Wedding Fashion 2025: ವೆಡ್ಡಿಂಗ್ ಸಮಾರಂಭಗಳಲ್ಲಿ ರಾಯಲ್ ಲುಕ್ಗೆ ಸೈ ಎಂದ ಫ್ಯಾಷನ್ ಪ್ರಿಯರು
Wedding Fashion 2025: ಮದುವೆ ಮನೆಗಳಲ್ಲಿನ ನಾರ್ಮಲ್ ಲುಕ್ನಿಂದ ಫ್ಯಾಷನ್ ಪ್ರಿಯರು ಬೋರಾದಂತಿದೆ. ಸೋ, ಗ್ರ್ಯಾಂಡ್ ಅಪಿಯರೆನ್ಸ್ ನೀಡುವ ರಾಯಲ್ ಲುಕ್ ಅಥವಾ ಶಾಹಿಲುಕ್ನತ್ತ ವಾಲುತ್ತಿದ್ದಾರೆ. ಹಾಗಾದಲ್ಲಿ ರಾಯಲ್ ಲುಕ್ ಸ್ಟೈಲಿಂಗ್ ಹೇಗೆ? ಈ ಕುರಿತಂತೆ ಇಲ್ಲಿದೆ ವಿವರ.
ಚಿತ್ರಕೃಪೆ: ಪಿಕ್ಸೆಲ್ -
ಶೀಲಾ ಸಿ ಶೆಟ್ಟಿ
Oct 26, 2025 8:00 AM
ಮದುವೆ ಮನೆಗಳಲ್ಲಿ ಇದೀಗ ರಾಯಲ್ ಲುಕ್ ಟ್ರೆಂಡಿಯಾಗಿದೆ. ಹೌದು, ರಾಯಲ್ ಲುಕ್ ಇಂದು ಬಾಲಿವುಡ್ನಲ್ಲಿ ಮಾತ್ರವಲ್ಲ, ಸಾಮಾನ್ಯ ಮದುವೆ ಮನೆಗಳಲ್ಲೂ ಕಾಮನ್ ಆಗುತ್ತಿದೆ. ಇದುವರೆಗೂ ವೆಡ್ಡಿಂಗ್ ಫ್ಯಾಷನ್ನಲ್ಲಿ ಬ್ರೈಡಲ್, ದೇಸಿ ಸ್ಟೈಲ್ ಸ್ಟೇಟ್ಮೆಂಟ್ಗಳು ಎಲ್ಲರನ್ನು ಆಕರ್ಷಿಸಿತ್ತು. ಇದೀಗ ರಾಯಲ್ ಲುಕ್ ತನ್ನತ್ತ ಎಲ್ಲರನ್ನೂ ಬರಸೆಳೆಯುತ್ತಿದೆ.
ರಾಯಲ್ ಲುಕ್ ಮೀರಿಸುವ ಶಾಹಿ ಲುಕ್
ರಾಯಲ್ ಲುಕ್ಗಿಂತ ಒಂದು ಹೆಜ್ಜೆ ಮುಂದಿರುವ ಶಾಹಿ ಲುಕ್ ಕೂಡ ಇಂದು ಟ್ರೆಂಡಿಯಾಗಿದೆ. ಈ ಲುಕ್ನಲ್ಲಿ ಹೆಚ್ಚಾಗಿ ವರ್ಣಗಳನ್ನು ಆಯ್ಕೆ ಮಾಡುವಾಗ ಆದಷ್ಟೂ ಮರೂನ್, ಗೋಲ್ಡ್, ಸಿಲ್ವರ್, ಗ್ರೀನ್, ಬೇಬಿ ಬ್ಲ್ಯೂ, ಪಿಂಕ್ ಹಾಗೂ ಕ್ರೀಮ್ ಮತ್ತು ಗೋಲ್ಡ್ ಶಾಹಿ ಲುಕ್ಗೆ ಸಾಥ್ ನೀಡುವ ಬಣ್ಣಗಳನ್ನು ಚೂಸ್ ಮಾಡಬೇಕು. ಫ್ಯಾಬ್ರಿಕ್ ಆದಷ್ಟು ಸಿಲ್ಕಿ ಹಾಗೂ ಕ್ರೇಪ್ನ ಬಟ್ಟೆಯದ್ದಾಗಿರಬೇಕು. ಆಗಷ್ಟೇ ಗ್ರ್ಯಾಂಡ್ ಲುಕ್ ನೀಡಬಹುದು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ಸ್.
ರಾಯಲ್ ಲುಕ್ಗೆ ಜ್ಯುವೆಲರಿ ಸಿಂಗಾರ
ಫ್ಯಾಷನಿಸ್ಟಾ ಜಾನ್ ಹೇಳುವಂತೆ, ಈ ಲುಕ್ಗೆ ಧರಿಸುವ ಜ್ಯುವೆಲರಿಗಳು ಮನಮೋಹಕವಾಗಿರಬೇಕು. ಆದಷ್ಟು ಧರಿಸುವ ಹೆವ್ವಿ ಡಿಸೈನ್ನ ಜಾಕೆಟ್ ಗಾಗ್ರ, ಲೆಹೆಂಗಾ ಇಲ್ಲವೇ ಸೆಲ್ವಾರ್ ಶೈಲಿಯ ಗಾಗ್ರ ಅಥವಾ ಎಥ್ನಿಕ್ ಗೌನ್ ಹಾಗೂ ಸೀರೆಗೆ ಹೊಂದುವಂತೆ ಇರಬೇಕು. ಕುಂದನ್, ಕಲಾಂಕಾರಿ ಹಾಗೂ ಮೀನಾಕಾರಿ ವಿನ್ಯಾಸದ ಜ್ಯುವೆಲರಿಗಳು ಈ ಲುಕ್ಗೆ ಪರ್ಫೆಕ್ಟ್ ಮ್ಯಾಚ್ ಎನ್ನಬಹುದು. ಹಣೆಗೆ ಡಿಸೈನರ್ ಬಿಂದಿ, ಮಾಂಗ್ ಟೀಕಾ, ಮಾಟಿ, ರಾಯಲ್ ಲುಕ್ಗೆ ಮೆರುಗನ್ನು ನೀಡುತ್ತವೆ ಎನ್ನುತ್ತಾರೆ ಮಾಡೆಲ್ ಡೀನಾ.
ಪರ್ಸಾನಾಲಿಟಿಗೆ ತಕ್ಕಂತೆ ರಾಯಲ್ ಲುಕ್
ಅಂದ ಹಾಗೆ, ಈ ಲುಕ್ ಫಾಲೋ ಮಾಡುವುದು ಸುಲಭವಲ್ಲ. ಅದಕ್ಕೆ ತಕ್ಕ ಪರ್ಸನಾಲಿಟಿ ಇರಬೇಕು. ತೆಳ್ಳಗೆ ಉದ್ದಗಿರುವವರಿಗೆ ರಾಯಲ್ ಲುಕ್ ಚೆನ್ನಾಗಿ ಒಪ್ಪುತ್ತದೆ. ತೀರಾ ಕುಳ್ಳಗಿರುವವರಿಗೆ ಈ ಲುಕ್ ಒಪ್ಪದು ಎಂಬುದು ಸ್ಟೈಲಿಸ್ಟ್ಗಳ ಅಭಿಪ್ರಾಯ.
ರಾಯಲ್ ಲುಕ್ಗೆ ಸಿಂಪಲ್ ಟಿಪ್ಸ್
- ಸೆಲೆಬ್ರಿಟಿಯ ರಾಯಲ್ ಲುಕ್ ಅನ್ನು ಫಾಲೋ ಮಾಡುವಾಗ ಸ್ವಂತಿಕೆಯಿರಲಿ.
- ಮೇಕಪ್ ಕೂಡ ರಾಯಲ್ ಲುಕ್ಗೆ ಸೂಟ್ ಆಗಬೇಕು.
- ಹೇರ್ಸ್ಟೈಲ್ ರಾಯಲ್ ಲುಕ್ಗೆ ಹೊಂದುವಂತಿರಲಿ.
- ಫಂಕಿ ಹೇರ್ಸ್ಟೈಲ್ ಬೇಡ.