Wedding Fashion 2025: ಮದುಮಗಳ ವಿಂಟರ್ ವೆಡ್ಡಿಂಗ್ ಫ್ಯಾಷನ್ಗೆ ಸೇರಿದ ಮಾತಾಪಟ್ಟಿ
Wedding Fashion 2025: ಮದುಮಗಳ ಅತ್ಯಾಕರ್ಷಕ ಹೇರ್ಸ್ಟೈಲ್ನಲ್ಲಿ ಇದೀಗ ನಾನಾ ಬಗೆಯ ಸ್ಟೇಟ್ಮೆಂಟ್ ಮಾತಾಪಟ್ಟಿಗಳು ಲಗ್ಗೆ ಇಟ್ಟಿವೆ. ಟ್ರೆಡಿಷನಲ್ ವಿನ್ಯಾಸದವು ಮಾತ್ರವಲ್ಲ, ಡಿಫರೆಂಟ್ ಲುಕ್ ನೀಡುವ ಇವು ಇಂಡೋ-ವೆಸ್ಟರ್ನ್ ಹೆಡ್ಬ್ಯಾಂಡ್ ಶೈಲಿಯವು ಮದುಮಗಳ ಕೇಶವನ್ನು ಸಿಂಗರಿಸುತ್ತಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ಪಿಕ್ಸೆಲ್ -
ಶೀಲಾ ಸಿ ಶೆಟ್ಟಿ
Oct 28, 2025 8:00 AM
ಮದುಮಗಳ ಫ್ಯಾಷನ್ನಲ್ಲಿ ಇದೀಗ ಸ್ಟೇಟ್ಮೆಂಟ್ ಮಾತಾಪಟ್ಟಿಗಳದ್ದೇ ಕಾರುಬಾರು! ಹೌದು, ಟ್ರೆಡಿಷನಲ್ ವಿನ್ಯಾಸದವು ಮಾತ್ರವಲ್ಲ, ಡಿಫರೆಂಟ್ ಲುಕ್ ನೀಡುವ ಇವು ಇಂಡೋ-ವೆಸ್ಟರ್ನ್ ಹೆಡ್ಬ್ಯಾಂಡ್ ಶೈಲಿಯವು ಮದುಮಗಳ ಕೇಶವನ್ನು ಸಿಂಗರಿಸುತ್ತಿವೆ.
ಮದುಮಗಳ ಹೇರ್ಸ್ಟೈಲ್ಗೆ ಮಾತಾಪಟ್ಟಿ
ಮದುಮಗಳ ಟ್ರೆಡಿಷನಲ್ ಹೇರ್ಸ್ಟೈಲ್ಗೆ ಸಾಥ್ ನೀಡುವ ಮಾತಾಪಟ್ಟಿಗಳು, ರಾಣಿ-ಮಹಾರಾಣಿ ಕಾಲದಿಂದಲೂ ಫ್ಯಾಷನ್ನಲ್ಲಿವೆ. ಮೊದಲೆಲ್ಲಾ ಕೇವಲ ಶ್ರೀಮಂತರು, ರಾಣಿ-ಮಹಾರಾಣಿಯರು ಮಾತ್ರ ಬಂಗಾರದ ಮಾತಾ ಪಟ್ಟಿಯನ್ನುಕೂದಲ ಅಲಂಕಾರಕ್ಕಾಗಿ ಧರಿಸುತ್ತಿದ್ದರು. ಬರಬರುತ್ತಾ ಈ ಆಕ್ಸೆಸರೀಸ್ ಮದುವೆಗಳಲ್ಲಿ ಟ್ರೆಡಿಷನಲ್ ಹಾಗೂ ಗ್ರ್ಯಾಂಡ್ ಲುಕ್ ನೀಡುವ ಸಲುವಾಗಿ ಎಂಟ್ರಿ ನೀಡಿತು.
ರಾಯಲ್ ಲುಕ್ಗೆ ಮಾತಾಪಟ್ಟಿ
ವೆಡ್ಡಿಂಗ್ ಫ್ಯಾಷನ್ನಲ್ಲಿ ಅದರಲ್ಲೂ ಹೇರ್ಸ್ಟೈಲ್ ಆಕ್ಸೆಸರೀಸ್ ಪಟ್ಟಿಯಲ್ಲಿ ಇವು ಸೇರಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಈ ಮೂಲ ರೂಪದ ಮಾತಾಪಟ್ಟಿ ಕೊಂಚ ರೂಪ ಬದಲಿಸಿದ್ದು, ನೋಡಲು ಥೇಟ್ ಎಥ್ನಿಕ್ ಲುಕ್ ನೀಡುವ ಹೆಡ್ಬ್ಯಾಂಡ್ನಂತೆ ಕಾಣುತ್ತವೆ. ಮದುವೆ ಮಾತ್ರವಲ್ಲ, ಇತರೇ ಎಥ್ನಿಕ್ ಸಮಾರಂಭಗಳಲ್ಲೂ ಧರಿಸಬಹುದಾದ ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಹೇರ್ಸ್ಟೈಲಿಸ್ಟ್ಗಳು.
ಡಿಫರೆಂಟ್ ಲುಕ್ ನೀಡುವ ಫ್ಯೂಶನ್ ಡಿಸೈನರ್ ಮಾತಾಪಟ್ಟಿ
ಟಿಯಾರಾ ಲುಕ್ ನೀಡುವ ಇಲ್ಲವೇ ಹೆಡ್ ಬ್ಯಾಂಡ್ನಂತೆ ಧರಿಸಬಹುದಾದ ಕ್ರಿಸ್ಟಲ್ ಮಾತಾಪಟ್ಟಿಗಳು, ಕೇವಲ ಹೆಡ್ ಬ್ಯಾಂಡ್ನಂತೆ ಧರಿಸಿ, ಫ್ರೀ ಹೇರ್ಸ್ಟೈಲ್ ಮಾಡಬಹುದಾದ ಮಾತಾ ಪಟ್ಟಿ ಆಕ್ಸೆಸರೀಸ್ಗಳು, ಇದೀಗ ಟ್ರೆಂಡ್ನಲ್ಲಿವೆ. ಇನ್ನು, ಕ್ರಿಸ್ಟಲ್, ನವರತ್ನ, ಪರ್ಲ್, ಬೀಡ್ಸ್, ಗೋಲ್ಡನ್ ಹೀಗೆ ನಾನಾ ಬಗೆಯ ಫ್ಯೂಶನ್ ಡಿಸೈನ್ನವು ಇದೀಗ ಚಾಲ್ತಿಯಲ್ಲಿವೆ. ಇನ್ನು ಮದುವೆಯ ರಿಸೆಪ್ಷನ್ನಲ್ಲಿ ಲೆಹೆಂಗಾ ಹಾಗೂ ಭಾರಿ ಉಡುಪಿನೊಂದಿಗೆ ಧರಿಸಬಹುದಾದ ಇಂಡೋ-ವೆಸ್ಟರ್ನ್ ಶೈಲಿಯವು ಹೆಚ್ಚು ಪ್ರಚಲಿತದಲ್ಲಿವೆ. ಇವು ಯುವರಾಣಿಯ ಲುಕ್ ನೀಡುತ್ತವೆ ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್ಸ್ ಮಂಜು.
ಡಿಸೈನ್ ಮಾತಾಪಟ್ಟಿ ಆಯ್ಕೆ ಹೀಗಿರಲಿ
* ಗ್ರ್ಯಾಂಡ್ ಔಟ್ಫಿಟ್ಗೆ ತಕ್ಕಂತೆ ಆಯ್ಕೆ ಮಾಡಿ.
* ಫಿಟ್ಟಿಂಗ್ ಆಗಿ ತಲೆಗೂದಲ ಮೇಲೆ ಕೂರುವಂತದ್ದನ್ನು ಸೆಲೆಕ್ಟ್ ಮಾಡಿ.
* ಆಯಾ ಉಡುಪಿಗೆ ಮ್ಯಾಚ್ ಆಗುತ್ತದೆಯೇ ಎಂಬುದನ್ನು ನೋಡಿಕೊಳ್ಳಿ.