Holi Celebration 2026: ಎಲ್ಲೆಡೆ ಹೋಳಿ ಪಾರ್ಟಿಯ ಸಂಭ್ರಮ
ಇದೀಗ ಎಲ್ಲಿ ನೋಡಿದರೂ ಹೋಳಿ ಪಾರ್ಟಿಗಳ ಸಂಭ್ರಮ ಮನೆ ಮಾಡಿದೆ. ಉದ್ಯಾನನಗರಿ ಬೆಂಗಳೂರು ಮಾತ್ರವಲ್ಲ, ರಾಜ್ಯದ ಎಲ್ಲೆಡೆ ನಾನಾ ಹೆಸರಲ್ಲಿ ಥೀಮ್ನಲ್ಲಿ ಹೋಳಿ ಪಾರ್ಟಿಗಳು ಆರಂಭಗೊಂಡಿವೆ. ಯಾವ್ಯಾವ ಥೀಮ್ನಲ್ಲಿ ಹೋಳಿ ಪಾರ್ಟಿಗಳು ಆಯೋಜನೆಗೊಂಡಿವೆ? ಏನೆಲ್ಲ ಸೌಲಭ್ಯ ಹೊಂದಿರುತ್ತವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.
ಚಿತ್ರಕೃಪೆ: ಪಿಕ್ಸೆಲ್, ಬೆಂಗಳೂರು -
ಹೊಸ ರೂಪ ಪಡೆದ ಹೋಳಿಯ ಸೆಲೆಬ್ರೇಷನ್
ಇದೀಗ ಎಲ್ಲಿ ನೋಡಿದರೂ ಹೋಳಿಯ ಸಂಭ್ರಮ. ಉದ್ಯಾನನಗರಿ ಬೆಂಗಳೂರು ಮಾತ್ರವಲ್ಲ, ರಾಜ್ಯದ ಎಲ್ಲೆಡೆ ನಾನಾ ಹೆಸರಲ್ಲಿ ಥೀಮ್ನಲ್ಲಿ ಹೋಳಿ ಪಾರ್ಟಿಗಳು ಆರಂಭಗೊಂಡಿವೆ. ಹಿಂದಿನಂತೆ ಇತ್ತೀಚೆಗೆ ಹೋಳಿ ಕೇವಲ ಕಾಲೋನಿಯ ಹಬ್ಬವಾಗಿ ಉಳಿದಿಲ್ಲ. ಬದಲಿಗೆ ಯಂಗ್ಸ್ಟರ್ಸ್ ಕೂಡ ಎಂಜಾಯ್ ಮಾಡುವಂತಹ ಫೆಸ್ಟ್ ಆಗಿ ಪರಿವರ್ತನೆಯಾಗಿದೆ. ಇದಕ್ಕೆಂದೆ ನಾನಾ ಶೈಲಿಯಲ್ಲಿ ಹೋಳಿ ಪಾರ್ಟಿಗಳು ಆಯೋಜನೆಗೊಳ್ಳುತ್ತಿವೆ ಎನ್ನುತ್ತಾರೆ ಹೋಳಿ ಪಾರ್ಟಿ ಆಯೋಜಿಸಿರುವ ರಾಜನ್. ಅವರ ಪ್ರಕಾರ, ರಂಗಿನೊಂದಿಗೆ ಮ್ಯೂಸಿಕ್, ಡಾನ್ಸ್, ಲೈವ್ ಡೋಲ್ನಂತಹ ಕಾನ್ಸೆಪ್ಟ್ಗಳು ಇತ್ತೀಚೆಗೆ ಟ್ರೆಂಡಿಯಾಗಿವೆ.
ಹೆಚ್ಚಾಯ್ತು ಬಿಂದಾಸ್ ಹೋಳಿ ಪಾರ್ಟಿಗಳು
ಹೋಳಿ ಪಾರ್ಟಿಗಳು ಈ ಸೀಸನ್ನಲ್ಲಿ ಈಗಾಗಲೇ ಆರಂಭಗೊಂಡಿದ್ದು, ನಾನಾ ಹೆಸರಲ್ಲಿ ಆಯೋಜನೆಗೊಂಡಿವೆ. ಈ ಪಾರ್ಟಿಗಳಲ್ಲಿ ಎಲ್ಲ ತರಹದ ಸೌಲಭ್ಯಗಳು ದೊರೆಯುತ್ತವೆ. ಅಷ್ಟು ಮಾತ್ರವಲ್ಲ, ಊಟೋಪಚಾರ, ಮಧ್ಯದಲ್ಲಿಒಂದಿಷ್ಟು ರೆಸ್ಟ್, ಬ್ರೇಕ್ ಬೇಕಿದ್ದಲ್ಲಿಎದ್ದು ಹೋಗಬಹುದು, ಸಾಕಾದಲ್ಲಿ ಹರಟೆ ಹೊಡೆಯುತ್ತ ಹೊರ ನಡೆಯಬಹುದು. ಈ ಸೀಸನ್ಗೆ ಸೂಟ್ ಆಗುವಂತಹ ಬ್ರಂಚ್ ಕೂಡ ಲಭ್ಯ. ಒಟ್ಟಿನಲ್ಲಿ, ಮೋಜು-ಮಸ್ತಿಗೆ ಹೇಳಿ ಮಾಡಿಸಿದ ಕಾನ್ಸೆಪ್ಟ್ ಇದು ಎನ್ನುತ್ತಾರೆ ಪಾರ್ಟಿಯ ಆಯೋಜಕರು.
ಹೋಳಿಯಲ್ಲಿ ಲೈವ್ ಡೋಲ್ ಪಾರ್ಟಿ
ಹಿಂದಿ ಸಿನಿಮಾಗಳ ಹಾಡಿನೊಂದಿಗೆ ಹಾಗೂ ಡೋಲ್ ಮ್ಯೂಸಿಕ್ನೊಂದಿಗೆ ಆರಂಭ ಹಾಗೂ ಅಂತ್ಯ ಕಾಣುವ ಹೋಳಿ ಡಾನ್ಸ್ ಪಾರ್ಟಿಗಳು ಕೂಡ ಈ ಪ್ರಚಲಿತದಲ್ಲಿವೆ.
ಹೋಳಿ ಪೂಲ್ ಪಾರ್ಟಿ
ಓಪನ್ ಏರ್ ಹೋಳಿ ಪೂಲ್ ಪಾರ್ಟಿ ಹೆಸರಿನಲ್ಲಿ ನಡೆಯುವ ನಾನಾ ಕಾನ್ಸೆಪ್ಟ್ನ ಹೋಳಿ ಪಾರ್ಟಿಗಳು ಟ್ರೆಂಡಿಯಾಗಿವೆ. ಇದರಲ್ಲಿ ರೈನ್ ಡ್ಯಾನ್ಸ್ ಸೇರಿದಂತೆ ಸಾಕಷ್ಟು ಸೌಲಭ್ಯಗಳು ದೊರೆಯುವುದರಿಂದ ಯಂಗ್ಸ್ಟರ್ಸ್ ಪಾಲ್ಗೊಳ್ಳುವುದು ಹೆಚ್ಚು ಎನ್ನುತ್ತಾರೆ ಹೋಳಿ ಆಯೋಜಕ ಸಿಂಚನ್.
ಇಕೋ ಫ್ರೆಂಡ್ಲಿ ಪಾರ್ಟಿ
ಪರಿಸರ ಪ್ರೇಮಿಗಳು ಭಾಗವಹಿಸಬಹುದಾದ ಹೋಳಿ ಪಾರ್ಟಿಯಿದು. ಇಲ್ಲಂತೂ ಕೆಮಿಕಲ್ ಮುಕ್ತ ಕಲರ್ಗಳ ಬಳಕೆ, ಹೂಗಳ ಹೋಳಿಯಾಟ ನಡೆಯುತ್ತದೆ. ಒಟ್ಟಾರೆ, ಜನರೇಷನ್ ಬದಲಾದಂತೆ ಕಾನ್ಸೆಪ್ಟ್ಗಳು ಕೂಡ ಹೊಸ ರೂಪ ಪಡೆದಿವೆ. ರಂಗಿನಾಟಕ್ಕೆ ಪಾರ್ಟಿಯ ಹೆಸರು ಥಳುಕು ಹಾಕಿಕೊಂಡಿವೆ.