Summer Fashion 2026: ಬೇಸಿಗೆಯಲ್ಲಿ ಹಂಗಾಮ ಎಬ್ಬಿಸಿರುವ 3 ಶೈಲಿಯ ಆಫ್ ಶೋಲ್ಡರ್ ಡ್ರೆಸ್ಗಳಿವು!
ಸಮ್ಮರ್ ಬಂದ್ರೆ ಸಾಕು! ಆಫ್ ಶೋಲ್ಡರ್ ಡ್ರೆಸ್ಗಳು ಟ್ರೆಂಡಿಯಾಗುತ್ತವೆ. ಸೀಸನ್ನ ಟಾಪ್ ಲಿಸ್ಟ್ಗೆ ಸೇರುತ್ತವೆ. ಈ ಬಾರಿಯೂ ಕೂಡ 3 ಶೈಲಿಯವು ಹಿಟ್ ಲಿಸ್ಟ್ ಸೇರಿವೆ. ಅವು ಯಾವುವು? ಈ ಕುರಿತ ವಿವರ ಇಲ್ಲಿದೆ.
ಚಿತ್ರಕೃಪೆ: ಪಿಕ್ಸೆಲ್ -
ಬೇಸಿಗೆಯಲ್ಲಿ ಆಫ್ ಶೋಲ್ಡರ್ ಡ್ರೆಸ್ಗಳು ಮರಳಿ ಟ್ರೆಂಡಿಯಾಗಿವೆ. ಪ್ರತಿಬಾರಿಯಂತೆ ಈ ಬಾರಿಯೂ ಟಾಪ್ ಲಿಸ್ಟ್ಗೆ ಸೇರಿವೆ. ಅವುಗಳಲ್ಲಿ ಈ 3 ಶೈಲಿಯವು ಮಾತ್ರ ಸೂಪರ್ ಹಿಟ್ ಲಿಸ್ಟ್ ಸೇರಿವೆ. ಟ್ರೆಂಡಿಯಾಗಿವೆ. ಹುಡುಗಿಯರನ್ನು ಸವಾರಿ ಮಾಡುತ್ತಿವೆ.
ಆಫ್ ಶೋಲ್ಡರ್ ಕೋ ಆರ್ಡ್ ಸೆಟ್
ಈ ಸೀಸನ್ನಲ್ಲಿ ಕೋ ಆರ್ಡ್ ಸೆಟ್ನ ಆಫ್ ಸೆಟ್ಗಳು ಹೆಚ್ಚು ಚಾಲ್ತಿಯಲ್ಲಿವೆ. ಟೀನೇಜ್ ಹುಡುಗಿಯರ ಅಚ್ಚುಮೆಚ್ಚಿನ ಡ್ರೆಸ್ಕೋಡ್ನಲ್ಲಿ ಸೇರಿವೆ. ನೋಡಲು ಒಂದೇ ಕಲರ್ ಅಥವಾ ಮಾನೋಕ್ರೋಮ್ ಡಿಸೈನ್ ಇಲ್ಲವೇ ಪ್ರಿಂಟ್ಸ್ನಲ್ಲಿ ಲಭ್ಯವಿರುವ ಇವು ಸದ್ಯ ಈ ಸೀಸನ್ನ ಸೂಪರ್ ಹಿಟ್ ಔಟ್ಫಿಟ್ ಎಂದೇ ಪ್ರಚಲಿತದಲ್ಲಿವೆ.
ಆಫ್ ಶೋಲ್ಡರ್ ಫ್ರಾಕ್
ಇನ್ನು, ಆಫ್ ಶೋಲ್ಡರ್ ಫ್ರಾಕ್ಗಳು ನಾನಾ ವಿನ್ಯಾಸದಲ್ಲಿ ಈ ಬೇಸಿಗೆಯಲ್ಲಿ ಹಂಗಾಮ ಎಬ್ಬಿಸಿವೆ. ಮಿನಿ ಫ್ರಾಕ್, ಮೀ ಲೆಂತ್ ಫ್ರಾಕ್ಗಳು ಅತಿ ಹೆಚ್ಚು ಯುವತಿಯರನ್ನು ಆಕರ್ಷಿಸಿವೆ. ಅದರಲ್ಲೂ ಹಾಲಿಡೇ ಫ್ಯಾಷನ್ನಲ್ಲಿ ಛಾಪು ಮೂಡಿಸಿವೆ. ಅವುಗಳಲ್ಲಿ ಫ್ಲೋರಲ್, ಜೆಮೆಟ್ರಿಕ್ ಪ್ರಿಂಟ್ಸ್ನವು ಸದ್ಯ ಟ್ರೆಂಡ್ನಲ್ಲಿವೆ. ಧರಿಸಿದವರನ್ನು ಚೆಂದಗಾಣಿಸುತ್ತಿವೆ.
ಆಫ್ ಶೋಲ್ಡರ್ ಮ್ಯಾಕ್ಸಿ ಡ್ರೆಸ್
ಎಲ್ಲಾ ವಯಸ್ಸಿನವರು ಧರಿಸಬಹುದಾದ ಮ್ಯಾಕ್ಸಿ ಆಫ್ ಶೋಲ್ಡರ್ ಡ್ರೆಸ್ಗಳು ಲೆಕ್ಕವಿಲ್ಲದಷ್ಟೂ ಬಗೆಯಲ್ಲಿ ಬಿಡುಗಡೆಗೊಂಡಿವೆ. ಅದರಲ್ಲೂ ಜಾರ್ಜೆಟ್ ಹಾಗೂ ಶಿಫಾನ್ ಫ್ಯಾಬ್ರಿಕ್ನವು ಈ ಡಿಸೈನ್ನಲ್ಲಿ ಹೆಚ್ಚು ಪಾಪುಲರ್ ಆಗಿವೆ.
ಆಫ್ ಶೋಲ್ಡರ್ ಡ್ರೆಸ್ ಪ್ರಿಯರಿಗೆ ಟಿಪ್ಸ್
- ನಿಮ್ಮ ಪರ್ಸಾನಾಲಿಟಿಗೆ ತಕ್ಕಂತಿರುವುದನ್ನು ಧರಿಸಿ.
- ಶೋಲ್ಡರ್ ಅಗಲವಾಗಿರುವವರಿಗೆ ಚೆನ್ನಾಗಿ ಕಾಣಿಸುತ್ತದೆ.
- ನೆಕ್ಗೆ ಜಂಕ್ ಅಥವಾ ಫಂಕಿ ಜ್ಯುವೆಲರಿ ಧರಿಸಬಹುದು.