸ್ಟ್ ಇರಲಿ. ಬ್ಯಾಕ್ ಗ್ರೌಂಡ್ಗೆ ಲೈಟ್ ಕಲರ್ ಮತ್ತು ಚಿತ್ರಗಳಿಗೆ ಡಾರ್ಕ್ ಬಣ್ಣ ಬಳಸಿ ಚಿತ್ತಾರ ಮೂಡಿಸಿ.
- ಉಗುರಿನ ಮೇಲೆ ಹಬ್ಬಕ್ಕೆ ಸಂಬಂಧಿಸಿದ ವಸ್ತುಗಳ ಚಿತ್ರ ಬರೆಯುವ ಮುನ್ನ ಅದರ ಚಿತ್ರವನ್ನು ಪೇಪರ್ ಮೇಲೆ ಬಿಡಿಸಿ. ಪ್ಲಾನ್ ಮಾಡಿ, ನಂತರ ಉಗುರಿನ ಮೇಲೆ ಚಿತ್ತಾರ ಮಾಡಿ ವಿನ್ಯಾಸ ಗೊಳಿಸಿ.
- ಚಿತ್ರಗಳಿಗೆ ಗೋಲ್ಡ್ ಮತ್ತು ಸಿಲ್ವರ್ ಗ್ಲಿಟರ್ ನೇಲ್ ಪಾಲಿಶ್ ಬಳಸಿದರೆ ಗ್ರ್ಯಾಂಡ್ ಲುಕ್ ನೀಡಬಹುದು.
- ನೇಲ್ ಆರ್ಟ್ ಚಿತ್ತಾರ ಮೂಡಿಸಲು ಆಪ್ತರ ಸಹಾಯ ಬೇಕಾಗಬಹುದು.