Models Tips 2026: ಮಾಡೆಲ್ಗಳಿಗೆ ಪ್ರತಿಭಾ ಸೌಂಶಿಮಠ ನೀಡಿದ ಫ್ಯಾಷನ್ ಸೂತ್ರಗಳು
ಯಶಸ್ವಿ ಪ್ರೊಫೆಷನಲ್ ಮಾಡೆಲ್ಗಳಾಗುವುದು ಎಲ್ಲರಿಂದಲೂ ಸಾಧ್ಯವಿಲ್ಲ! ಇದಕ್ಕಾಗಿ ಒಂದಿಷ್ಟು ಫ್ಯಾಷನ್ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ಮಿಸೆಸ್ ಇಂಡಿಯಾ (ಆಸ್ಟ್ರಲ್) ಫೌಂಡರ್ ಹಾಗೂ ಡೈರೆಕ್ಟರ್ ಪ್ರತಿಭಾ ಸೌಂಶಿಮಠ. ಈ ಬಗ್ಗೆ ಒಂದಿಷ್ಟು ಸಿಂಪಲ್ ಸಲಹೆ ನೀಡಿದ್ದಾರೆ.
ಚಿತ್ರಗಳು: ಪ್ರತಿಭಾ ಸೌಂಶಿಮಠ & ಟೀಮ್ -
ಮಾಡೆಲ್ಗಳಿಗೆ ಆತ್ಮವಿಶ್ವಾಸ ಮುಖ್ಯ
ಯಶಸ್ವಿ ಮಾಡೆಲ್ಗಳಾಗಲು ಒಂದಿಷ್ಟು ಫ್ಯಾಷನ್ ಹಾಗೂ ರ್ಯಾಂಪ್ ರೂಲ್ಸ್ ಫಾಲೋ ಮಾಡುವುದು ಅಗತ್ಯ ಎನ್ನುತ್ತಾರೆ ಮಿಸೆಸ್ ಇಂಡಿಯಾ (ಆಸ್ಟ್ರಲ್) ಫೌಂಡರ್ ಮತ್ತು ಡೈರೆಕ್ಟರ್ ಪ್ರತಿಭಾ ಸೌಂಶಿಮಠ. ಈ ಕುರಿತಂತೆ ಒಂದಿಷ್ಟು ಸಿಂಪಲ್ ಒಂದಿಷ್ಟು ಸಲಹೆ ನೀಡಿದ್ದಾರೆ. ಮಾಡೆಲ್ಗಳಿಗೆ ಎಲ್ಲದಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ ಮುಖ್ಯ. ರ್ಯಾಂಪ್ ಮೇಲೆ ವಾಕ್ ಮಾಡುವಾಗ ಆತ್ಮವಿಶ್ವಾಸ ಇಲ್ಲದೇ ಹೋದರೇ, ಜೀವವಿರುವ ಬೊಂಬೆಯಂತೆ ಕಾಣುತ್ತಾರೆ. ನೋಡುಗರು ಮೆಚ್ಚುವಂತೆ ವಾಕ್ ಮಾಡುವುದು ರೂಪದರ್ಶಿಯ ನಡಿಗೆ ಹಾಗೂ ಮುಖ ಭಾವದಲ್ಲಿ ಕಾಣುವುದು ಅಗತ್ಯ.
ಬ್ಯೂಟಿ ವಿತ್ ಬ್ರೈನ್ಸ್ ಆಗುವುದು ಅವಶ್ಯ
ಅಂದ ಚೆಂದದ ಜತೆಗೆ ಮಾಡೆಲ್ಗಳು ಬುದ್ಧಿವಂತಿಕೆ ಕೂಡ ಹೊಂದಿರಬೇಕು. ಸುತ್ತಮುತ್ತಲ ಹಾಗೂ ಸಮಾಜದ ಆಗುಹೋಗುಗಳ ಅರಿವಿನ ಜತೆಗೆ ಪರಿಸ್ಥಿತಿಯನ್ನು ಸಂಭಾಳಿಸುವ ಬುದ್ದಿವಂತಿಕೆ ಇರಲೇ ಬೇಕು. ಮಾಡೆಲ್ಗಳ ಸಂಕೇತವೇ ಸ್ಟೈಲಿಂಗ್. ಪ್ರಸ್ತುತ ಸ್ಟೈಲ್ ಟ್ರೆಂಡ್ಗಳ ಬಗ್ಗೆ ಅರಿವಿರಬೇಕು. ಹೊಸ ಸ್ಟೈಲ್ ಹುಟ್ಟುಹಾಕುವ ಕಲೆಯಿರಬೇಕು.
ಉತ್ತಮ ಕಮ್ಯೂನಿಕೇಷನ್ ಅಗತ್ಯ
ಇನ್ನೊಬ್ಬರೊಂದಿಗೆ ಬೆರೆಯುವುದು, ಮತ್ತೊಬ್ಬರ ಆಲೋಚನೆಗಳಿಗೆ ಸ್ಪಂದಿಸಿ, ಅದಕ್ಕೆ ಜೀವ ನೀಡುವುದು ಡಿಸೈನರ್ಗಳು, ಮೇಕಪ್ ಆರ್ಟಿಸ್ಟ್ಗಳು, ಫೋಟೋಗ್ರಾಫರ್ಸ್. ಹಾಗಾಗಿ ಇವರೊಂದಿಗಿನ ಸ್ನೇಹವನ್ನು ಕಾಪಾಡಿಕೊಂಡು ಹೋಗುವುದು ಎತ್ತರಕ್ಕೆ ಬೆಳೆಯಲು ಬಹಳಷ್ಟು ಸಹಕಾರಿ. ಬ್ಯೂಟಿಫುಲ್ ಎಂದು ಅನಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಉಡುಪು, ಭಂಗಿ, ಕ್ಯಾಮರಾಗೆ ನೀಡುವ ಫೋಸ್ ಇವೆಲ್ಲದರ ಬಗ್ಗೆ ಅರಿವಿರಬೇಕು. ಕಲಿಯಬೇಕು.
ರ್ಯಾಂಪ್ ಸದುಪಯೋಗ
ರೂಪದರ್ಶಿಗಳಿಗೆ ಭಾವನೆಗಳಿಗೆ ಅವಕಾಶವೇ ಇಲ್ಲ. ತಮ್ಮನ್ನ ತಾವು ಏನು ಎಂದು ಸಾಬೀತು ಪಡಿಸಿಕೊಳ್ಳಲು ರ್ಯಾಂಪ್ ಮೇಲೆ ಸಿಗುವುದು ಕೆಲವೇ ಕ್ಷಣಗಳು ಮಾತ್ರ. ಆ ಸೆಕೆಂಡ್ಗಳಲ್ಲೇ ನೋಡುಗರ ಮೆಚ್ಚುಗೆ ಗಳಿಸಬೇಕು. ಅದು ಆಟಿಟ್ಯೂಡ್ನಿಂದ ಮಾತ್ರವೇ ಸಾಧ್ಯ.
ಮಾಡೆಲ್ಗಳ ಬಾಡಿ ಲ್ಯಾಂಗ್ವೇಜ್
ಬಾಡಿ ಲ್ಯಾಂಗ್ವೇಜ್ ಬಗ್ಗೆ ತಿಳಿದಿರುವುದು ಅವಶ್ಯ. ಸ್ಟೇಜ್ ಮೇಲೆ ನಿಂತಷ್ಟೂ ಹೊತ್ತು, ಲುಕ್ ಬಗ್ಗೆ, ನಿಲ್ಲುವ ನಿಯಮಗಳನ್ನು ಪಾಲಿಸುವುದು ಅತಿ ಮುಖ್ಯ. ಯಾವುದೇ ರೂಪದರ್ಶಿ ನಡೆಯುವ, ಕೂರುವ, ಮಾತನಾಡುವುದು ಎಲ್ಲವೂ ಅವರ ಸ್ಟೈಲ್ನಲ್ಲೇ ಅದು ವ್ಯಕ್ತವಾಗಬೇಕು.