ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಲರ್ಸ್‌ ಕನ್ನಡ 'ಅನುಬಂಧ ಅವಾರ್ಡ್ಸ್‌': ಕಿರುತೆರೆ ಕಲಾವಿದರ ಸಂಭ್ರಮಕ್ಕೆ ಮೆರುಗು ತುಂಬಿದ ಸ್ಯಾಂಡಲ್‌ವುಡ್‌ ದಿಗ್ಗಜರು

ಕನ್ನಡ ಕಿರುತೆರೆಯ ಜನಪ್ರಿಯ 'ಕಲರ್ಸ್‌ ಕನ್ನಡ' ವಾಹಿನಿ ತನ್ನ 12ನೇ ವರ್ಷದ 'ಅನುಬಂಧ ಅವಾರ್ಡ್ಸ್‌' ಸಂಭ್ರಮಕ್ಕೆ ಸಜ್ಜಾಗಿದೆ. ಜನವರಿ 24, 25 ಮತ್ತು 26ರಂದು ಸತತ ಮೂರು ದಿನಗಳ ಕಾಲ ಸಂಜೆ 7ಕ್ಕೆ ಈ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಮನರಂಜನೆಯ ಮಹಾಪೂರವೇ ಹರಿಯಲಿದೆ. ಈ ಬಾರಿಯ ಅವಾರ್ಡ್ಸ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಅನುಬಂಧ ಅವಾರ್ಡ್ಸ್‌ ಕೇವಲ ಒಂದು ಪ್ರಶಸ್ತಿ ಪ್ರದಾನ ಸಮಾರಂಭವಲ್ಲ, ಬದಲಿಗೆ ಕಲರ್ಸ್‌ ಕನ್ನಡ ಮತ್ತು ಅದರ ಕೋಟ್ಯಂತರ ವೀಕ್ಷಕರ ನಡುವಿನ ಅವಿನಾಭಾವ ಸಂಬಂಧದ ಸಂಭ್ರಮ. ನಮ್ಮ ಕಥೆಗಳನ್ನು ತಮ್ಮದೇ ಕಥೆಗಳಂತೆ ಸ್ವೀಕರಿಸಿ ಅಪ್ಪಿಕೊಂಡಿರುವ ಪ್ರೇಕ್ಷಕರು ಮತ್ತು ನಮ್ಮ ನಡುವಿನ ಅಳಿಸಲಾಗದ ಬಂಧಕ್ಕೆ ಸಲ್ಲುವ ಗೌರವವೇ ಈ 'ಅನುಬಂಧ ಅವಾರ್ಡ್ಸ್‌'.

Photos: ಕಲರ್ಸ್‌ ಕನ್ನಡ ವಾಹಿನಿಯ 'ಅನುಬಂಧ ಅವಾರ್ಡ್ಸ್‌' 3 ದಿನ ಪ್ರಸಾರ

-

Avinash GR
Avinash GR Jan 24, 2026 2:03 PM