Wedding Fashion 2026: ಮದುಮಗಳ ಫ್ಯಾಷನ್ನಲ್ಲಿ ಬಿಂದಿಗಿರಲಿ ಅಗ್ರಸ್ಥಾನ
ವೆಡ್ಡಿಂಗ್ ಫ್ಯಾಷನ್ನಲ್ಲಿ ವಧುವಿನ ಹಣೆಯ ಬಿಂದಿಗೆ ಸದಾ ಅಗ್ರಸ್ಥಾನವಿರಲಿ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ಗಳು. ನೋಡಲು ಆಕರ್ಷಕವಾಗಿ ಕಾಣುವ ಈ ಬಿಂದಿಯ ಸ್ಟೈಲಿಂಗ್ ಹೇಗೆ? ಯಾವ್ಯಾವ ಡಿಸೈನ್ನವು ಸಾಥ್ ನೀಡುತ್ತವೆ? ಎಂಬುದರ ಬಗ್ಗೆ ಇಲ್ಲಿ ವಿವರಿಸಿದ್ದಾರೆ.
ಚಿತ್ರಕೃಪೆ: ಪಿಕ್ಸೆಲ್ -
ವೆಡ್ಡಿಂಗ್ ಫ್ಯಾಷನ್ನಲ್ಲಿ ವಧುವಿನ ಹಣೆಯ ಬಿಂದಿಗೆ ಅಗ್ರಸ್ಥಾನವಿರಲಿ ಎನ್ನುವ ಮೇಕಪ್ ಆರ್ಟಿಸ್ಟ್ಗಳು ವಧುವಿನ ಹಣೆಯ ಸಿಂಗರಿಸುವ ಬಿಂದಿ ನೋಡಲು ಆಕರ್ಷಕವಾಗಿ ಕಾಣಬೇಕು. ಅಷ್ಟು ಮಾತ್ರವಲ್ಲ, ಧರಿಸಿದ ಸೀರೆ ಹಾಗೂ ಉಡುಪಿಗೂ ಮ್ಯಾಚ್ ಆಗಬೇಕು ಎಂಬುದರ ಬಗ್ಗೆ ಒಂದಿಷ್ಟು ಐಡಿಯಾ ನೀಡಿದ್ದಾರೆ.
ಹಣೆಗೆ ತಕ್ಕಂತೆ ಅಗಲವಾಗಿರಲಿ ಬಿಂದಿ
ವಧುವಿನ ಹಣೆಯ ಅಗಲಕ್ಕೆ ಅನುಗುಣವಾಗಿ ಬಿಂದಿ ಹಚ್ಚಿಕೊಳ್ಳುವುದು ಸೂಕ್ತ. ಉದಾಹರಣೆಗೆ., ಚಿಕ್ಕ ಹಣೆಗೆ ತುಂಬಾ ಅಗಲವಾದ ಬಿಂದಿ ಸೂಟ್ ಆಗದು. ನೋಡಲು ಬಿಂದಿ ಮಾತ್ರ ಕಾಣುತ್ತದೆ. ಹಾಗೆಯೇ ಅಗಲವಾದ ಹಣೆಗೆ ಚುಕ್ಕಿಯಂತಹ ಬಿಂದಿ ನಾಟ್ ಓಕೆ. ಸೋ ಹಣೆಗೆ ತಕ್ಕಂತೆ ಬಿಂದಿ ಆಯ್ಕೆ ಮಾಡುವುದು ಸೂಕ್ತ.
ಮದುವೆಯ ಸೀರೆ ಹಾಗೂ ಉಡುಪಿಗೆ ತಕ್ಕಂತಿರಲಿ
ಮದುವೆಯಲ್ಲಿ ವಧುವಿನ ಸೀರೆ ಹಾಗೂ ಉಡುಪುಗಳನ್ನು ಪರಿಗಣನೆಗೆ ತೆಗೆದುಕೊಂಡು ಬಿಂದಿ ಆಯ್ಕೆ ಮಾಡುವುದು ಸೂಕ್ತ. ಸೀರೆ ಡಿಸೈನರ್ ಬಿಂದಿಗಿಂತ ಸಾದಾ ಬಿಂದಿ ಚೆನ್ನಾಗಿ ಕಾಣುತ್ತದೆ. ಇನ್ನು ಲೆಹೆಂಗಾಗಳಿಗೆ ಡಿಸೈನರ್ ಬಿಂದಿ ಸೂಕ್ತ.
ಔಟ್ಫಿಟ್ ಮ್ಯಾಚಿಂಗ್ ಮಾಡಿ ನೋಡಿ
ಮದುವೆಯಲ್ಲಿ ವಧು ಬಹುತೇಕ ಡಾರ್ಕ್ ಶೇಡ್ನ ಸೀರೆ ಧರಿಸುವುದು ಹೆಚ್ಚು. ಅದಕ್ಕೆ ಹೊಂದುವಂತದ್ದನ್ನು ಧರಿಸಬಹುದು. ಕಾಂಟ್ರಾಸ್ಟ್ ವರ್ಣದ ಬಿಂದಿ ಇರಿಸಬಹುದು. ಹಾಗೆಂದು ಬಿಳಿ ವರ್ಣದ ಆಯ್ಕೆ ಬೇಡ. ಫಂಕಿ ಲುಕ್ ನೀಡುತ್ತದೆ.
ಅತ್ಯಾಕರ್ಷಕ ಸಾದಾ ಬಂಗಾಲಿ ಬಿಂದಿ
ಟ್ರೆಡಿಷನಲ್ ಲುಕ್ ನೀಡಲು ವಧು ತಮಗಿಷ್ಟವಾದ ಬಂಗಾಲಿ ಬಿಂದಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನೋಡಲು ಲಕ್ಷಣವಾಗಿಯೂ ಕಾಣುತ್ತದೆ. ಮದುವೆಯ ಫೋಟೋಗಳಲ್ಲೂ ಚೆನ್ನಾಗಿ ಕಾಣುತ್ತದೆ.
ಮದುವೆಯಾಗುವ ವಧುವಿಗೆ ಕೆಂಪು ಬಿಂದಿ
ವಧುವಿನ ಉಡುಪಿಗೆ ತಕ್ಕಂತೆ ಬಿಂದಿಗಳನ್ನು ಬಳಸಬಹುದಾದರೂ ಮುಖ್ಯ ಕಾರ್ಯಕ್ರಮಕ್ಕೆ ಮಾತ್ರ ಆದಷ್ಟೂ ಕೆಂಪು, ಮರೂನ್ ವರ್ಣದ ಬಿಂದಿಗಳನ್ನು ಬಳಸಲಾಗುತ್ತದೆ. ಇದು ನಮ್ಮ ಸಂಪ್ರದಾಯ. ಕಪ್ಪು ಬಿಂದಿಯನ್ನು ಮದುವೆ ಸಂದರ್ಭದಲ್ಲಿ ಬಳಸುವುದಿಲ್ಲ. ಕೆಂಪು ಬಿಂದಿ ಶುಭ ಶಕುನವೆನ್ನಲಾಗುತ್ತದೆ.