Star Summer Fashion 2026: ಸಮ್ಮರ್ಗೆ ತಕ್ಕ ಸ್ಟ್ರಾಪ್ ವೆಲ್ವೆಟ್ ಕುರ್ತಾಗೆ ಸೈ ಎಂದ ರಕುಲ್
Rakul Preet Singh: ಸಮ್ಮರ್ ಸೀಸನ್ಗೆ ತಕ್ಕಂತೆ ಸ್ಟ್ರಾಪ್ ವೆಲ್ವೆಟ್ ಕುರ್ತಾ ಸೆಟ್ಗೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸೈ ಎಂದಿದ್ದಾರೆ. ಇದ್ಯಾವ ಬಗೆಯ ಔಟ್ಫಿಟ್ ? ಈ ಬೇಸಿಗೆಗೆ ಸೂಕ್ತವೇ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ರಕುಲ್ ಪ್ರೀತ್ ಸಿಂಗ್, ಬಾಲಿವುಡ್ ನಟಿ -
ಸಮ್ಮರ್ ಸೀಸನ್ನಲ್ಲಿ ಸ್ಟ್ರಾಪ್ ವೆಲ್ವೆಟ್ ಕುರ್ತಾ ಸೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್. ಹೌದು, ಸೀಸನ್ಗೆ ಹೊಂದುವಂತಹ ವಿನ್ಯಾಸದ ಸ್ಲಿವ್ಗಳಿಲ್ಲದ ಸ್ಟ್ರಾಪಿ ವೆಲ್ವೆಟ್ ಲಾಂಗ್ ಕುರ್ತಾದಲ್ಲಿ ಮಿಂಚಿದ್ದಾರೆ.
ಸೀಸನ್ಗೆ ಹೊಂದುವ ಸ್ಟ್ರಾಪಿ ಕುರ್ತಾ
ಅಂದಹಾಗೆ, ಎಲ್ಲದರಿಗೂ ತಿಳಿದಿರುವಂತೆ ರಕುಲ್ ಪ್ರೀತ್ ಸಿಂಗ್, ಸಖತ್ ಫ್ಯಾಷನೆಬಲ್ ನಟಿ ಹಾಗೂ ಮಾಡೆಲ್. ಸಾಕಷ್ಟು ಪ್ರಯೋಗಾತ್ಮಕ ಡಿಸೈನರ್ವೇರ್ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಲ್ಲದೇ, ಸೀಸನ್ಗೆ ತಕ್ಕಂತೆ ಫ್ಯಾಷನ್ ಫಾಲೋ ಮಾಡುತ್ತಾರೆ. ಜೊತೆಗೆ ತಮ್ಮದೇ ಆದ ಟ್ರೆಂಡ್ ಸೆಟ್ ಕೂಡ ಮಾಡುತ್ತಿರುತ್ತಾರೆ. ಇದೀಗ ಸೀಸನ್ ಬದಲಾಗಿರುವುದನ್ನು ಮನಗಂಡ ಅವರು ಈ ಸಮ್ಮರ್ಗೆ ತಕ್ಕಂತೆ ಸ್ಟ್ರಾಪ್ ಇರುವಂತಹ ವೆಲ್ವೆಟ್ ಲಾಂಗ್ ಕುರ್ತಾದಲ್ಲಿ ಅಂದರೇ ಎಥ್ನಿಕ್ವೇರ್ನಲ್ಲಿ ಕಾಣಿಸಿಕೊಂಡು ಎಥ್ನಿಕ್ ಪ್ರಿಯರ ಮನಗೆದ್ದಿದ್ದಾರೆ.
ಸ್ಟ್ರಾಪ್ ವೆಲ್ವೆಟ್ ಕುರ್ತಾ ವಿಶೇಷತೆ
ಅರರೆ..., ಈ ಸೀಸನ್ನಲ್ಲಿ ವೆಲ್ವೆಟ್ಟಾ! ಎಂದು ಮೂಗು ಮುರಿಯುವವರಿಗೆ ಇಲ್ಲಿದೆ ಉತ್ತರ. ಇದು ಹೆವಿ ವೆಲ್ವೆಟ್ ಫ್ಯಾಬ್ರಿಕ್ ಅಲ್ಲ. ಬದಲಿಗೆ ಇತ್ತೀಚೆಗೆ ಟ್ರೆಂಡಿಯಾಗಿರುವ ಲೈಟ್ವೈಟ್ ವೆಲ್ವೆಟ್ ಫ್ಯಾಬ್ರಿಕ್ನಿಂದ ಡಿಸೈನ್ ಮಾಡಿರುವ ಕುರ್ತಾ. ಅಲ್ಲದೇ ಸ್ಲೀವ್ ಬದಲು ಸ್ಟ್ರಾಪ್ ಡಿಸೈನ್ ಮಾಡಿರುವುದು ಈ ಕುರ್ತಾ ಧರಿಸಿದಾಗ ಸೆಕೆಯಾಗುವುದನ್ನು ತಪ್ಪಿಸುತ್ತದೆ. ಅಲ್ಲದೇ , ಎಥ್ನಿಕ್ವೇರ್ ಪ್ರಿಯರು ಇದನ್ನು ಧರಿಸಿದಾಗ ಕೊಂಚ ಗ್ಲಾಮರಸ್ ಆಗಿ ಕಾಣಿಸಬಹುದು ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ಎಥ್ನಿಕ್ವೇರ್ ಪ್ರಿಯರಿಗೆ ಪ್ರಿಯವಾದ ವಿನ್ಯಾಸ
ಇನ್ನು ಈ ಕುರ್ತಾ ಲಾಂಗ್ ಸ್ಲಿಟ್ ಹೊಂದಿದೆ. ಅಲ್ಲದೇ, ಎಂಬ್ರಾಯ್ಡರಿ ವರ್ಕ್ ಕೂಡ ಹೊಂದಿದೆ. ಹಾಗಾಗಿ ಈ ಔಟ್ಫಿಟ್ ಈ ಸೀಸನ್ನ ವೆಡ್ಡಿಂಗ್ ಫ್ಯಾಷನ್ನಲ್ಲೂ ಸೇರಿಸಿಕೊಳ್ಳಬಹುದು ಎಂಬುದು ಫ್ಯಾಷನ್ ವಿಮರ್ಶಕರ ಅಭಿಪ್ರಾಯವಾಗಿದೆ.
ವೆಡ್ಡಿಂಗ್ ಎಥ್ನಿಕ್ವೇರ್ ಫ್ಯಾಷನ್ಗೆ ಸಾಥ್
ಒಟ್ಟಾರೆ, ರಕುಲ್ ಪ್ರೀತ್ ಧರಿಸಿದ ಈ ಸ್ಟ್ರಾಪ್ ವೆಲ್ವೆಟ್ ಕುರ್ತಾ ಸದ್ಯ ವೆಡ್ಡಿಂಗ್ ಹಾಗೂ ಗ್ರ್ಯಾಂಡ್ ಸಮ್ಮರ್ ಎಥ್ನಿಕ್ವೇರ್ ಕೆಟಗರಿಯಲ್ಲಿ ಸ್ಥಾನಪಡೆದಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.