Festival Fashion 2026: ಗೌರಿ ಹಬ್ಬಕ್ಕೆ ಟ್ರೆಂಡಿಯಾದ 3 ಶೈಲಿಯ ಗಾಜಿನ ಬಳೆಗಳಿವು
ಈ ಬಾರಿಯ ಗೌರಿ ಹಬ್ಬಕ್ಕೆ ನಾನಾ ವರ್ಣಗಳ ವೈವಿಧ್ಯಮಯ ಅತ್ಯಾಕರ್ಷಕ ಗಾಜಿನ ಬಳೆಗಳು ಎಂಟ್ರಿ ನೀಡಿವೆ. ಅವುಗಳಲ್ಲಿ 3 ಬಗೆಯವು ಬೇಡಿಕೆ ಪಡೆದುಕೊಂಡಿವೆ. ವಿಶೇಷವೆಂದರೇ ಈ ಬಾರಿ ಹೊಸ ವೈಬ್ರೆಂಟ್ ಬಣ್ಣಗಳಲ್ಲಿ ಬಿಡುಗಡೆಗೊಂಡಿವೆ. ಈ ಬಗ್ಗೆ ಇಲ್ಲಿದೆ ವರದಿ.
ಚಿತ್ರಗಳು: ಮಿಂಚು -
ಈ ಬಾರಿಯ ಗೌರಿ ಹಬ್ಬಕ್ಕೆ ನಾನಾ ವರ್ಣದ ಡಿಸೈನ್ನ ಬಳೆಗಳು ಎಂಟ್ರಿ ನೀಡಿವೆ. ಹೆಣ್ಣುಮಕ್ಕಳ ಹಬ್ಬವೆಂದೇ ಕರೆಸಿಕೊಳ್ಳುವ ಗೌರಿ ಹಬ್ಬಕ್ಕೆ ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ಬಂದಿವೆ. ಅವುಗಳಲ್ಲಿ 3 ಬಗೆಯವು ಸಖತ್ ಟ್ರೆಂಡಿಯಾಗಿವೆ. ಇನ್ನು, ಈ ಬಾರಿಯೂ ಕೂಡ ಹಸಿರು, ಕೆಂಪು, ಹಳದಿ, ಗುಲಾಬಿ, ಮೆಜೆಂತಾ ಹೀಗೆ ನಾನಾ ವರ್ಣಗಳಲ್ಲಿ ಲಭ್ಯವಿರುವ ಗಾಜಿನ ಬಳೆಗಳನ್ನು ಖರೀದಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಬಳೆ ಮಾರಾಟಗಾರರು.
ಗಾಜಿನ ಬಾಕ್ಸ್ ಬಳೆಗಳು
ಹಳೆಯ ಡಿಸೈನ್ನಲ್ಲೆ ಕಲರ್ ಕಲರ್ನ ಗಾಜಿನ ಬಳೆಗಳು ಈ ಬಾರಿಯೂ ಬಂದಿವೆ. ವಿಶೇಷವೆಂದರೇ ಈ ಬಾರಿ ಹೊಸ ವೈಬ್ರೆಂಟ್ ಬಣ್ಣಗಳಲ್ಲಿ ಬಿಡುಗಡೆಗೊಂಡಿವೆ. ಇವು ಟೀನೇಜ್ ಹುಡುಗಿಯರಿಗೂ ಪ್ರಿಯವಾಗಿವೆ.
ರೈನ್ಡ್ರಾಪ್ ಗಾಜಿನ ಬಳೆಗಳು
ಇನ್ನು ರೈನ್ ಡ್ರಾಪ್ ಗಾಜಿನ ಬಳೆಗಳು ಬಹುತೇಕ ಬಾಕ್ಸ್ ಬಳೆಗಳಂತೆಯೇ ಇರುತ್ತವೆ. ಒಂದೇ ರೂಪವಿದ್ದರೂ, ಇತ್ತೀಚೆಗೆ ನಾನಾ ಕಲರ್ ಹಾಗೂ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ವಿವಾಹಿತ ಮಹಿಳೆಯರು ಇವನ್ನು ಅತಿ ಹೆಚ್ಚು ಧರಿಸುತ್ತಾರೆ.
ಸಾದಾ ಗಾಜಿನ ಬಳೆಗಳು
ಇವು ತೀರಾ ಹಳೆ ಕಾನ್ಸೆಪ್ಟ್ನ ಬಳೆಗಳಾದರೂ ಇಂದಿಗೂ ಟ್ರೆಡಿಷನಲ್ ಲುಕ್ ಬಯಸುವ ಮಹಿಳೆಯರು ಇವನ್ನೇ ಧರಿಸುತ್ತಾರೆ. ಇವನ್ನು ಹಬ್ಬದಂದು ಕುಂಕುಮಕ್ಕೆ ಬರುವ ಮಹಿಳೆಯರಿಗೂ ನೀಡಲಾಗುತ್ತದೆ. ಅದರಲ್ಲೂ ಹಸಿರು ಬಳೆಗಳಿಗೆ ಮಹತ್ವದ ಸ್ಥಾನ ಎನ್ನುತ್ತಾರೆ ಸ್ಟೈಲಿಸ್ಟ್ ಲಕ್ಷ್ಮಿ.
ಗಾಜಿನ ಬಳೆಗಳಿಂದ ಸಕಾರಾತ್ಮಕ ಶಕ್ತಿ
ಪ್ರತಿ ಗೌರಿ ಹಬ್ಬಕ್ಕೂ ಬಾಗಿನದ ಜತೆಗೆ ಹೆಣ್ಣುಮಕ್ಕಳಿಗೆ ಡಜನ್ಗಟ್ಟಲೆ ಗಾಜಿನ ಬಳೆಗಳನ್ನು ನೀಡಲಾಗುತ್ತದೆ. ಗಾಜಿನ ಬಳೆಗಳನ್ನು ಧರಿಸುವುದರಿಂದ ಸುತ್ತಮುತ್ತಲಿರುವ ನೆಗೆಟಿವ್ ಎನರ್ಜಿ ದೂರಾಗುತ್ತದೆ. ಪಾಸಿಟಿವ್ ಎನರ್ಜಿ ಎಲ್ಲೆಡೆ ಹರಡುತ್ತದೆ ಎನ್ನುತ್ತಾರೆ ಸ್ಪಿರಿಚ್ಯುವಲ್ ಎಕ್ಸ್ಪರ್ಟ್ ಆರತಿ.