6 ಎಸೆತಗಳಿಗೆ ಆರು ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಸರ್ ಗ್ಯಾರಿ ಸೋಬರ್ಸ್
Garfield Sobers passes away: ಆಲ್‌ರೌಂಡರ್ ಆಗಿದ್ದ ಸರ್ ಗ್ಯಾರಿ ಸೋಬರ್ಸ್ ಅವರು 1954 ರಿಂದ 1974 ರವರೆಗೆ ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 8,032 ರನ್ ಗಳಿಸಿದ್ದಾರೆ ಮತ್ತು 235 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 1958 ರಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 365 ರನ್ ಗಳಿಸಿ, ಅತಿ ಹೆಚ್ಚು ವೈಯಕ್ತಿಕ ಟೆಸ್ಟ್ ರನ್ ದಾಖಲಿಸಿದ್ದರು.
Garfield Sobers -
ಬಾರ್ಬಡೋಸ್, ಜು.17: ವೆಸ್ಟ್ ಇಂಡೀಸ್‌ನ ದಂತಕಥೆ ಮತ್ತು ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್ ಆಗಿದ್ದ ಸರ್ ಗ್ಯಾರಿ ಸೋಬರ್ಸ್ 89 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೋಬರ್ಸ್ ಅವರು ಬಾರ್ಬಡೋಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು. ವೆಸ್ಟ್ ಇಂಡೀಸ್ ಕ್ರಿಕೆಟ್ ಅನ್ನು ನಕ್ಷೆಯಲ್ಲಿ ಅಳವಡಿಸಿದ ಕೀರ್ತಿ ಸೋಬರ್ಸ್‌ಗೆ ಸಲ್ಲುತ್ತದೆ. 1968 ರಲ್ಲಿ ಗ್ಲಾಮೋರ್ಗನ್ ವಿರುದ್ಧ ನಾಟಿಂಗ್‌ಹ್ಯಾಮ್‌ಶೈರ್ ಪರ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದು ಅಂದಿನ ಕಾಲಕ್ಕೆ ವಿಶ್ವ ದಾಖಲೆಯೂ ಆಗಿತ್ತು.
ಇಂದಿನ ಟಿ20 ಯುಗದಲ್ಲಿ ಸಿಕ್ಸರ್ ಬಾರಿಸುವುದು ದೊಡ್ಡ ಕತೆಯಲ್ಲ. ಓವರಿಗೆ ಆರು ಸಿಕ್ಸರ್ ಸಿಡಿದರೂ ಇದೆಲ್ಲ ಮಾಮೂಲು ಎಂದು ಪರಿಗಣಿಸುವವರೇ ಹೆಚ್ಚು. ಆದರೆ ಆಗಿನ್ನೂ ಸೀಮಿತ ಓವರ್‌ಗಳ ಕ್ರಿಕೆಟ್ ಆರಂಭವಾಗದಿದ್ದ ಕಾಲದಲ್ಲಿ ಇಂಥದೊಂದು ಪರಾಕ್ರಮ ಮೆರೆದರೆ ಅದಕ್ಕೆ ಸಿಗುತ್ತಿದ್ದ ಮಾನ್ಯತೆ, ಗೌರವ, ಪ್ರಶಂಸೆಗಳನ್ನೆಲ್ಲ ಬಹುಶಃ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿರಲಿಲ್ಲ. ಇಂಥದೊಂದು ಗೌರವಕ್ಕೆ ಪಾತ್ರರಾದವರೇ ವೆಸ್ಟ್ ಇಂಡೀಸಿನ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್! ಇವರಿಂದ ದಂಡಿಸಲ್ಪಟ್ಟ ಬೌಲರ್ ವೇಗಿ ಮಾಲ್ಕಂ ನಾಶ್.
In 1968 Sir Gary Sobers became the first batter to hit 6 sixes in an over. RIP Sir Gary Sobers, gone, but never forgotten 💔😢🏏 pic.twitter.com/81Ro2Z7Bii
— James (@Surreycricfan) July 17, 2026
ಕ್ರಿಕೆಟ್ ಇತಿಹಾಸದಲ್ಲಿ ಓವರಿನ ಆರೂ ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿದ ಮೊದಲ ಆಟಗಾರನೇ ಗ್ಯಾರಿ ಸೋಬರ್ಸ್. ಬಳಿಕ ರವಿಶಾಸ್ತ್ರಿ, ಹರ್ಷಲ್ ಗಿಬ್ಸ್, ಯುವರಾಜ್ ಸಿಂಗ್ ಅವರೆಲ್ಲ ಈ ಸಾಹಸವನ್ನು ಪುನರಾವರ್ತಿಸಿದರು. ಆದರೆ ಸೋಬರ್ಸ್ ಅವರ ಆ ಮೊದಲ ಪರಾಕ್ರಮ ಮಾತ್ರ ಸಾಟಿಯಿಲ್ಲದ್ದು, ಕಲ್ಪನೆಗೂ ಮೀರಿದ್ದು.
ಲಮೀನ್ ಯಮಾಲ್: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್ ಜಗತ್ತಿನ ತಾರೆ!
ಆಲ್‌ರೌಂಡರ್ ಆಗಿದ್ದ ಸರ್ ಗ್ಯಾರಿ ಸೋಬರ್ಸ್ ಅವರು 1954 ರಿಂದ 1974 ರವರೆಗೆ ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 8,032 ರನ್ ಗಳಿಸಿದ್ದಾರೆ ಮತ್ತು 235 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 1958 ರಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 365 ರನ್ ಗಳಿಸಿ, ಅತಿ ಹೆಚ್ಚು ವೈಯಕ್ತಿಕ ಟೆಸ್ಟ್ ರನ್ ದಾಖಲಿಸಿದ್ದರು. ಈ ದಾಖಲೆಯನ್ನು 1994 ರಲ್ಲಿ ಬ್ರಿಯಾನ್ ಲಾರಾ ಮುರಿಯುವವರೆಗೂ ಇದು ಅಚಲವಾಗಿತ್ತು. ಅವರು ಕ್ರಿಕೆಟ್‌ಗೆ ನೀಡಿದ ಮೇರು ಸಾಧನೆಯ ನೆನಪಿಗಾಗಿ 2004 ರಿಂದ, ಐಸಿಸಿ ವಾರ್ಷಿಕವಾಗಿ ತನ್ನ ವರ್ಷದ ಪುರುಷ ಕ್ರಿಕೆಟಿಗನಿಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಯನ್ನು ನೀಡುತ್ತಿದೆ.