Dhurandhar Trailer : ರಣವೀರ್ ಸಿಂಗ್ ಅಭಿನಯದ ʻಧುರಂಧರ್ʼ ಸಿನಿಮಾ; ಟ್ರೈಲರ್ ಬಿಡುಗಡೆ ಮುಂದೂಡಿಕೆ, ಕಾರಣ ಇದು!
"ಧುರಂಧರ್" (Dhurandhar Trailer) ಒಂದು ಸ್ಪೈ ಥ್ರಿಲ್ಲರ್ ಸಿನಿಮಾ ಆಗಿದ್ದು, ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್ (Ranveer Singh) ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಅಕ್ಷಯ್ ಖನ್ನಾ (Akshay Khanna) ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧುರಂಧರ ನಿರ್ಮಾಪಕರು , ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ. ಕಾರಣವೇನು?
ಧುರಂಧರ್ ಸಿನಿಮಾ -
ರಣವೀರ್ ಸಿಂಗ್ (Ranveer Singh) 'ಧುರಂಧರ್' ಚಿತ್ರದಲ್ಲಿ (Dhurandhar Trailer) ಇದುವರೆಗಿನ ಅವರ ಎಲ್ಲ ಚಿತ್ರಗಳಿಗಿಂತಲೂ, ಈ ಮೂವಿಯಲ್ಲಿ ಅತ್ಯಂತ ಉಗ್ರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಣವೀರ್ ಅವರ ಲುಕ್ ಪೋಸ್ಟರ್ ಔಟ್ ಮಾಡಿದೆ ಚಿತ್ರತಂಡ. ಆದರೀಗ ಸಿನಿಮಾ ತಂಡ ಹೊಸ ಅಪ್‌ಡೇಟ್ (New Update) ಹಂಚಿಕೊಂಡಿದೆ. ಟ್ರೈಲರ್ ಬಿಡುಗಡೆಯನ್ನು ಪೋಸ್ಟ್‌ಪೋನ್ ಮಾಡಿರುವುದಾಗಿ ಹೇಳಿಕೊಂಡಿದೆ.
ಟ್ರೇಲರ್ ಬಿಡುಗಡೆ ಪೋಸ್ಟ್‌ಪೋನ್!
ಮಂಗಳವಾರ ಹಂಚಿಕೊಂಡ ಅಧಿಕೃತ ಹೇಳಿಕೆಯಲ್ಲಿ, ನಿರ್ಮಾಣ ತಂಡವು ಪೋಸ್ಟ್‌ಪೋನ್ ಬಗ್ಗೆ ಘೋಷಿಸಿದೆ.
"ನಿನ್ನೆಯ ದೆಹಲಿ ಸ್ಫೋಟದಲ್ಲಿ ಬಲಿಯಾದವರು ಮತ್ತು ಕುಟುಂಬಗಳಿಗೆ ಗೌರವ ಸಲ್ಲಿಸುವ ಸಲುವಾಗಿ ನವೆಂಬರ್ 12 ರಂದು ನಿಗದಿಯಾಗಿದ್ದ ಧುರಂಧರ್ ಟ್ರೇಲರ್ ಬಿಡುಗಡೆಯನ್ನು ಮುಂದೂಡಲಾಗಿದೆ. ಟ್ರೇಲರ್ ಬಿಡುಗಡೆ ದಿನಾಂಕ ಮತ್ತು ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಧನ್ಯವಾದಗಳು. ಜಿಯೋ ಸ್ಟುಡಿಯೋಸ್, ಬಿ62 ಸ್ಟುಡಿಯೋಸ್ ಮತ್ತು ತಂಡ ಧುರಂಧರ್ (sic)."ಎಂದು ಬರೆದುಕೊಂಡಿದೆ.
ಇದನ್ನೂ ಓದಿ: Bigg Boss Kannada: ಮನೆಯವರಿಗೆ ಬಕ್ರಾ ಮಾಡಿರೋ ಕಿಲಾಡಿ ಜೋಡಿಯ ಸಂಚು ರಿವೀಲ್! ಗಿಲ್ಲಿ ಹೇಳಿದ್ದು ಕೊನೆಗೂ ಸತ್ಯವಾಯ್ತು
ನಿಜ ಜೀವನದ ಘಟನೆಗಳಿಂದ ಪ್ರೇರಿತ
ಆದಿತ್ಯ ಧರ್, ಧುರಂಧರ್ ಅವರ ನೇತೃತ್ವದಲ್ಲಿ ಚಿತ್ರವು ನಿಜ ಜೀವನದ ಘಟನೆಗಳಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ. ಈ ಚಿತ್ರವು ರಣವೀರ್ ಸಿಂಗ್ ಮತ್ತು ಉರಿ: ದಿ ಸರ್ಜಿಕಲ್ ಸ್ಟ್ರೈಕ್ ನಿರ್ದೇಶಕರ ನಡುವಿನ ಪ್ರಮುಖ ಸಹಯೋಗವನ್ನು ಗುರುತಿಸುತ್ತದೆ.
ಸಾಲು ಸಾಲು ಪೋಸ್ಟರ್
ವರದಿಗಳ ಪ್ರಕಾರ, ರಣವೀರ್ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ರಹಸ್ಯ ಭಾರತೀಯ ಗೂಢಚಾರನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಗುಪ್ತಚರ ಅಧಿಕಾರಿಗಳ ಧೈರ್ಯ ಮತ್ತು ತ್ಯಾಗವನ್ನು ಆಚರಿಸುವ ಕಥೆಯಾಗಿದೆ. ಧುರಂಧರ್ ಸಿನಿಮಾದ ಆರ್ ಮಾಧವನ್ ಅವರ ಫಸ್ಟ್ ಲುಕ್ ಪೋಸ್ಟರ್ ಭಾನುವಾರ ರಿಲೀಸ್ ಆಗಿತ್ತು. ಚಿತ್ರದ ಅರ್ಜುನ್ ರಾಂಪಾಲ್ ಅವರ ಮೊದಲ ಲುಕ್ ಅನ್ನು ಬಹಿರಂಗಪಡಿಸಿದೆ ಚಿತ್ರತಂಡ.
ಟ್ರೇಲರ್ ಬಿಡುಗಡೆಯನ್ನು ಮುಂದೂಡಲಾಗಿದ್ದರೂ, ಚಿತ್ರದ ಥಿಯೇಟ್ರಿಕಲ್ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಧುರಂಧರ್ ಡಿಸೆಂಬರ್ 5, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ನಟ
ಕಳೆದ ತಿಂಗಳು, ತಯಾರಕರು "ಧುರಂಧರ್" ನ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದರು, ಇದು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಸಿನಿಮಾ ವಿಚಾರಕ್ಕೆ ಬರೋದಾದರೆ, ರಣವೀರ್ ಸಿಂಗ್ ಕೊನೆಯ ಬಾರಿಗೆ ಕರಣ್ ಜೋಹರ್ ಅವರ "ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ" ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Bigg Boss Kannada 12: ಮಾಳು ನೇರನುಡಿ ಮನೆಯವರಿಗೆ ಅರಗಿಸಿಕೊಳ್ಳೋಕೆ ಆಗ್ತಿಲ್ವಾ? ರಾಶಿಕಾ ಕಣ್ಣೀರು, ಅಶ್ವಿನಿ ಗರಂ
"ಧುರಂಧರ್" ಜೊತೆಗೆ, ಅವರು ಮುಂದಿನ ಫರ್ಹಾನ್ ಅಖ್ತರ್ ಅವರ "ಡಾನ್ 3" ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಚಿತ್ರೀಕರಣ 2025 ರ ಕೊನೆಯಲ್ಲಿ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.