Star Fashion 2026: ತ್ರಿಶಾ ಕೃಷ್ಣನ್ ವೈರಲ್ ಮಿಡಿ ಡ್ರೆಸ್ಗೆ ಡಿಮ್ಯಾಂಡ್!
ನಟಿ ತ್ರಿಶಾ ಕೃಷ್ಣನ್ ಧರಿಸಿದ್ದ ಮಿಡಿ ಡ್ರೆಸ್ ವೈರಲ್ ಆಗಿದ್ದು, ಸದ್ಯ ಆನ್ಲೈನ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದೆ. ನಟಿ ತ್ರಿಶಾ ಫೋಟೋಶೂಟ್ವೊಂದರಲ್ಲಿ ಚಾಕೋಲೇಟ್ ವರ್ಣದ ಲೇಯರ್ ಲುಕ್ ನೀಡುವ ಎ ಲೈನ್ ಮಿಡಿ ಡ್ರೆಸ್ ಧರಿಸಿದ್ದು, ಇದು ಸ್ಲಿವ್ಲೆಸ್ ಬಾಡೀಸ್ ವಿನ್ಯಾಸದಲ್ಲಿದೆ. ಡಿಸೈನರ್ ಬಟನ್ಗಳನ್ನು ಹೊಂದಿದೆ. ನೋಡಲು ಸಿಂಪಲ್ಲಾಗಿದ್ದರೂ ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನಿಸ್ಟಾಗಳು.
ಚಿತ್ರಗಳು: ತ್ರಿಶಾ ಕೃಷ್ಣನ್, ನಟಿ -
ನಟಿ ತ್ರಿಶಾ ಕೃಷ್ಣನ್ ಮಿಡಿ ಡ್ರೆಸ್ಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಮಿಡಿ ಡ್ರೆಸ್ಗೆ ಹೆಚ್ಚಾದ ಬೇಡಿಕೆ
ಹೌದು, ನಟಿ ತ್ರಿಶಾ ಕೃಷ್ಣನ್ ಧರಿಸಿದ್ಧ, ಚಾಕೋಲೇಟ್ ಕಲರ್ನ ಎ ಲೈನ್ ಮಿಡಿ ಡ್ರೆಸ್ನ ಫೋಟೋಗಳು, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ತಕ್ಷಣ ಈ ಔಟ್ಫಿಟ್ಗೆ ಸಖತ್ ಬೇಡಿಕೆ ಹೆಚ್ಚಾಗಿದೆ. ಪರಿಣಾಮ, ಈ ಶೈಲಿಯ ಔಟ್ಫಿಟ್ ರಿಟೇಲ್ ವ್ಯಾಪಾರ ಮಾಡುವ ಎಲ್ಲಾ ಬ್ರಾಂಡ್ನ ಆನ್ಲೈನ್ ಶಾಪ್ಗಳಲ್ಲೂ ಮಾರಾಟ ಹೆಚ್ಚಾಗಿದೆ.
ತ್ರಿಶಾ ಮಿಡಿ ಡ್ರೆಸ್ ಲವ್
ಅಂದಹಾಗೆ, ನಟಿ ತ್ರಿಶಾ ಫೋಟೋಶೂಟ್ವೊಂದರಲ್ಲಿ ಚಾಕೋ ಲೇಟ್ ವರ್ಣದ ಲೇಯರ್ ಲುಕ್ ನೀಡುವ ಎ ಲೈನ್ ಮಿಡಿ ಡ್ರೆಸ್ ಧರಿಸಿದ್ದು, ಇದು ಸ್ಲಿವ್ಲೆಸ್ ಬಾಡೀಸ್ ವಿನ್ಯಾಸದಲ್ಲಿದೆ. ಡಿಸೈನರ್ ಬಟನ್ಗಳನ್ನು ಹೊಂದಿದೆ. ನೋಡಲು ಸಿಂಪಲ್ಲಾಗಿದ್ದರೂ ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನಿಸ್ಟಾಗಳು.
ಇದ್ಯಾವ ಬಗೆಯ ಡ್ರೆಸ್?
ಇದೊಂದು ಸಾಮಾನ್ಯವಾದ ಚಾಕೋಲೇಟ್ ಬಣ್ಣದ ಮಿಡಿ ಡ್ರೆಸ್ ಆಗಿದ್ದು, ಎ ಲೈನ್ ವಿನ್ಯಾಸ ಹೊಂದಿರುವ ಕಾರಣ ಹೈಲೈಟ್ ಆಗಿದೆ. ಮಾನ್ಸೂನ್ ಸೀಸನ್ಗೆ ಇದು ಮ್ಯಾಚ್ ಆಗದಿದ್ದರೂ ಕೂಡ ನೋಡಲು ಅವರನ್ನು ಸುಂದರವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ಮಿಡಿ ಡ್ರೆಸ್ ಸ್ಪೆಷಾಲಿಟಿ
ಇನ್ನು, ತ್ರಿಶಾ ಅವರು ಈ ಡ್ರೆಸ್ಗೆ ಸ್ಟೇಟ್ಮೆಂಟ್ ಬೆಲ್ಟ್ ಧರಿಸಿರುವುದು ಅವರನ್ನು ಮತ್ತಷ್ಟು ಯಂಗ್ ಲುಕ್ನಲ್ಲಿ ಬಿಂಬಿಸಲು ಕಾರಣವಾಗಿದೆ ಎನ್ನುವ ಫ್ಯಾಷನ್ ವಿಮರ್ಶಕರಾದ ರಾಕಿ ಹೇಳುವಂತೆ, ತ್ರಿಶಾರ ಈ ಫ್ಯಾಷನ್ವೇರ್ ಜತೆಗೆ ಅವರ ಮಿನಿಮಲ್ ಆಕ್ಸೆಸರೀಸ್ ಸ್ಟೇಟ್ಮೆಂಟ್ ಇಡೀ ಲುಕ್ಗೆ ಸಾಥ್ ನೀಡಿದೆ ಎಂದಿದ್ದಾರೆ.