Star Saree Fashion 2026: ಭವ್ಯಾ ಗೌಡ ಅವರಂತೆ ಕಾಟನ್ ಸೀರೆಯಲ್ಲಿ ಕಾಣಲು ಇಲ್ಲಿವೆ 5 ಸಿಂಪಲ್ ಟಿಪ್ಸ್
ಕಿರುತೆರೆ ನಟಿ ಭವ್ಯಾ ಗೌಡ, ಧಾರವಾಹಿಯಲ್ಲಿ ಉಟ್ಟಿದ್ದ ವೈರಲ್ ಎಂಬ್ರಾಯ್ಡರಿ ಕಾಟನ್ ಸೀರೆ ಸದ್ಯ ಮಾನಿನಿಯರನ್ನು ಸೆಳೆದಿದೆ. ಈ ಶೈಲಿಯ ಸೀರೆಯಲ್ಲಿ ಅವರಂತೆಯೇ ಕಾಣಿಸಲು ಇಲ್ಲಿವೆ ಸಿಂಪಲ್ ಟಿಪ್ಸ್. ಫಾಲೋ ಮಾಡಲು ಟ್ರೈ ಮಾಡಿ, ನೋಡಿ ಎನ್ನುತ್ತಾರೆ ಸೀರೆ ಎಕ್ಸ್ಪರ್ಟ್ಸ್.
ಚಿತ್ರಗಳು: ಭವ್ಯಾ ಗೌಡ, ನಟಿ -
ಕಿರುತೆರೆ ನಟಿ ಭವ್ಯಾ ಗೌಡ ಅವರು ಧಾರಾವಾಹಿಯಲ್ಲಿ ಉಟ್ಟಿದ್ದ ಸೀರೆ ಇದೀಗ ವೈರಲ್ ಆಗಿದೆ ಹಾಗೂ ಮಾನಿನಿಯರನ್ನು ಸೆಳೆದಿದೆ. ಅಂದಹಾಗೆ, ಅವರು ಉಟ್ಟಿದ್ದ ಈ ಸೀರೆ ಪ್ರಾಂಶಿ ಸ್ಯಾರೀಸ್ ಬ್ರ್ಯಾಂಡ್ನದ್ದಾಗಿದ್ದು, ಮಲ್ ಕಾಟನ್ದ್ದಾಗಿದೆ. ಈ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸುತ್ತಿರುವ ಭವ್ಯಾ ಗೌಡರಂತೆಯೇ ನೀವು ಕಾಣಿಸಲು ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿ, ನೋಡಿ ಎನ್ನುತ್ತಾರೆ ಎಕ್ಸ್ಪರ್ಟ್ಸ್.
ಮಲ್ ಅಥವಾ ಖಾದಿ ಕಾಟನ್ ಸೀರೆ ಆಯ್ಕೆ
ನೀವು ಕೂಡ ಭವ್ಯಾ ಗೌಡರಂತೆಯೇ ಕಾಣಿಸಬೇಕಿದ್ದಲ್ಲಿ ಮೊದಲು ಅದೇ ಫ್ಯಾಬ್ರಿಕ್ನ ಸೀರೆಯನ್ನು ಆಯ್ಕೆ ಮಾಡಿ. ಮಲ್ ಕಾಟನ್ದ್ದಾದರೇ ಉತ್ತಮ. ಇದೀಗ ಖಾದಿಯಲ್ಲೂ ಇವು ದೊರೆಯುತ್ತಿವೆ. ಅವನ್ನೂ ಆಯ್ಕೆ ಮಾಡಬಹುದು.
ಬಬ್ಬಲ್ ಗಮ್ ಪಿಂಕ್ ಶೇಡ್ನದ್ದನ್ನು ಸೆಲೆಕ್ಟ್ ಮಾಡಿ
ನೋಡಲು ಅಂದವಾಗಿ ಕಾಣಿಸಲು ಆದಷ್ಟೂ ಲೈಟ್ ಶೇಡ್ನ ಪಿಂಕ್ ಕಲರ್ನ ಮಲ್ ಕಾಟನ್ ಸೀರೆ ಆಯ್ಕೆ ಮಾಡಿ. ಕೆಲವೊಮ್ಮೆ ಸೀರೆಯ ಕಲರ್ಗಳು ಕೂಡ ಆಕರ್ಷಕವಾಗಿ ಬಿಂಬಿಸುತ್ತವೆ.
ಎಂಬ್ರಾಯ್ಡರಿ ಕಾಟನ್ ಸೀರೆ
ಅಂದಹಾಗೆ, ಇದು ಸಾಮಾನ್ಯವಾದ ಕಾಟನ್ ಸೀರೆಯಲ್ಲ! ಬದಲಿಗೆ ಸೀರೆಯ ಒಡಲಲ್ಲಿ ಹ್ಯಾಂಡ್ ಎಂಬ್ರಾಯ್ಡರಿ ಹೊಂದಿದೆ. ಕೆಲವು ಸೀರೆಗಳು ಹ್ಯಾಂಡ್ ಪೇಂಟ್ ಹೊಂದಿರುತ್ತವೆ. ಅವರ ಲುಕ್ಗಾಗಿ ಇಂತಹವನ್ನೇ ಆಯ್ಕೆ ಮಾಡಿ ಉಡಬಹುದು.
ಬ್ಲೌಸ್ ಆಯ್ಕೆ ಕೂಡ ಮುಖ್ಯ
ಸಿಂಪಲ್ ಬ್ಲೌಸ್ ಡಿಸೈನ್ ಕೂಡ ಸೀರೆಯ ಅಂದ ಹೆಚ್ಚಿಸಲು ಕಾರಣವಾಗುತ್ತವೆ. ಹಾಗಾಗಿ ಯೋಚಿಸಿ, ಹೊಲೆಸಿ. ಹೆವಿ ಡಿಸೈನ್ನದ್ದು ಬೇಡ.
ಸಿಂಪಲ್ ಮೇಕೋವರ್
ಡೆಲಿಕೇಟ್ ಆಗಿರುವಂತಹ ಕಾಟನ್ ಸೀರೆಗಳಿಗೆ ಆದಷ್ಟೂ ಸಿಂಪಲ್ ಮೇಕೋವರ್ ಮಾಡುವುದು ಉತ್ತಮ. ನೋಡಲು ಎಲಿಗೆಂಟ್ ಆಗಿ ಕಾಣಿಸುತ್ತದೆ.