Star Fashion 2025: ಬದಲಾದ ರೂಪದಲ್ಲಿ ಮರಳಿ ಬಂತು ಪೊಲ್ಕಾ ಡಾಟ್ಸ್ ಫ್ಯಾಷನ್
Actress Aditi Rao Hydari: ಪೊಲ್ಕಾ ಡಾಟ್ಸ್ ಫ್ಯಾಷನ್ ಮರಳಿದೆ. ಇದಕ್ಕೆ ಸಾಕ್ಷಿ ಎಂಬಂತೆ, ನಟಿ ಅದಿತಿ ಹೈದರ್ ಧರಿಸಿದ್ದ ಡಿಸೈನರ್ವೇರ್ ಮತ್ತೊಮ್ಮೆ ಟ್ರೆಂಡಿಯಾಗಿದೆ. ಸಾಮಾನ್ಯ ಯುವತಿಯರನ್ನು ಸವಾರಿ ಮಾಡುತ್ತಿದೆ. ಇದ್ಯಾವ ಬಗೆಯ ಡಿಸೈನ್ಸ್? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ಅದಿತಿ ರಾವ್ ಹೈದರಿ, ನಟಿ -
ಪೊಲ್ಕಾ ಡಾಟ್ಸ್ ಫ್ಯಾಷನ್ ಹೊಸತನದೊಂದಿಗೆ ಮರಳಿದೆ. ಹೌದು, ಇದಕ್ಕೆ ಸಾಕ್ಷಿ ಎಂಬಂತೆ, ನಟಿ ಅದಿತಿ ಹೈದರ್ ಧರಿಸಿದ ಡಿಸೈನರ್ವೇರ್ ಡಿಸೈನ್ಸ್ ಫ್ಯಾಷನ್ ಲೋಕದಲ್ಲಿ ಮತ್ತೊಮ್ಮೆ ಟ್ರೆಂಡಿಯಾಗಿದೆ. ತಾರೆಯರನ್ನು ಮಾತ್ರವಲ್ಲ, ಸಾಮಾನ್ಯ ಯುವತಿಯರನ್ನು ಸವಾರಿ ಮಾಡುತ್ತಿದೆ.
ಆಕರ್ಷಕ ಪೊಲ್ಕಾ ಡಾಟ್ಸ್ ಉಡುಪುಗಳು
ಬ್ಲಾಕ್ ಮತ್ತು ವೈಟ್ ಮಾತ್ರವಲ್ಲ, ಕಾಂಟ್ರಸ್ಟ್ ಹಾಗೂ ಬಣ್ಣ ಬಣ್ಣದ ಮಿನಿ, ಮೈಕ್ರೋ ಪೊಲ್ಕಾ ಡಾಟ್ಸ್ ಪ್ರಿಂಟ್ ಡಿಸೈನರ್ವೇರ್ಗಳು ಈ ಸೀಸನ್ನ ರೆಟ್ರೊ ಫ್ಯಾಷನ್ನಲ್ಲಿ ಟ್ರೆಂಡಿಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ರೆಟ್ರೋ ಫ್ಯಾಷನ್ನಲ್ಲಿ ಫೊಲ್ಕಾ ಡಾಟ್ಸ್
ಅಂದ ಹಾಗೆ, ಈ ಫ್ಯಾಷನ್ ಹೊಸತೇನಲ್ಲ! ಆದರೆ ಹೊಸ ಕಾನ್ಸೆಪ್ಟ್ನಲ್ಲಿ ಮಿನಿ, ಮೈಕ್ರೋ ಹಾಗೂ ಮೆಗಾ ಸೈಝ್ನಲ್ಲಿ ಪ್ರಿಂಟ್ಸ್ನಲ್ಲಿ ಎಂಟ್ರಿ ನೀಡಿರುವುದು ವೆಸ್ಟರ್ನ್ ಹಾಗೂ ಫಾರ್ಮಲ್ ರೆಟ್ರೊ ಶೈಲಿಯ ಉಡುಪುಗಳಿಗೆ ಮೆರಗು ನೀಡಿದೆ. ಹೊಸ ವಿನ್ಯಾಸ ಹಾಗೂ ರೂಪದೊಂದಿಗೆ ಮರಳಿರುವ ಈ ಪ್ರಿಂಟ್ಸ್ ಇದೀಗ ನಾನಾ ಸೈಝ್ನಲ್ಲಿ ಕಾಂಟ್ರಸ್ಟ್ ಕಲರ್ನಲ್ಲಿ ಫ್ರಾಕ್, ಟಾಪ್, ಗೌನ್, ಸ್ಕರ್ಟ್, ಸಲ್ವಾರ್ ಕಮೀಝ್ ಹಾಗೂ ಸೀರೆಯಲ್ಲಿ ಕಾಣಿಸಿಕೊಂಡಿದೆ.
ಬದಲಾವಣೆಯಾದ ಪೊಲ್ಕಾ ಡಾಟ್ಸ್ ಡ್ರೆಸ್ಗಳ ವಿನ್ಯಾಸ
ಮೊದಲೆಲ್ಲಾ ಪೊಲ್ಕಾ ಡಾಟ್ಸ್ ಎಂದಾಕ್ಷಣಾ ಕೇವಲ ಬ್ಲ್ಯಾಕ್-ವೈಟ್ ಪ್ರಿಂಟ್ಸ್ ಇರುತ್ತಿತ್ತು. ಇದೀಗ ಇವುಗಳ ಡಿಸೈನ್ನಲ್ಲೂ ಬದಲಾವಣೆಯಾಗಿದ್ದು, ಸಾಕಷ್ಟು ಕಲರ್ಗಳಲ್ಲಿ ಟ್ರೆಂಡಿ ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ. ಥೀಮ್ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿವೆ ಎನ್ನುತ್ತಾರೆ ಮಾಡೆಲ್ ದೀಪ್ತಿ.
ಪೊಲ್ಕಾ ಡಾಟ್ಸ್ ಫ್ಯಾಷನ್ವೇರ್ಸ್ ಆಯ್ಕೆ ಹೀಗಿರಲಿ
- ಪೊಲ್ಕಾ ಡಾಟ್ಸ್ ಡಿಸೈನರ್ವೇರ್ ಅನ್ನು ಮೊದಲು ಟ್ರಯಲ್ ನೋಡಿ, ನಿಮಗೆ ಹೊಂದುವಂತಿದ್ದಲ್ಲಿ ಮಾತ್ರ ಖರೀದಿಸಿ.
- ಬ್ಲ್ಯಾಕ್-ವೈಟ್ನದ್ದಾದರೇ ಕಂಪ್ಲೀಟ್ ರೆಟ್ರೋ ಲುಕ್ ನೀಡುತ್ತದೆ.
- ಬಣ್ಣ ಬಣ್ಣದ್ದಾದಲ್ಲಿ ಆದಷ್ಟೂ ಫ್ರಾಕ್, ಗೌನ್, ಸ್ಕರ್ಟ್ಗಳನ್ನು ಆಯ್ಕೆ ಮಾಡುವುದು ಉತ್ತಮ.
- ಫೊಲ್ಕಾ ಡಾಟ್ಸ್ನ ಉಡುಪುಗಳಿಗೆ ಮೆಗಾ, ಲಾಂಗ್ ಮತ್ತು ರಫಲ್ಸ್ ಸ್ಲೀವ್ಗಳು ಒಪ್ಪುತ್ತವೆ.
- ಬ್ಲ್ಯಾಕ್-ವೈಟ್ ಪೊಲ್ಕಾ ಡಾಟ್ಸ್ ಫ್ಯಾಷನ್ ಪ್ಲಂಪಿಯಾಗಿರುವವರಿಗೂ ಆಕರ್ಷಕವಾಗಿ ಕಾಣುತ್ತವೆ.
- ಈ ಉಡುಪಿಗೆ ಹೆಚ್ಚು ಆಕ್ಸೆಸರೀಸ್ ಧರಿಸಬೇಕಾಗಿಲ್ಲ.