Star Fashion 2025: ಅನಾರ್ಕಲಿ ಸಲ್ವಾರ್ ಸೂಟ್ನಲ್ಲಿ ಕಾಣಿಸಿಕೊಂಡ ನಭಾ ನಟೇಶ್
ನಭಾ ನಟೇಶ್ ಧರಿಸಿರುವ ಸಿಂಪಲ್ ಎಂಬ್ರಾಯ್ಡರಿ ಅನಾರ್ಕಲಿ ಸಲ್ವಾರ್ ಸೂಟ್ ಈ ವಿಂಟರ್ ಸೀಸನ್ನಲ್ಲಿ ಎಥ್ನಿಕ್ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದೆ. ಈ ಸೂಟ್ ವಿಶೇಷತೆಯೇನು? ಈ ಬಗ್ಗೆ ಫ್ಯಾಷನ್ ವಿಮರ್ಶಕರು ಏನು ಹೇಳಿದ್ದಾರೆ. ಇಲ್ಲಿದೆ ರಿವ್ಯೂ.
ನಟಿ ನಭಾ ನಟೇಶ್, ಫೋಟೋಗ್ರಾಫಿ: ಸಂದೀಪ್ ಸಂಕಾ -
ನಭಾ ನಟೇಶ್ ಧರಿಸಿರುವ ಸಿಂಪಲ್ ಎಂಬ್ರಾಯ್ಡರಿ ಅನಾರ್ಕಲಿ ಸಲ್ವಾರ್ ಸೂಟ್ ಈ ವಿಂಟರ್ ಸೀಸನ್ನಲ್ಲಿ ಎಥ್ನಿಕ್ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿದೆ.
ನಭಾ ನಟೇಶ್ ಧರಿಸಿರುವ ಈ ಅನಾರ್ಕಲಿ ಸಲ್ವಾರ್ ಸೂಟ್ ನೋಡಲು ಸಿಂಪಲ್ಲಾಗಿದೆ. ಎಂಬ್ರಾಯ್ಡರಿ ಕೂಡ ತೀರಾ ಮಿನಿಮಲ್ ಆಗಿದೆ. ಹಾಗಾಗಿ ಎಲಿಗೆಂಟ್ ಲುಕ್ ಬಯಸುವವನ್ನು ಸೆಳೆದಿದೆ.
ಫುಲ್ ಸ್ಲೀವ್ ಅನಾರ್ಕಲಿ ಸೂಟ್
ವಿಂಟರ್ ಸೀಸನ್ಗೆ ಮ್ಯಾಚ್ ಆಗುವಂತೆ ನಭಾ ನಟೇಶ್ ಸಿಂಪಲ್ಲಾಗಿರುವ ಫುಲ್ ಸ್ಲೀವ್ನ ಮರೂನ್ ಶೇಡ್ನ ಅನಾರ್ಕಲಿ ಸೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಔಟ್ಫಿಟ್ನ ಫುಲ್ ಸ್ಲಿವ್ ಡಿಸೈನ್ ಮುಂಭಾಗದಲ್ಲಿ ಫ್ಲೇರಿಯಾಗಿದೆ. ನೆಕ್ಲೈನ್ ಡಿಸೈನ್ ಅವರಿಗೆ ವಿಂಟೇಜ್ ಲುಕ್ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಮೇಕೋವರ್ನಲ್ಲಿ ಅನಾರ್ಕಲಿ ಲುಕ್
ವಿಶೇಷವೆಂದರೇ, ನಭಾ ಮೇಕೋವರ್ನಲ್ಲಿ ಥೇಟ್ ಅನಾರ್ಕಲಿಯಂತೆಯೇ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರು ಧರಿಸಿರುವ ಜ್ಯುವೆಲರಿಗಳು ಹಾಗೂ ಹೇರ್ಸ್ಟೈಲ್ ಕಾರಣ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಸಿನಿಮಾಗಿಂತ ಹೆಚ್ಚಾಗಿ ಫ್ಯಾಷನ್ ಶೂಟ್ಗಳಲ್ಲಿ ನಭಾ ಬ್ಯುಸಿ
ಅಂದಹಾಗೆ, ನಭಾ ನಟೇಶ್ ಶಿವರಾಜ್ ಕುಮಾರ್ ಅವರೊಂದಿಗೆ ವಜ್ರಕಾಯ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ನಂತರ ತೆಲುಗು ಸಿನಿಮಾ ಇಂಡಸ್ಟ್ರಿಗೆ ಹಾರಿದರು. ಅಲ್ಲಿ ಅವರು ಸಿನಿಮಾಗಳಿಗಿಂತ ಹೆಚ್ಚಾಗಿ ಫ್ಯಾಷನ್ ಜಾಹೀರಾತು ಹಾಗೂ ಫ್ಯಾಷನ್ವೇರ್ಗಳ ನಾನಾ ಬ್ರ್ಯಾಂಡ್ಗಳಲ್ಲಿಯೇ ಕಾಣಿಸಿಕೊಳ್ಳುತ್ತಿರುವುದೇ ಹೆಚ್ಚು. ಇದರೊಂದಿಗೆ ಅವರು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.