Actor Vishal: ಸಾಯಿ ಧನ್ಶಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟ ವಿಶಾಲ್; ಫೋಟೋಸ್ ನೋಡಿ
ಜನಪ್ರಿಯ ತಮಿಳು ನಟ ವಿಶಾಲ್ (Vishal) ಗುರುವಾರ ಸಹ ನಟಿ ಸಾಯಿ ಧನ್ಸಿಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಭಿಮಾನಿಗಳೆಲ್ಲ ಮದುವೆ ಯಾವಾಗ ಎಂದು ಕೇಳಿ ಕೇಳಿ ಸುಸ್ತಾಗಿದ್ದರು. ಆದರೆ ಇದೀಗ ವಿಶಾಲ್ ಮದುವೆಗೆ ಸಜ್ಜಾಗಿದ್ದಾರೆ.



ಕಾಲಿವುಡ್ ನಟ ವಿಶಾಲ್ ಅವರು ತಮ್ಮ ಗೆಳತಿ ಸಾಯಿ ಧನ್ಶಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ಮನೆಯಲ್ಲಿ ಇಂದು ಡಬಲ್ ಸಂಭ್ರಮ ಒಂದೆಡೆ ನಿಶ್ಚಿತಾರ್ಥ ಸಂಭ್ರಮವಾದರೆ, ವಿಶಾಲ್ ಅವರ ಹುಟ್ಟು ಹಬ್ಬವೂ ಇಂದೇ ಆಗಿದೆ. ಕುಟುಂಬದವ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಅವರ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಇವರಿಬ್ಬರು ಮದುವೆಯಾಗುತ್ತಿರುವ ವಿಚಾರ ಈ ಹಿಂದೆಯೇ ವೇದಿಕೆಯೊಂದರಲ್ಲಿ ಇವ್ಬರೂ ಕನ್ಫರ್ಮ್ ಮಾಡಿದ್ದರು. ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿಶಾಲ್ ಈ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸರಿಯಾಗಿ ನಡೆಯಲೂ ಕಷ್ಟಪಡುತ್ತಿದ್ದರು. ಈಗ ಚೇತರಿಸಿಕೊಂಡು ತಮ್ಮ ಗೆಳತಿಯ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಸಾಯಿ ಧನ್ಶಿಕಾ ಕೂಡ ತಮಿಳಿನ ನಟಿ. ಕಬಾಲಿ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ವಿಶಾಲ್ ಸಾಯಿ ಧನ್ಶಿಕಾ ಜೊತೆಗಿನ ಸಿನಿಮಾದ ಕುರಿತು ಹಂಚಿಕೊಂಡಿದ್ದರು. ನಾನು ಮದುವೆ ಆಗುತ್ತಿದ್ದೇನೆ. ಹುಡುಗಿ ಯಾರು ಅಲ್ಲ. ಹುಡುಗಿ ಹಾಗೂ ಅವರ ತಂದೆ ಕೂಡ ಇಲ್ಲೇ ಇದ್ದಾರೆ. ನಟಿ ಸಾಯಿ ಅವರ ಜೊತೆ ನಾನು ಸಪ್ತಪದಿ ತುಳಿಯಲಿದ್ದೇನೆ ಎಂದು ಹೇಳಿದ್ದರು.

ಈಗ ಇವರಿಬ್ಬರೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ಉಂಗುರ ಬದಲಾಯಿಸಿಕೊಂಡರು. ಮದುವೆ ಯಾವಾಗ ಎಂದು ಇದುವರೆಗೂ ಈ ಜೋಡಿ ರಿವೀಲ್ ಮಾಡಿಲ್ಲ.

ಈ ಹಿಂದೆ ವಿಶಾಲ್ ಅನಿಶಾ ಅಲ್ಲಾ ರೆಡ್ಡಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರಿಬ್ಬರೂ ಹಲವು ವರ್ಷ ರಿಲೇಷನ್ಶಿಪ್ನಲ್ಲಿದ್ದರು. ಆದರೆ ಎಂಗೇಜ್ಮೆಂಟ್ ಆದ ಕೆಲವೇ ದಿನದಲ್ಲಿ ಈ ಜೋಡಿ ಬೇರ್ಪಟ್ಟಿತ್ತು. ಅನಿಷಾ ಅವರು ಇನ್ಸ್ಟಾಗ್ರಾಂನಲ್ಲಿ ವಿಶಾಲ್ ಜೊತೆಗಿನ ಫೋಟೋವನ್ನು ಡಿಲೀಟ್ ಮಾಡಿ ಸಂಬಂಧವನ್ನು ಕೊನೆಗೊಳಿಸಿದ್ದರು.